ಎಸ್.ಎಸ್.ಎಲ್.ಸಿ ಫಲಿತಾಂಶ - ೨೦೨೪-೨೫

ಎಸ್.ಎಸ್.ಎಲ್.ಸಿ ಫಲಿತಾಂಶ – ೨೦೨೪-೨೫

Wednesday, May 7th, 2025
ರಾಜ್ಯಮಟ್ಟದ ಸ್ಕೌಟ್ಸ್ ಅಂಡ್ ಗೈಡ್ಸ್ ಪರೀಕ್ಷೆಯಲ್ಲಿ -  ಉತ್ತೀರ್ಣ

ರಾಜ್ಯಮಟ್ಟದ ಸ್ಕೌಟ್ಸ್ ಅಂಡ್ ಗೈಡ್ಸ್ ಪರೀಕ್ಷೆಯಲ್ಲಿ –  ಉತ್ತೀರ್ಣ

Friday, March 7th, 2025

ಭಾರತ್ ಸ್ಕೌಟ್ಸ್ ಅಂಡ್ ಗೈಡ್ಸ್ ರಾಜ್ಯ ಸಂಸ್ಥೆಯು ನಡೆಸುವ ರಾಜ್ಯ ಮಟ್ಟದ ರಾಜ್ಯ ಪುರಸ್ಕಾರ ಪರೀಕ್ಷಾ ಶಿಬಿರದಲ್ಲಿ ವಿವೇಕಾನಂದ ಕನ್ನಡ ಮಾಧ್ಯಮ ಶಾಲೆಯ ಎಂಟು ವಿದ್ಯಾರ್ಥಿಗಳು ಉತ್ತೀರ್ಣರಾಗಿರುತ್ತಾರೆ. ಸ್ಕೌಟ್ ವಿಭಾಗದಲ್ಲಿ  ಕೀರ್ತನ್ ಕುಲಾಲ್, ಧನುಷ್, ಯಜ್ಞ                                                           […]

2025-26ನೇ  ಸಾಲಿನ ದಾಖಲಾತಿ ಆರಂಭಗೊಂಡಿದೆ

2025-26ನೇ ಸಾಲಿನ ದಾಖಲಾತಿ ಆರಂಭಗೊಂಡಿದೆ

Tuesday, February 18th, 2025
ರಥ ಸಪ್ತಮಿ

ರಥ ಸಪ್ತಮಿ

Thursday, February 6th, 2025

    ರಥ ಸಪ್ತಮಿಯ ಪ್ರಯುಕ್ತ ಶಾಲೆಯಲ್ಲಿ ಸಾಮೂಹಿಕ ಸೂರ್ಯನಮಸ್ಕಾರವು ನಡೆಯಿತು. ಕಾರ್ಯಕ್ರಮವನ್ನು ಶ್ರೀ ಪತಂಜಲಿ ಯೋಗ ಶಿಕ್ಷಣ ಸಮಿತಿಯ ತಾಲೂಕು ಯೋಗ ವರದಿ ಪ್ರಮುಖರಾದ ಶ್ರೀ ಲಕ್ಷ್ಮೀಕಾಂತ ಇವರು ದೀಪಪ್ರಜ್ವಲಿಸಿ ರಥಸಪ್ತಮಿ ಆಚರಣೆಯ ಮಹತ್ವ ಮತ್ತು ಸೂರ್ಯನಮಸ್ಕಾರ ಮಾಡುವುದರಿಂದ ನಮ್ಮ ಆರೋಗ್ಯದ ಮೇಲೆ ವೈಜ್ಞಾನಿಕ ಮತ್ತು ಆಧ್ಯಾತ್ಮಿಕ ಪರಿಣಾಮ ಬೀರುವ ಕುರಿತು ತಿಳಿಸಿದರು. ಇನ್ನೊರ್ವ ಮುಖ್ಯ ಅಭ್ಯಾಗತರಾದ ಶ್ರೀ ಶ್ರೀಕಾಂತ್ ಪೂಜಾರಿ ಬಿರಾವು ಮಾತನಾಡಿ ಮಕ್ಕಳಿಗೆ ತಮ್ಮ ಆಹಾರ ಮತ್ತು ಆರೋಗ್ಯದ ಬಗ್ಗೆ ಕಾಳಜಿ ವಹಿಸುವಂತೆ […]

