ಯೋಗಾಸನ ಸ್ಪರ್ಧೆಯಲ್ಲಿ ಜಿಲ್ಲಾಮಟ್ಟಕ್ಕೆ

ಯೋಗಾಸನ ಸ್ಪರ್ಧೆಯಲ್ಲಿ ಜಿಲ್ಲಾಮಟ್ಟಕ್ಕೆ

Friday, August 30th, 2013

ಸಾರ್ವಜನಿಕ ಶಿಕ್ಷಣ ಇಲಾಖೆ ಇದರ ಆಶ್ರಯದಲ್ಲಿ ತಿಂಗಳಾಡಿಯಲ್ಲಿ ನಡೆದ ಯೋಗಾಸನ ಸ್ಪರ್ಧೆಯಲ್ಲಿ ೧೭ರ ವಯೋಮಾನದ ಸ್ಪರ್ಧೆಯಲ್ಲಿ ಸುಮ ಪ್ರಥಮ, ಗ್ರೀಷ್ಮಾ ಪಂಚಮ ಹಾಗೂ ವಸುಧಾ ಪ್ರಥಮ, ಬಾಲಕರ ವಿಭಾಗದಲ್ಲಿ ಪೃಥ್ವಿನಾರಾಯಣ ಭಟ್ ಎಂ.ಜಿ ಪ್ರಥಮ ಸ್ಥಾನ ಪಡೆದು ದಿನಾಂಕ 12.09.2013ರಂದು ಸುಬ್ರಮಣ್ಯದಲ್ಲಿ ನಡೆಯಲಿರುವ ಜಿಲ್ಲಾಮಟ್ಟದ ಯೋಗಾಸ ಸ್ಪರ್ಧೆಯಲ್ಲಿ ಭಾಗವಹಿಸಲು ಆಯ್ಕೆಯಾಗಿದ್ದಾರೆ.

ವಾಲಿಬಾಲ್ ಪ್ರಥಮ

ವಾಲಿಬಾಲ್ ಪ್ರಥಮ

Friday, August 30th, 2013

ವಾಲಿಬಾಲ್ ಅಸೋಸಿಯೇಶನ್ ಪುತ್ತೂರು ಮತ್ತು ವಿದ್ಯಾರಶ್ಮಿ ಪ್ರೌಢಶಾಲೆ ಸವಣೂರು ಇವರ ವತಿಯಿಂದ ನಡೆದ ಬಾಲಕಿಯರ ವಾಲಿಬಾಲ್ ಪಂದ್ಯಾಟದಲ್ಲಿ ವಿವೇಕಾನಂದ ಕನ್ನಡ ಮಾಧ್ಯಮ ಶಾಲೆಯ ವಿದ್ಯಾರ್ಥಿನಿಯರು ಪ್ರಥಮ ಸ್ಥಾನ ಪಡೆದಿರುತ್ತಾರೆ. ಇವರಿಗೆ ಶಾಲಾ ದೈಹಿಕ ಶಿಕ್ಷಕ ಶ್ರೀ ದಾಮೋದರ್ ತರಬೇತಿ ನೀಡಿರುತ್ತಾರೆ.

