ಜೆ.ಸಿ.ಐ ನಿಂದ ಸಂವಾದ

ಜೆ.ಸಿ.ಐ ನಿಂದ ಸಂವಾದ

Thursday, July 19th, 2012

ಜೆ.ಸಿ.ಐ ವತಿಯಿಂದ ತರಬೇತಿ ಸಪ್ತಾಹದ ಅಂಗವಾಗಿ ಪ್ರೌಢ ಶಾಲಾ ಮಕ್ಕಳಿಗೆ ಗುರಿ ನಿರ್ಧಾರದ ಬಗ್ಗೆ ಸಂವಾದ ಕಾರ್ಯಕ್ರಮವು ವಿವೇಕಾನಂದ ಕನ್ನಡ ಮಾಧ್ಯಮ ಶಾಲೆಯಲ್ಲಿ ನಡೆಯಿತು. ಪುತ್ತೂರು ಜೇಸಿ ವಲಯ ತರಬೇತುದಾರರಾದ ಪಶುಪತಿ ಶರ್ಮ ಸಂವಾದ ನಡೆಸಿಕೊಟ್ಟರು. ಈ ಕಾರ್ಯಕ್ರಮದಲ್ಲಿ ಜೆ.ಸಿ.ಐ  ಅಧ್ಯಕ್ಷ ಉಮೇಶ್ ಶೆಟ್ಟಿ, ಉಪನ್ಯಾಸಕ  ಡಾ| ರಾಜೇಶ್ ಬೆಜ್ಜಂಗಳ, ಕೃಷ್ಣಪ್ರಸಾದ್ ನಡ್ಸಾರ್  ಮತ್ತು  ವಿವೇಕಾನಂದ ಕನ್ನಡ ಮಾಧ್ಯಮ ಶಾಲೆಯ ಹಿರಿಯ ಶಿಕ್ಷಕಿ ಶ್ರೀಮತಿ ನಳಿನಿ ವಾಗ್ಲೆ ಅಧ್ಯಕ್ಷತೆ ವಹಿಸಿದ್ದರು.

ಇನ್‍ಸ್ಪೈಯರ್  ಅವಾರ್ಡ್: ರಾಜ್ಯ ಮಟ್ಟಕ್ಕೆ ಅಯ್ಕೆ

ಇನ್‍ಸ್ಪೈಯರ್ ಅವಾರ್ಡ್: ರಾಜ್ಯ ಮಟ್ಟಕ್ಕೆ ಅಯ್ಕೆ

Tuesday, July 17th, 2012

ಪುತ್ತೂರು: ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೆಶಕರ ಕಛೇರಿ ಹಾಗೂ ಪ್ರಾದೇಶಿಕ ವಿಜ್ಞಾನ ಕೇಂದ್ರ, ಪಿಲಿಕುಳ ಇವರ ಸಹಯೋಗದೊಂದಿಗೆ ಜು. 9ರಂದು ನಡೆದ ಜಿಲ್ಲಾಮಟ್ಟದ ಇನ್‍ಸ್ಪೈಯರ್ ಅವಾರ್ಡ್ ವಿಜ್ಞಾನ ವಸ್ತು ಪ್ರದರ್ಶನದಲ್ಲಿ ವಿವೇಕಾನಂದ ಕನ್ನಡ ಮಾಧ್ಯಮ ಶಾಲೆಯ ವಿದ್ಯಾರ್ಥಿಗಳಾದ ಸಂದೀಪ್. ಬಿ. ಆರ್. ನೀರೆತ್ತುವ ಯಂತ್ರ ಹಾಗೂ ಸ್ವಾತಿ. ಎಸ್. ಎಣ್ಣೆ ಶೋಧಕ ಯಂತ್ರಗಳ ಮಾದರಿಗಳನ್ನು ಪ್ರದರ್ಶಿಸಿ, ರಾಜ್ಯ ಮಟ್ಟಕ್ಕೆ ಆಯ್ಕೆಯಾಗಿರುತ್ತಾರೆ.