36ನೇ ರಾಷ್ಟ್ರೀಯ ರಸ್ತೆ ಸುರಕ್ಷತಾ ಮಾಸಾಚರಣಾ ಕಾರ್ಯಕ್ರಮ

36ನೇ ರಾಷ್ಟ್ರೀಯ ರಸ್ತೆ ಸುರಕ್ಷತಾ ಮಾಸಾಚರಣಾ ಕಾರ್ಯಕ್ರಮ

Tuesday, February 4th, 2025

  ಪ್ರಾದೇಶಿಕ ಸಾರಿಗೆ ಅಧಿಕಾರಿಗಳ ಕಛೇರಿ ಪುತ್ತೂರು ವತಿಯಿಂದ ವಿವೇಕಾನಂದ ಕನ್ನಡ ಮಾಧ್ಯಮ ಶಾಲೆಯ ಮಕ್ಕಳು, ಶಿಕ್ಷಕರು, ಪೋಷಕರು ಹಾಗೂ ಚಾಲಕ ಬಂಧುಗಳಿಗೆರಸ್ತೆ ಸುರಕ್ಷತೆ-ಜೀವನ ರಕ್ಷೆ ಎಂಬ ವಿಷಯದ ಕುರಿತು ಮಾಹಿತಿ ನೀಡಲಾಯಿತು. ಪ್ರೌಢ ವಿಭಾಗದ ಸಮಾಜ ವಿಜ್ಞಾನ ವಿಷಯದ ಸಂಯೋಜಕರಾದ ಲೀಲಾವತಿ ಉಪಸ್ಥಿತರಿದ್ದರು. ಪ್ರಾಥಮಿಕ ವಿಭಾಗ ೩ ಮಕ್ಕಳಿಗೆ ಸುರಕ್ಷತಾ ಪಟ್ಟಿ ನೀಡಲಾಯಿತು.  

ವಿವೇಕಾನಂದ ವಿದ್ಯಾಸಂಸ್ಥೆಯಿಂದ 73ನೇ ಗಣರಾಜ್ಯೋತ್ಸವ ಆಚರಣೆ

ವಿವೇಕಾನಂದ ವಿದ್ಯಾಸಂಸ್ಥೆಯಿಂದ 73ನೇ ಗಣರಾಜ್ಯೋತ್ಸವ ಆಚರಣೆ

Saturday, January 27th, 2024

ವಿವೇಕಾನಂದ ವಿದ್ಯಾವರ್ಧಕ ಸಂಘದ ವಿವೇಕನಗರ ತೆಂಕಿಲ ಸಂಕೀರ್ಣದಲ್ಲಿರುವ ವಿದ್ಯಾಸಂಸ್ಥೆಗಳಾದ ವಿವೇಕಾನಂದ ಕನ್ನಡ ಮಾಧ್ಯಮ, ಆಂಗ್ಲಮಾಧ್ಯಮ, ನರೇಂದ್ರ ಪದವಿ ಪೂರ್ವ ಕಾಲೇಜು ಮತ್ತು ವಿವೇಕಾನಂದ ಶಿಕ್ಷಣ ಮಹಾವಿದ್ಯಾಲಯ ಇವುಗಳ ಸಂಯುಕ್ತ ಆಶ್ರಯದಲ್ಲಿ 75ನೇ ಗಣರಾಜ್ಯೋತ್ಸವ ದಿನಾಚರಣೆಯನ್ನು ವಿದ್ಯಾಸಂಸ್ಥೆಗಳ ಆವರಣದಲ್ಲಿ ವಿಜೃಂಭಣೆಯಿಂದ ಆಚರಿಸಲಾಯಿತು. ಘೋಷ್ ವೃಂದದೊಂದಿಗೆ ವೇದಿಕೆಗೆ ಆಗಮಿಸಿದ ಅತಿಥಿಗಳು ಸಂವಿಧಾನ ಶಿಲ್ಪಿ ಬಿ.ಆರ್. ಅಂಬೇಡ್ಕರ್ ಭಾವಚಿತ್ರಕ್ಕೆ ಪುಷ್ಫ ನಮನ ಸಲ್ಲಿಸಿದರು ಭಾರತೀಯ ಸೇನಾಪಡೆಯ ಯೋಧ ಶ್ರೀ ಜಯ ನಾಯಕ್ ಧ್ವಜಾರೋಹಣಗೈದರು, ನಿವೃತ್ತ ಯೋಧ ಬಾಲಕೃಷ್ಣ ಪಟ್ಟೆ ಗಣರಾಜ್ಯೋತ್ಸವದ ಸಂದೇಶ […]