ರಾಜ್ಯಮಟ್ಟಕ್ಕೆ  ಆಯ್ಕೆ

ರಾಜ್ಯಮಟ್ಟಕ್ಕೆ ಆಯ್ಕೆ

Friday, August 30th, 2013

ರಾಮಕುಂಜ ಪ್ರೌಢಶಾಲೆ ಹಾಗೂ ವಿದ್ಯಾಭಾರತಿ ಕರ್ನಾಟಕ ಇವರ ಜಂಟಿ ಆಶ್ರಯದಲ್ಲಿ ನಡೆದ ಜಿಲ್ಲಾಮಟ್ಟದ ಅಂತರ್ ಶಾಲಾ ಅತ್ಲೆಟಿಕ್ಸ್‌ನಲ್ಲಿ ವಿವೇಕಾನಂದ ಕನ್ನಡ ಮಾಧ್ಯಮ ಶಾಲೆಯ ಬಾಲವರ್ಗದ ಹುಡುಗಿಯರು, ಕಿಶೋರವರ್ಗದ ಹುಡುಗರು, ಹುಡುಗಿಯರು ವಿವಿಧ ಸ್ಪರ್ಧೆಗಳಲ್ಲಿ ಭಾಗವಹಿಸಿ ಸುಮಾರು 25 ವಿದ್ಯಾರ್ಥಿಗಳು ರಾಜ್ಯಮಟ್ಟದ ಆಟೋಟ ಸ್ಪರ್ಧೆಗಳಲ್ಲಿ ಭಾಗವಹಿಸಲು ಆಯ್ಕೆಯಾಗಿದ್ದಾರೆ.

ಶೈಕ್ಷಣಿಕ ಸಹಮಿಲನ 2013-14

ಶೈಕ್ಷಣಿಕ ಸಹಮಿಲನ 2013-14

Monday, August 26th, 2013

ಪುತ್ತೂರು: ಜುಲೈ 13. ವಿದ್ಯಾಭಾರತಿ ಕರ್ನಾಟಕ ದಕ್ಷಿಣ ಕನ್ನಡ ಜಿಲ್ಲಾ ಶೈಕ್ಷಣಿಕ ಸಹಮಿಲನ 2013-14 ಒಂದು ದಿನದ ಕಾರ್ಯಾಗಾರ ‘ಯಾದವಶ್ರೀ ಸಭಾಂಗಣ’ ವಿವೇಕಾನಂದ ವಿದ್ಯಾಸಂಸ್ಥೆ, ತೆಂಕಿಲದಲ್ಲಿ ನಡೆಯಿತು. ಶ್ರೀ ಶಶಿಧರ್, ಕ್ಷೇತ್ರ ಶಿಕ್ಷಣಾಧಿಕಾರಿಗಳು, ಪುತ್ತೂರು ಉದ್ಘಾಟನಾ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡುತ್ತಾ ಆಧ್ಯಾತ್ಮ ಹಾಗೂ ಆದರ್ಶ ತತ್ವಗಳಿಂದ ಪ್ರೇರಿತವಾದ ಶಿಕ್ಷಣವು ವಿದ್ಯಾಭಾರತಿ ಸಂಸ್ಥೆಗಳಿಂದ ದೊರೆಯುತ್ತಿರುವುದು ಶ್ಲಾಘನೀಯ ಎಂದರು. ಆದರ್ಶಗಳು ವಿಚಾರಗಳು ಎಂದೂ ಸಾಯುವುದಿಲ್ಲ ಕನಸು ಕಾಣಬೇಕು. ಕನಸು ಕಂಡಾಗ ವಿಚಾರಗಳು ಬರುತ್ತವೆ. ವಿಚಾರಗಳು ತಿಳಿದಾಗ ವ್ಯವಹಾರಗಳು ಉತ್ತಮವಾಗುತ್ತವೆ. […]

