ವಿಶ್ವ ಪರಿಸರ ದಿನ

ದಿನಾಂಕ ೦೫.೦೬.೨೦೧೨ ರಂದು ವಿಶ್ವಪರಿಸರ ದಿನಾಚರಣೆಯ ಅಂಗವಾಗಿ ವಿವೇಕಾನಂದ ಕನ್ನಡ ಮಾಧ್ಯಮ ಶಾಲೆಯ ಸ್ಕೌಟ್ಸ್ – ಗೈಡ್ಸ್ ವಿದ್ಯಾರ್ಥಿಗಳು ಸ್ಕೌಟ್ಸ್ ಶಿಕ್ಷಕ ಶ್ರೀ ವಿಶ್ವನಾಥ ಮೂಡೂರು ಇವರ ನಿರ್ದೇಶನದಂತೆ ಮೊಟ್ಟೆತ್ತಡ್ಕದ ಪ್ರಗತಿಪರ ಕೃಷಿಕರಾದ ಉಪೇಂದ್ರ ಬಲ್ಯಾಯ ರವರ ಸ್ಥಳದಲ್ಲಿ ಧನ್ವಂತರಿ  ಆರ್ಯುವೇದಿಕ್ ಗಿಡಗಳ ವನವನ್ನು ನಿರ್ಮಿಸಿದರು.

ದಿನೇ ದಿನೇ ಪರಿಸರ ವಿನಾಶವಾಗುವ ಈ ಸಂದರ್ಭದಲ್ಲಿ ಆರೋಗ್ಯದಾಯಕವಾದ ಅಂಶಗಳನ್ನು ಮುಂದಿಟ್ಟುಕೊಂಡು ವಿಶ್ವಪರಿಸರ ದಿನಾಚರಣೆಗೆ ಅರ್ಥಪೂರ್ಣವಾದ ಮಹತ್ವವನ್ನು ಕೊಡಬೇಕೆಂಬ ನಿಟ್ಟಿನಲ್ಲಿ, ವಿದ್ಯಾರ್ಥಿಗಳಿಗೆ ಎಳವೆಯಲ್ಲಿಯೇ ಇಂತಹ ವಿಷಯಗಳನ್ನು ತಿಳಿದುಕೊಳ್ಳಬೇಕು ಎಂಬ ಅಂಶವನ್ನು ಮನದಟ್ಟುಮಾಡುವಂತೆ ಈ ಕಾರ್ಯಕ್ರಮವನ್ನು ಯಶಸ್ವಿಯಾಗಿ ಕೈಗೊಳ್ಳಲಾಯಿತು.

ಕಾರ್ಯಕ್ರಮದಲ್ಲಿ ಶ್ರೀ ಉಪೇಂದ್ರ ಪಾಣಾಜೆಯವರು ಪರಿಸರ ಮತ್ತು ಮಹತ್ವದ ಬಗ್ಗೆ ಮಾತನಾಡಿ, ವಿದ್ಯಾರ್ಥಿಗಳ ಆಸಕ್ತಿಗೆ ಮೆಚ್ಚುಗೆ ವ್ಯಕ್ತ ಪಡಿಸಿದರು. ಈ ಸಂದರ್ಭದಲ್ಲಿ ಮುಖ್ಯಶಿಕ್ಷಕಿಯಾದ ಶ್ರೀಮತಿ ಆಶಾ ಬೆಳ್ಳಾರೆ ಉಪಸ್ಥಿತರಿದ್ದು, ಗೈಡ್ಸ್ ಶಿಕ್ಷಕಿ ಶ್ರೀಮತಿ ಹರಿಣಾಕ್ಷಿ ರವರು ಸಹಕರಿಸಿದರು. ಶಿಕ್ಷಕ ಶ್ರೀ ವಿಶ್ವನಾಥ ಮೂಡೂರು ಸ್ವಾಗತಿಸಿ, ವಂದಿಸಿದರು.

Highslide for Wordpress Plugin