Friday, July 21st, 2023

 

Media Reports Sept 2017

Media Reports Sept 2017

Wednesday, September 13th, 2017
ರಾಷ್ಟ್ರಪತಿ ಪುರಸ್ಕಾರ

ರಾಷ್ಟ್ರಪತಿ ಪುರಸ್ಕಾರ

Thursday, June 28th, 2012

ವಿವೇಕಾನಂದ ಕನ್ನಡ ಮಾಧ್ಯಮಶಾಲೆಯ ವಿದ್ಯಾರ್ಥಿಯಾದ ಪವನ್.ಎ ದಾವಣಗೆರೆಯಲ್ಲಿ ನಡೆದ ಸ್ಕೌಟ್ಸ್ ವಿಭಾಗದ ಪರೀಕ್ಷೆಯಲ್ಲಿ ತೇರ್ಗಡೆ ಹೊಂದಿ ರಾಷ್ಟ್ರಪತಿ ಪುರಸ್ಕಾರಕ್ಕೆ ಆಯ್ಕೆಯಾಗಿರುತ್ತಾನೆ. ಈತ ಶಶಿ ಸ್ಟುಡಿಯೋ ಮಾಲಕ ಶ್ರೀ ಶಶಿಧರ ಮತ್ತು ಶ್ರೀಮತಿ ಭಾರತಿ ಯವರ ಪುತ್ರ. ಪ್ರಸ್ತುತ ಈತ ವಿವೇಕಾನಂದ ಪದವಿ ಪೂರ್ವ ಕಾಲೇಜಿನ ದ್ವಿತೀಯ ಪಿ.ಯು.ಸಿ ವಿದ್ಯಾರ್ಥಿ.