ಭಾರತಿಯ ಸಂಸ್ಕೃತಿಯಲ್ಲಿ ವಿಜ್ಞಾನದ ಮಹತ್ವ

ಭಾರತಿಯ ಸಂಸ್ಕೃತಿಯಲ್ಲಿ ವಿಜ್ಞಾನದ ಮಹತ್ವ

Wednesday, July 4th, 2012

ವಿವೇಕಾನಂದ ಕನ್ನಡ ಮಾಧ್ಯಮ ಶಾಲೆ ತೆಂಕಿಲ ಇಲ್ಲಿ ದಿನಾಂಕ ೦೪/೦೭/೨೦೧೨ ರಂದು ಪ್ರೌಢಶಾಲಾ ವಿದ್ಯಾರ್ಥಿಗಳಿಗಾಗಿ ಭಾರತೀಯ ಸಂಸ್ಕೃತಿಯಲ್ಲಿ ವಿಜ್ಞಾನದ ಮಹತ್ವ  ವಿಷಯದಲ್ಲಿ ಕರ್ನಾಟಕ ಸರಕಾರದ ಮದ್ಯಪಾನ ಸಂಯಮ ಮಂಡಳಿಯ ಅಧ್ಯಕ್ಷರಾದ ಶ್ರೀ ಸಚ್ಚಿದನಾಂದ ಹೆಗಡೆಯವರು ಮಾತನಾಡಿದರು. ಮೂಢನಂಬಿಕೆ, ತಪಸ್ಸುಗಳಿಗೆ ವೈಜ್ಞಾನಿಕ ಆಧಾರಗಳಿವೆ ಎಂಬುದನ್ನು ವಿದ್ಯಾರ್ಥಿಗಳಲ್ಲಿ ಚರ್ಚೆಯ  ಮೂಲಕ ವಿವರಿಸಿದರು. ಈ ಸಂದರ್ಭದಲ್ಲಿ ಶಾಲಾ ಆಡಳಿತ ಮಂಡಳಿಯ ಸದಸ್ಯರಾದ ಶ್ರೀ ಶ್ಯಾಂಪ್ರಸಾದ್ ಶಾಸ್ತ್ರಿಯವರು ಉಪಸ್ಥಿತರಿದ್ದರು. ಮುಖ್ಯಗುರುಗಳಾದ ಶ್ರೀಮತಿ ಆಶಾ ಬೆಳ್ಳಾರೆಯವರು ಸ್ವಾಗತಿಸಿದರು.

ಗುರುಪೂರ್ಣಿಮೆ ಆಚರಣೆ

ಗುರುಪೂರ್ಣಿಮೆ ಆಚರಣೆ

Wednesday, July 4th, 2012

ದಿನಾಂಕ ೦೩.೦೭.೨೦೧೨ ರಂದು ವಿವೇಕಾನಂದ ಕನ್ನಡ ಮಾಧ್ಯಮ ಮತ್ತು ಆಂಗ್ಲ ಮಾಧ್ಯಮದ ಜಂಟಿ  ಆಶ್ರಯದಲ್ಲಿ ಗುರುಪೂರ್ಣಿಮೆ ಆಚರಣೆಯು ಶಾಲೆಯ ಸಭಾಂಗಣದಲ್ಲಿ ಜರುಗಿತು.ಈ ಕಾರ್ಯಕ್ರಮದಲ್ಲಿ ಅಂಬಿಕಾ ಪದವಿ ಪೂರ್ವ ವಿದ್ಯಾಲಯದ ಸಂಸ್ಕೃತ ಪ್ರಾಧ್ಯಾಪಕರಾದ ಶ್ರೀ ಪರೀಕ್ಷಿತ ತೋಳ್ಪಾಡಿಯವರು ಮಾತನಾಡಿ ‘ಗುರುಗಳು ವಿದ್ಯಾರ್ಥಿಗಳಿಗೆ ಜ್ಞಾನವನ್ನು ಬೆಳಂದಿಗಳಾಗಿ ಪರಿವರ್ತಿಸಿ ಕೊಡುವವರಾಗಬೇಕು’ ಎಂದು ಹೇಳಿ ಗುರುಪೂರ್ಣಿಮೆಯ ಮಹತ್ವದ ಬಗ್ಗೆ ತಿಳಿಸಿದರು. ಕಾರ್ಯಕ್ರಮದಲ್ಲಿ ಶಾಲಾ ಆಡಳಿತ ಮಂಡಳಿಯ ಸದಸ್ಯರಾದ ಶ್ರೀಮತಿ ಶೋಭಾ ಕೊಳತ್ತಾಯ ರವರು ಉಪಸ್ಥಿತರಿದ್ದರು. ಹಾಗೂ ಉಭಯ ಸಂಸ್ಥೆಗಳ ಮುಖ್ಯ ಗುರುಗಳು ಉಪಸ್ಥಿತರಿದ್ದರು.

