ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಚಟುವಟಿಕೆಗಳೊಂದಿಗೆ ವೃತ್ತಿ ಶಿಕ್ಷಣ ತರಬೇತಿಯೂ ದೊರೆತಾಗ ಭವಿಷ್ಯದ ಜೀವನಕ್ಕೆ ಭದ್ರ ಬುನಾದಿ ಹಾಗಿದಂತಾಗುತ್ತದೆ. ಆತ್ಮವಿಶ್ವಾಸ ವೃದ್ಧಿಸುತ್ತದೆ.
ಈ ನಿಟ್ಟಿನಲ್ಲಿ ವಿವೇಕಾನಂದ ಕನ್ನಡ ಮಾಧ್ಯಮ ಶಾಲೆಯಲ್ಲಿ ದಿನಾಂಕ ೨೭.೦೬.೨೦೧೨ರಂದು ಹೊಲಿಗೆ ತರಬೇತಿ ತರಗತಿಗಳು ಪ್ರಾರಂಭವಾದವು. ಹೊಲಿಗೆ ತರಬೇತಿ ತರಗತಿಗಳು ಪ್ರಾರಂಭವಾದವು ಹೊಲಿಗೆ ಯಂತ್ರಗಳ ಕೊಡುಗೆಯನ್ನು ಇತ್ತವರು ಶ್ರೀ ಜಗದೀಶ್ ಬದನಾಜೆ (ಬದನಾಜೆ ಟ್ರಾನ್ಸ್ ಪೋರ್ಟ್), ಟಿ.ವಿ ರವೀಂದ್ರನ್ (ದೇವ ಟ್ರೇಡರ್ಸ್ ಏಳ್ಮುಡಿ ಪುತ್ತೂರು) ಹಾಗೂ ಪ್ರೇಮಾನಂದ್ (ದೇವ ಟ್ರೇಡರ್ಸ್ ಏಳ್ಮುಡಿ ಪುತ್ತೂರು) ಇವರು ತರಬೇತಿ ತರಗತಿಗೆ ಚಾಲನೆಯಿತ್ತು ಶುಭ ಹಾರೈಸಿದರು.