ಹತ್ತನೇ ವಿದ್ಯಾರ್ಥಿಗಳೊಂದಿಗೆ - ಐ. ಕೆ. ಬೊಳುವಾರು

ಹತ್ತನೇ ವಿದ್ಯಾರ್ಥಿಗಳೊಂದಿಗೆ – ಐ. ಕೆ. ಬೊಳುವಾರು

Tuesday, June 26th, 2012

ನಾಟಕದ ಭಾವಾಭಿನಯದ ಅಂಶವನ್ನು ಶಿಕ್ಷಣರಂಗದಲ್ಲಿ ಬಳಸಿಕೊಂಡಾಗ ಕಲಿಕೆಯು ಹೇಗೆ ಆಸಕ್ತಿದಾಯಕವೂ, ಪರಿಣಾಮಕಾರಿಯೂ ಆಗಬಲ್ಲದು ಎಂಬುದನ್ನು ವಿವಿಧ ಚಟುವಟಿಕೆಗಳ ಮೂಲಕ ವಿವರಿಸುತ್ತಾ ನಾಟಕದಲ್ಲಿ ಬಳಸುವ ಕಥಾವಸ್ತುವು ವಾಸ್ತವಿಕತೆಯ ಚೌಕಟ್ಟನ್ನು ಮೀರದೆ ಸಮಾಜದ ಸ್ವಾಸ್ಥ್ಯವನ್ನು  ಕಾಪಾಡುವಂತಿರಬೇಕು ಮತ್ತು ಶಿಕ್ಷಣ-ನಾಟಕ-ಕ್ರೀಡೆ ಮೂಲಕ ಶಿಕ್ಷಣದ ಮೌಲ್ಯಗಳ  ಬಗ್ಗೆ ಹತ್ತನೇ ತರಗತಿಯ ವಿದ್ಯಾರ್ಥಿಗಳಿಗೆ ಐ. ಕೆ. ಬೊಳುವಾರು  ಅವರು ಕಿವಿಮಾತು ಹೇಳಿದರು.

ಅಭಿನಂದನಾ ಕಾರ್ಯಕ್ರಮ

ಅಭಿನಂದನಾ ಕಾರ್ಯಕ್ರಮ

Wednesday, June 13th, 2012

ವಿವೇಕಾನಂದ ಕನ್ನಡ ಮಾಧ್ಯಮ ಶಾಲೆ – ತೆಂಕಿಲ ಪುತ್ತೂರು ಇಲ್ಲಿ ದಿನಾಂಕ ೦೯.೦೬.೨೦೧೨ನೇ ಸಾಲಿನ ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ  ಶೇ ೯೬ ಫಲಿತಾಂಶ ತಂದುಕೊಟ್ಟ ವಿದ್ಯಾರ್ಥಿಗಳಿಗೆ ಅಭಿನಂದನಾ ಕಾರ್ಯಕ್ರಮವು ನಡೆಯಿತು. ಶಾಲಾ ಆಡಳಿತ ಮಂಡಳಿ ಸಂಚಾಲಕರಾದ ಶ್ರೀ ರವೀಂದ್ರ.ಪಿ ರವರು ವಿದ್ಯಾರ್ಥಿಗಳ ಭವಿಷ್ಯ ಉಜ್ವಲವಾಗಲಿ ಎಂದು ಹಾರೈಸಿದರು. ಮುಖ್ಯ ಅತಿಥಿಗಳಾಗಿ ಆಗಮಿಸಿದ ಉದ್ಯಮಿ ಶ್ರೀಮತಿ ಸುನೀತಾ ರವೀಂದ್ರರವರು ವಿದ್ಯಾರ್ಥಿಗಳಿಗೆ ಪ್ರೋತ್ಸಾಹದ ಮಾತುಗಳನ್ನಾಡಿದರು. ಶಾಲಾ ಪರವಾಗಿ ಶಿಕ್ಷಕ ವಿಶ್ವನಾಥ ಮೂಡೂರು ಮಾತನಾಡಿದರು. ಮುಖ್ಯ ಶಿಕ್ಷಕಿ ಶ್ರೀಮತಿ ಆಶಾ ಬೆಳ್ಳಾರೆ ಸ್ವಾಗತಿಸಿ […]

