ಪುತ್ತೂರು: ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೆಶಕರ ಕಛೇರಿ ಹಾಗೂ ಪ್ರಾದೇಶಿಕ ವಿಜ್ಞಾನ ಕೇಂದ್ರ, ಪಿಲಿಕುಳ ಇವರ ಸಹಯೋಗದೊಂದಿಗೆ ಜು. 9ರಂದು ನಡೆದ ಜಿಲ್ಲಾಮಟ್ಟದ ಇನ್‍ಸ್ಪೈಯರ್ ಅವಾರ್ಡ್ ವಿಜ್ಞಾನ ವಸ್ತು ಪ್ರದರ್ಶನದಲ್ಲಿ ವಿವೇಕಾನಂದ ಕನ್ನಡ ಮಾಧ್ಯಮ ಶಾಲೆಯ ವಿದ್ಯಾರ್ಥಿಗಳಾದ ಸಂದೀಪ್. ಬಿ. ಆರ್. ನೀರೆತ್ತುವ ಯಂತ್ರ ಹಾಗೂ ಸ್ವಾತಿ. ಎಸ್. ಎಣ್ಣೆ ಶೋಧಕ ಯಂತ್ರಗಳ ಮಾದರಿಗಳನ್ನು ಪ್ರದರ್ಶಿಸಿ, ರಾಜ್ಯ ಮಟ್ಟಕ್ಕೆ ಆಯ್ಕೆಯಾಗಿರುತ್ತಾರೆ.