ನೇತ್ರಾವತಿ ನದಿ ತಿರುವು - ಒಂದು ಚಿಂತನೆ

ನೇತ್ರಾವತಿ ನದಿ ತಿರುವು – ಒಂದು ಚಿಂತನೆ

Thursday, August 1st, 2013

ವಿವೇಕಾನಂದ ಕನ್ನಡ ಮಾಧ್ಯಮ ಶಾಲೆ ತೆಂಕಿಲ ಇಲ್ಲಿ  ದಿನಾಂಕ  27-07-2013ರಂದು ವಿವೇಕಾನಂದ ಪದವಿ ಕಾಲೇಜಿನ ಸಂಸ್ಕೃತ ಉಪನ್ಯಾಸಕರಾದ  ಡಾ. ಶ್ರೀಶ ಕುಮಾರ್‌ರವರು ನೇತ್ರಾವತಿ ನದಿ ತಿರುವು ಯೋಜನೆಯ ಬಗ್ಗೆ  ಮಾತನಾಡಿ ಅದರ ಒಳಿತು ಕೆಡುಕುಗಳನ್ನು ಕೆಲವೊಂದು ಸಾಕ್ಷ್ಯ ಚಿತ್ರಗಳನ್ನು ತೋರಿಸುವ ಮೂಲಕ ಪರಿಚಯ ಮಾಡಿದರು. ಪರಿಸರ ಪ್ರೇಮಿಗಳಾದ ಸಮಾಜ ಬಾಂಧವರು ಈ ಯೋಜನೆಯು ಜಾರಿಗೊಳ್ಳದಂತೆ ಜಾಗೃತರಾಗಬೇಕೆಂದು ಕರೆ ಇತ್ತರು. ಈ ಸಂದರ್ಭದಲ್ಲಿ ವಿದ್ಯಾರ್ಥಿಗಳು, ಶಿಕ್ಷಕರು, ಮುಖ್ಯ ಗುರುಗಳು ಉಪಸ್ಥಿತರಿದ್ದರು. ಶಿಕ್ಷಕಿ ಶ್ರೀಮತಿ ಸ್ವಾತಿಯವರು ಕಾರ್ಯಕ್ರಮವನ್ನು ನಿರೂಪಿಸಿದರು.

ಮಕ್ಕಳನ್ನು ರಂಜಿಸಿದ ಪೆಪ್ಪರಮೆಂಟ್ ಸುಬ್ಬಜ್ಜ

ಮಕ್ಕಳನ್ನು ರಂಜಿಸಿದ ಪೆಪ್ಪರಮೆಂಟ್ ಸುಬ್ಬಜ್ಜ

Thursday, August 1st, 2013

ದಿನಾಂಕ  20-07-2013ರಂದು ವಿವೇಕಾನಂದ ಕನ್ನಡ ಮಾಧ್ಯಮ ಶಾಲೆ, ತೆಂಕಿಲ ಇಲ್ಲಿ ನಡೆಯುವ ಸಾಂಸ್ಕೃತಿಕ  ಚಟುವಟಿಕೆಗಳ ಅಂಗವಾಗಿ ಹಿರಿಯ ಶಿಶು ಸಾಹಿತಿ ಶ್ರೀ ಬೆಂಡರವಾಡಿ  ಸುಬ್ರಹ್ಮಣ್ಯ ಭಟ್‌ರವರು  ಪುಟಾಣಿ ಮಕ್ಕಳಿಗೆ ಕಥೆ, ಹಾಡುಗಳನ್ನು ಹೇಳುವುದರ ಮೂಲಕ ಕುಣಿದು ಕುಪ್ಪಳಿಸುವಂತೆ ಮಾಡಿದರು. ಈ ಸಂದರ್ಭದಲ್ಲಿ ಶಾಲಾ ಹಿರಿಯ ಶಿಕ್ಷಕಿ ಶ್ರೀಮತಿ ದುರ್ಗಾದೇವಿಯವರು ಉಪಸ್ಥಿತರಿದ್ದರು.

ಕಾರ್ಗಿಲ್ ವಿಜಯೋತ್ಸವ ಮಾಹಿತಿ

ಕಾರ್ಗಿಲ್ ವಿಜಯೋತ್ಸವ ಮಾಹಿತಿ

Thursday, August 1st, 2013

ದಿನಾಂಕ 27-07-2013ರಂದು  ವಿವೇಕಾನಂದ ಕನ್ನಡ ಮಾಧ್ಯಮ ಶಾಲೆ ತೆಂಕಿಲ ಇಲ್ಲಿ  ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ಕಾರ್ಗಿಲ್ ವಿಜಯೋತ್ಸವ  ದಿನಾಚರಣೆಯ ಕುರಿತು ವಿವೇಕಾನಂದ ಪದವಿ ಪೂರ್ವ ಕಾಲೇಜಿನ ಉಪನ್ಯಾಸಕರಾದ ಶ್ರೀ ರೋಹಿಣಾಕ್ಷ ಶೀರ್ಲಾಲುರವರು, ಈ ದಿನಾಚರಣೆಯ ಮಹತ್ವ, ದೇಶಕ್ಕಾಗಿ ಹೋರಾಡಿದ ವೀರ ಯೋಧರ ತ್ಯಾಗ ಬಲಿದಾನಗಳ ಕುರಿತು ಹೃದಯಸ್ಪರ್ಶಿ ಮಾತುಗಳನ್ನಾಡುತ್ತಾ ನಮ್ಮ ಯುವಕರಿಗೆ ಸೇನೆಗೆ ಸೇರಲಿರುವ ಅವಕಾಶಗಳ ಕುರಿತು ಮಾಹಿತಿಯನ್ನು ನೀಡಿದರು. ಶಾಲಾ ಮುಖ್ಯಗುರುಗಳು, ಶಿಕ್ಷಕರು ಉಪಸ್ಥಿತರಿದ್ದರು.