ವಿಶ್ವ ಪರಿಸರ ದಿನ

ವಿಶ್ವ ಪರಿಸರ ದಿನ

Saturday, June 9th, 2012

ದಿನಾಂಕ ೦೫.೦೬.೨೦೧೨ ರಂದು ವಿಶ್ವಪರಿಸರ ದಿನಾಚರಣೆಯ ಅಂಗವಾಗಿ ವಿವೇಕಾನಂದ ಕನ್ನಡ ಮಾಧ್ಯಮ ಶಾಲೆಯ ಸ್ಕೌಟ್ಸ್ – ಗೈಡ್ಸ್ ವಿದ್ಯಾರ್ಥಿಗಳು ಸ್ಕೌಟ್ಸ್ ಶಿಕ್ಷಕ ಶ್ರೀ ವಿಶ್ವನಾಥ ಮೂಡೂರು ಇವರ ನಿರ್ದೇಶನದಂತೆ ಮೊಟ್ಟೆತ್ತಡ್ಕದ ಪ್ರಗತಿಪರ ಕೃಷಿಕರಾದ ಉಪೇಂದ್ರ ಬಲ್ಯಾಯ ರವರ ಸ್ಥಳದಲ್ಲಿ ಧನ್ವಂತರಿ  ಆರ್ಯುವೇದಿಕ್ ಗಿಡಗಳ ವನವನ್ನು ನಿರ್ಮಿಸಿದರು. ದಿನೇ ದಿನೇ ಪರಿಸರ ವಿನಾಶವಾಗುವ ಈ ಸಂದರ್ಭದಲ್ಲಿ ಆರೋಗ್ಯದಾಯಕವಾದ ಅಂಶಗಳನ್ನು ಮುಂದಿಟ್ಟುಕೊಂಡು ವಿಶ್ವಪರಿಸರ ದಿನಾಚರಣೆಗೆ ಅರ್ಥಪೂರ್ಣವಾದ ಮಹತ್ವವನ್ನು ಕೊಡಬೇಕೆಂಬ ನಿಟ್ಟಿನಲ್ಲಿ, ವಿದ್ಯಾರ್ಥಿಗಳಿಗೆ ಎಳವೆಯಲ್ಲಿಯೇ ಇಂತಹ ವಿಷಯಗಳನ್ನು ತಿಳಿದುಕೊಳ್ಳಬೇಕು ಎಂಬ ಅಂಶವನ್ನು […]

೨೦೧೨-೧೩ನೇ ಸಾಲಿನ ಶಾಲಾ ಚುನಾವಣೆ

೨೦೧೨-೧೩ನೇ ಸಾಲಿನ ಶಾಲಾ ಚುನಾವಣೆ

Saturday, June 9th, 2012

ದಿನಾಂಕ ೦೬/೦೬/೨೦೧೨ ರಂದು ೨೦೧೨-೧೩ನೇ ಸಾಲಿನ ಶಾಲಾ ಚುನಾವಣೆ ವಿವೇಕಾನಂದ ಕನ್ನಡ ಮಾಧ್ಯಮ ಶಾಲೆಯಲ್ಲಿ ನಡೆಯಿತು. ಪ್ರೌಢಶಾಲಾ ನಾಯಕನಾಗಿ ಹತ್ತನೇ ತರಗತಿಯ ಉತ್ತಮ್.ಎನ್ ಬಹುಮತದಿಂದ ಚುನಾಯಿತರಾದರು. ಉಪನಾಯಕನಾಗಿ ಹತ್ತನೇ ತರಗತಿಯ ಪ್ರವಚನ್ ಆಯ್ಕೆಯಾದರು. ಪ್ರಾಥಮಿಕ ಶಾಲಾ ಮಟ್ಟದ ಚುನಾವಣೆಯಲ್ಲಿ ನಾಯಕಿಯಾಗಿ ಏಳನೇ ತರಗತಿಯ ಕು|ಅಂಕಿತಾ.ವಿ.ಕೆ ಮತ್ತು ಉಪನಾಯಕಿಯಾಗಿ ಏಳನೇ ತರಗತಿಯ ಕು| ಅಶ್ವಿನಿ ನಾಯಕ್ ರವರು ಆಯ್ಕೆಯಾದರು. ಶಾಲಾ ಚುನಾವಣೆಯ ಮುಖ್ಯ ಅಧಿಕಾರಿಯಾಗಿ ಹಿರಿಯ ಶಿಕ್ಷಕರಾದ ಶ್ರೀ ವಿಶ್ವನಾಥ ಮೂಡೂರು ತಮ್ಮ ಕಾರ್ಯ ನಿರ್ವಾಹಿಸಿದರು. ಶಾಲಾ ಶಿಕ್ಷಕರು […]