ಹೊಲಿಗೆ ತರಬೇತಿ ತರಗತಿ ಪ್ರಾರಂಭ

ಹೊಲಿಗೆ ತರಬೇತಿ ತರಗತಿ ಪ್ರಾರಂಭ

Wednesday, July 4th, 2012

ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಚಟುವಟಿಕೆಗಳೊಂದಿಗೆ ವೃತ್ತಿ ಶಿಕ್ಷಣ ತರಬೇತಿಯೂ  ದೊರೆತಾಗ ಭವಿಷ್ಯದ ಜೀವನಕ್ಕೆ ಭದ್ರ ಬುನಾದಿ ಹಾಗಿದಂತಾಗುತ್ತದೆ. ಆತ್ಮವಿಶ್ವಾಸ ವೃದ್ಧಿಸುತ್ತದೆ. ಈ ನಿಟ್ಟಿನಲ್ಲಿ ವಿವೇಕಾನಂದ ಕನ್ನಡ ಮಾಧ್ಯಮ ಶಾಲೆಯಲ್ಲಿ ದಿನಾಂಕ ೨೭.೦೬.೨೦೧೨ರಂದು ಹೊಲಿಗೆ ತರಬೇತಿ ತರಗತಿಗಳು ಪ್ರಾರಂಭವಾದವು. ಹೊಲಿಗೆ  ತರಬೇತಿ ತರಗತಿಗಳು ಪ್ರಾರಂಭವಾದವು ಹೊಲಿಗೆ ಯಂತ್ರಗಳ ಕೊಡುಗೆಯನ್ನು ಇತ್ತವರು ಶ್ರೀ ಜಗದೀಶ್ ಬದನಾಜೆ (ಬದನಾಜೆ ಟ್ರಾನ್ಸ್ ಪೋರ್ಟ್), ಟಿ.ವಿ ರವೀಂದ್ರನ್ (ದೇವ ಟ್ರೇಡರ್ಸ್ ಏಳ್ಮುಡಿ ಪುತ್ತೂರು) ಹಾಗೂ ಪ್ರೇಮಾನಂದ್ (ದೇವ ಟ್ರೇಡರ್ಸ್ ಏಳ್ಮುಡಿ ಪುತ್ತೂರು) ಇವರು ತರಬೇತಿ ತರಗತಿಗೆ […]

ಜನಪದ ನೃತ್ಯ ಪ್ರಥಮ

ಜನಪದ ನೃತ್ಯ ಪ್ರಥಮ

Tuesday, July 3rd, 2012

ದಿನಾಂಕ ೦೨/೦೬/೧೨ರಂದು ಸುಳ್ಯಪದವಿನಲ್ಲಿ ನಡೆದ ತಾಲೂಕು ಮಟ್ಟದ ಪ್ರೌಢಶಾಲಾ  ‘ಜಾನಪದ ನೃತ್ಯ’ ಸ್ಪರ್ಧೆಯಲ್ಲಿ ವಿವೇಕಾನಂದ ಕನ್ನಡ ಮಾಧ್ಯಮ ಶಾಲೆಯ  ವಿದ್ಯಾರ್ಥಿಗಳು ಪ್ರಥಮ ಸ್ಥಾನ ಪಡೆದಿರುತ್ತಾರೆ.