ರಾಜ್ಯ ದಕ್ಷಿಣ ಕ್ಷೇತ್ರಿಯ ಮಟ್ಟಕ್ಕೆ ಆಯ್ಕೆ

ರಾಜ್ಯ ದಕ್ಷಿಣ ಕ್ಷೇತ್ರಿಯ ಮಟ್ಟಕ್ಕೆ ಆಯ್ಕೆ

Wednesday, July 31st, 2013

ದಿನಾಂಕ 24-07-2013ರಂದು ವಿದ್ಯಾಭಾರತಿ ಕರ್ನಾಟಕ ಮತ್ತು ಶುಭೋದಯ ಪ್ರೌಢಶಾಲೆ ಮೂಡುಶೆಡ್ಡೆಯಲ್ಲಿ ನಡೆದ 17 ವರುಷದ ಕಿಶೋರವರ್ಗದ ಬಾಲಕಿಯರ ವಿಭಾಗದ  ಯೋಗಾಸನ ಸ್ಪರ್ಧೆಯಲ್ಲಿ ಭಾಗವಹಿಸಿದ ವಿವೇಕಾನಂದ ಕನ್ನಡಮಾಧ್ಯಮ ಶಾಲೆಯ ವಿದ್ಯಾರ್ಥಿನಿಯರು ಪ್ರಥಮ ಸ್ಥಾನ ಪಡೆದು ರಾಜ್ಯಮಟ್ಟಕ್ಕೆ ಆಯ್ಕೆಯಾಗಿದ್ದು ಇವರಲ್ಲಿ ಸುಮಾ ರಾಜ್ಯಮಟ್ಟದಿಂದ ದಕ್ಷಿಣಕ್ಷೇತ್ರಿಯ ಮಟ್ಟಕ್ಕೆ ಆಯ್ಕೆಯಾಗಿದ್ದಾಳೆ. ಕಿಶೋರವರ್ಗದ ಬಾಲಕರ ವಿಭಾಗದಲ್ಲಿ  ಪೃಥ್ವಿನಾರಾಯಣ ಮತ್ತು ರಾಕೇಶ್ ರಾಜ್ಯಮಟ್ಟದಿಂದ ದಕ್ಷಿಣ ಕ್ಷೇತ್ರಿಯ ಮಟ್ಟಕ್ಕೆ ಆಯ್ಕೆಯಾಗಿ ಆಗಸ್ಟ್ 10,11 ಕ್ಕೆ ತಮಿಳುನಾಡಿನ ಕಾಂಚಿಪುರಂನಲ್ಲಿ ನಡೆಯುವ ಯೋಗಾಸನ ಸ್ಪರ್ಧೆಯಲ್ಲಿ ಭಾಗವಹಿಸಲಿದ್ದಾರೆ.  