ಸಾಮೂಹಿಕ ಹುಟ್ಟುಹಬ್ಬ (ಎಪ್ರಿಲ್, ಮೇ, ಜೂನ್)

ಸಾಮೂಹಿಕ ಹುಟ್ಟುಹಬ್ಬ (ಎಪ್ರಿಲ್, ಮೇ, ಜೂನ್)

Tuesday, July 3rd, 2012

ವಿವೇಕಾನಂದ ಕನ್ನಡ ಮಾಧ್ಯಮ ಶಾಲೆ ತೆಂಕಿಲ ಇಲ್ಲಿ ದಿನಾಂಕ ೩೦.೦೬.೨೦೧೨ರಂದು ಎಪ್ರಿಲ್, ಮೇ, ಜೂನ್ ತಿಂಗಳಲ್ಲಿ ಜನಿಸಿದ ವಿದ್ಯಾರ್ಥಿಗಳ ಸಾಮೂಹಿಕ ಹುಟ್ಟುಹಬ್ಬವು ನೆರವೇರಿತು. ಈ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಮಾತನಾಡಿದ ಪೋಷಕರಾದ ಶ್ರೀಮತಿ ಭಾರತಿ ಶಶಿಧರ್ ರವರು ವಿದ್ಯಾರ್ಥಿಗಳಿಗೆ ಶುಭ ಹಾರೈಸಿದರು. ವೇದಿಕೆಯಲ್ಲಿ ಉಪಸ್ಥಿತರಿದ್ದ ಶಾಲಾ ಆಡಳಿತ ಮಂಡಳಿ ಸದಸ್ಯರಾದ ಶ್ರೀಜಯರಾಮ್ ಭಟ್ ಮತ್ತು ಶ್ರೀ ಶ್ಯಾಂ ಪ್ರಸಾದ್ ಶಾಸ್ತ್ರೀಯವರು ವಿದ್ಯಾರ್ಥಿಗಳಿಗೆ ಹುಟ್ಟುಹಬ್ಬದ ಆಚರಣೆಯ ಮಹತ್ವದ ಬಗ್ಗೆ ತಿಳಿಸಿದರು. ಹಿರಿಯ ಶಿಕ್ಷಕಿ ಶ್ರೀಮತಿ ಪೂರ್ಣಿಮಾ ಮಾತಾಜಿಯಾವರು ಪ್ರಾಸ್ತಾವಿಕವಾಗಿ […]

ರಾಷ್ಟ್ರಪತಿ ಪುರಸ್ಕಾರ

ರಾಷ್ಟ್ರಪತಿ ಪುರಸ್ಕಾರ

Thursday, June 28th, 2012

ವಿವೇಕಾನಂದ ಕನ್ನಡ ಮಾಧ್ಯಮಶಾಲೆಯ ವಿದ್ಯಾರ್ಥಿಯಾದ ಪವನ್.ಎ ದಾವಣಗೆರೆಯಲ್ಲಿ ನಡೆದ ಸ್ಕೌಟ್ಸ್ ವಿಭಾಗದ ಪರೀಕ್ಷೆಯಲ್ಲಿ ತೇರ್ಗಡೆ ಹೊಂದಿ ರಾಷ್ಟ್ರಪತಿ ಪುರಸ್ಕಾರಕ್ಕೆ ಆಯ್ಕೆಯಾಗಿರುತ್ತಾನೆ. ಈತ ಶಶಿ ಸ್ಟುಡಿಯೋ ಮಾಲಕ ಶ್ರೀ ಶಶಿಧರ ಮತ್ತು ಶ್ರೀಮತಿ ಭಾರತಿ ಯವರ ಪುತ್ರ. ಪ್ರಸ್ತುತ ಈತ ವಿವೇಕಾನಂದ ಪದವಿ ಪೂರ್ವ ಕಾಲೇಜಿನ ದ್ವಿತೀಯ ಪಿ.ಯು.ಸಿ ವಿದ್ಯಾರ್ಥಿ.