ಕಾರ್ಗಿಲ್ ವಿಜಯೋತ್ಸವ ಆಚರಣೆ

ಕಾರ್ಗಿಲ್ ವಿಜಯೋತ್ಸವ ಆಚರಣೆ

Friday, July 26th, 2013

ದಿನಾಂಕ 26.07.2013ರಂದು ವಿವೇಕಾನಂದ ಕನ್ನಡ ಮಾಧ್ಯಮ ಶಾಲೆ, ತೆಂಕಿಲ ಪುತ್ತೂರು ಇಲ್ಲಿ ‘ಕಾರ್ಗಿಲ್ ವಿಜಯೋತ್ಸವ ಆಚರಣೆ’ ನಡೆಯಿತು.ಈ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳಿಗೆ ಕಾರ್ಗಿಲ್‌ನ ಯುದ್ಧದ ಬಗೆಗೆಗಿನ ಮಹತ್ವವನ್ನು ಮತ್ತು ದೇಶ ಭಕ್ತರನ್ನು ನೆನಪಿಸುವ ಸ್ವಾರಸ್ಯಕರ ವಿಷಯಗಳನ್ನು ಮಕ್ಕಳಿಗೆ ಮನಮುಟ್ಟುವಂತೆ ವಿವೇಕಾನಂದ ಆಂಗ್ಲಮಾಧ್ಯಮ ಶಾಲೆಯ ಶಿಕ್ಷಕರಾದ ಶ್ರೀ ರಾಜೇಶ್ ನೆಲ್ಲಿತ್ತಡ್ಕ ಇವರು ತಿಳಿಸಿದರು.  ನಂತರ ವಿದ್ಯಾರ್ಥಿಗಳಿಗೆ ಕಾರ್ಗಿಲ್ ವಿಜಯೋತ್ಸವದ ಸಾಕ್ಷ್ಯ ಚಿತ್ರಗಳನ್ನು ತೋರಿಸಲಾಯಿತು. ಈ ಕಾರ್ಯಕ್ರಮದ ಸ್ವಾಗತವನ್ನು ಶಿಕ್ಷಕರಾದ ಶ್ರೀ ಚಂದ್ರಶೇಖರ ಹಾಗೂ ವಂದನಾರ್ಪಣೆಯನ್ನು ಶ್ರೀ ರಾಜೇಶ್ ಪಿ.ಬಿ ರವರು […]

ರಾಜ್ಯಮಟ್ಟಕ್ಕೆ ಆಯ್ಕೆ

ರಾಜ್ಯಮಟ್ಟಕ್ಕೆ ಆಯ್ಕೆ

Friday, July 26th, 2013

ವಿದ್ಯಾಭಾರತಿ ಕರ್ನಾಟಕ ಹಾಗೂ ಶಾರದಾ ವಿದ್ಯಾನಿಕೇತನ ತಲಪಾಡಿ, ಮಂಗಳೂರು ಇವರ ಜಂಟಿ ಆಶ್ರಯದಲ್ಲಿ ದಿನಾಂಕ 22.0.2013 ರಂದು ಶಾರದಾ ವಿದ್ಯಾನಿಕೇತನ ತಲಪಾಡಿ ಮಂಗಳೂರು ಇಲ್ಲಿ ನಡೆದ ಜಿಲ್ಲಾಮಟ್ಟದ 14ರ ವಯೋಮಾನದ ಬಾಲಕಿಯರ ಕಿಶೋರವರ್ಗದ ಖೋ-ಖೋದಲ್ಲಿ ಮತ್ತು ಬಾಲವರ್ಗದ ಖೋ-ಖೋದಲ್ಲಿ , ಹಾಗೂ ವಿದ್ಯಾಭಾರತಿ ಕರ್ನಾಟಕ ಹಾಗೂ ಷಣ್ಮುಖ ದೇವ ಪ್ರೌಢಶಾಲೆ ಪೆರ್ಲಂಪಾಡಿ ಇವರ ಜಂಟಿ ಆಶ್ರಯದಲ್ಲಿ ದಿನಾಂಕ 18.07.2013 ರಂದು ಷಣ್ಮುಖ ದೇವ ಪ್ರೌಢ ಶಾಲೆ, ಪೆರ್ಲಂಪಾಡಿ ಇಲ್ಲಿ ನಡೆದ ಜಿಲ್ಲಾಮಟ್ಟದ 17ರ ವಯೋಮಾನದ ಬಾಲಕಿಯರ ಕಿಶೋರವರ್ಗದ […]

Highslide for Wordpress Plugin