ಹತ್ತನೇ ವಿದ್ಯಾರ್ಥಿಗಳೊಂದಿಗೆ - ಐ. ಕೆ. ಬೊಳುವಾರು

ಹತ್ತನೇ ವಿದ್ಯಾರ್ಥಿಗಳೊಂದಿಗೆ – ಐ. ಕೆ. ಬೊಳುವಾರು

Tuesday, June 26th, 2012

ನಾಟಕದ ಭಾವಾಭಿನಯದ ಅಂಶವನ್ನು ಶಿಕ್ಷಣರಂಗದಲ್ಲಿ ಬಳಸಿಕೊಂಡಾಗ ಕಲಿಕೆಯು ಹೇಗೆ ಆಸಕ್ತಿದಾಯಕವೂ, ಪರಿಣಾಮಕಾರಿಯೂ ಆಗಬಲ್ಲದು ಎಂಬುದನ್ನು ವಿವಿಧ ಚಟುವಟಿಕೆಗಳ ಮೂಲಕ ವಿವರಿಸುತ್ತಾ ನಾಟಕದಲ್ಲಿ ಬಳಸುವ ಕಥಾವಸ್ತುವು ವಾಸ್ತವಿಕತೆಯ ಚೌಕಟ್ಟನ್ನು ಮೀರದೆ ಸಮಾಜದ ಸ್ವಾಸ್ಥ್ಯವನ್ನು  ಕಾಪಾಡುವಂತಿರಬೇಕು ಮತ್ತು ಶಿಕ್ಷಣ-ನಾಟಕ-ಕ್ರೀಡೆ ಮೂಲಕ ಶಿಕ್ಷಣದ ಮೌಲ್ಯಗಳ  ಬಗ್ಗೆ ಹತ್ತನೇ ತರಗತಿಯ ವಿದ್ಯಾರ್ಥಿಗಳಿಗೆ ಐ. ಕೆ. ಬೊಳುವಾರು  ಅವರು ಕಿವಿಮಾತು ಹೇಳಿದರು.

ಅಭಿನಂದನಾ ಕಾರ್ಯಕ್ರಮ

ಅಭಿನಂದನಾ ಕಾರ್ಯಕ್ರಮ

Wednesday, June 13th, 2012

ವಿವೇಕಾನಂದ ಕನ್ನಡ ಮಾಧ್ಯಮ ಶಾಲೆ – ತೆಂಕಿಲ ಪುತ್ತೂರು ಇಲ್ಲಿ ದಿನಾಂಕ ೦೯.೦೬.೨೦೧೨ನೇ ಸಾಲಿನ ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ  ಶೇ ೯೬ ಫಲಿತಾಂಶ ತಂದುಕೊಟ್ಟ ವಿದ್ಯಾರ್ಥಿಗಳಿಗೆ ಅಭಿನಂದನಾ ಕಾರ್ಯಕ್ರಮವು ನಡೆಯಿತು. ಶಾಲಾ ಆಡಳಿತ ಮಂಡಳಿ ಸಂಚಾಲಕರಾದ ಶ್ರೀ ರವೀಂದ್ರ.ಪಿ ರವರು ವಿದ್ಯಾರ್ಥಿಗಳ ಭವಿಷ್ಯ ಉಜ್ವಲವಾಗಲಿ ಎಂದು ಹಾರೈಸಿದರು. ಮುಖ್ಯ ಅತಿಥಿಗಳಾಗಿ ಆಗಮಿಸಿದ ಉದ್ಯಮಿ ಶ್ರೀಮತಿ ಸುನೀತಾ ರವೀಂದ್ರರವರು ವಿದ್ಯಾರ್ಥಿಗಳಿಗೆ ಪ್ರೋತ್ಸಾಹದ ಮಾತುಗಳನ್ನಾಡಿದರು. ಶಾಲಾ ಪರವಾಗಿ ಶಿಕ್ಷಕ ವಿಶ್ವನಾಥ ಮೂಡೂರು ಮಾತನಾಡಿದರು. ಮುಖ್ಯ ಶಿಕ್ಷಕಿ ಶ್ರೀಮತಿ ಆಶಾ ಬೆಳ್ಳಾರೆ ಸ್ವಾಗತಿಸಿ […]

Highslide for Wordpress Plugin