ಶಾಲಾ ಪ್ರವೇಶೋತ್ಸವ ಕಾರ್ಯಕ್ರಮ

ಶಾಲಾ ಪ್ರವೇಶೋತ್ಸವ ಕಾರ್ಯಕ್ರಮ

Thursday, June 7th, 2012

ದಿನಾಂಕ ೦೬-೦೬-೨೦೧೨ ರಂದು ವಿವೇಕಾನಂದ ಕನ್ನಡ ಮಾಧ್ಯಮ ಶಾಲೆ ತೆಂಕಿಲ, ಇಲ್ಲಿ  ೨೦೧೨ – ೧೩ನೇ ಸಾಲಿನಲ್ಲಿ ಹೊಸದಾಗಿ ಸೇರಿರುವ ವಿದ್ಯಾರ್ಥಿಗಳ ಶಾಲಾಪ್ರವೇಶೋತ್ಸವ ಕಾರ್ಯಕ್ರಮ ನಡೆಯಿತು. ಈ ಕಾರ್ಯಕ್ರಮದಲ್ಲಿ ಉದ್ಫಾಟಕರಾಗಿ ಕ್ಷೇತ್ರಸಂಪನ್ಮೂಲಕೇಂದ್ರದ ಸಮನ್ವಯಾಧಿಕಾರಿಯಾದ ಶ್ರೀ ನಂದೀಶರವರು ಭಾಗವಹಿಸಿ ವಿದ್ಯಾರ್ಥಿಗಳಿಗೆ ಶುಭ ಹಾರೈಸಿದರು. ಮುಖ್ಯ ಅತಿಥಿಗಳಾಗಿ ವಿವೇಕಾನಂದ ಪದವಿ ಕಾಲೇಜಿನ ನಿವೃತ್ತ ಪ್ರಾಂಶುಪಾಲರಾದ ಶ್ರೀ ವೇದವ್ಯಾಸರವರು ಶಾಲೆ ಮತ್ತು ವಿದ್ಯಾರ್ಥಿಗಳ ಶ್ರೇಯಸ್ಸಿಗೊಸ್ಕರ ಶಿಕ್ಷಕರೊಂದಿಗೆ ಪೋಷಕರ ಪಾತ್ರ ಹಿರಿದಾದುದು ಎಂಬುದಾಗಿ ಹೇಳಿ ಶುಭ ಹಾರೈಕೆಯನ್ನು ಮಾಡಿದರು. ಸಭಾಧ್ಯಕ್ಷರಾಗಿ ಶಾಲಾ ಆಡಳಿತ […]

'ಮಾತೃಭಾಷಾ  ಶಿಕ್ಷಣ  ಮತ್ತು  ವಿದ್ಯಾರ್ಥಿಯ ಮನೋಸ್ಥಿತಿ’ - ಸಂವಾದ

‘ಮಾತೃಭಾಷಾ ಶಿಕ್ಷಣ ಮತ್ತು ವಿದ್ಯಾರ್ಥಿಯ ಮನೋಸ್ಥಿತಿ’ – ಸಂವಾದ

Monday, June 4th, 2012

ವಿವೇಕಾನಂದ ಕನ್ನಡ ಮಾಧ್ಯಮ ಶಾಲೆ, ತೆಂಕಿಲದಲ್ಲಿ ದಿನಾಂಕ ೦೨/೦೬/೨೦೧೨ ರಂದು ೨೦೧೨-೧೩ನೇ ಸಾಲಿನ ಹತ್ತನೇ ತರಗತಿ ವಿದ್ಯಾರ್ಥಿಗಳಿಗಾಗಿ ‘ಮಾತೃಭಾಷಾ  ಶಿಕ್ಷಣ  ಮತ್ತು  ವಿದ್ಯಾರ್ಥಿಯ ಮನೋಸ್ಥಿತಿ ಎಂಬ ವಿಷಯದ ಬಗ್ಗೆ  ಶ್ರೀ ಕಜಂಪಾಡಿ ಸುಬ್ರಹ್ಮಣ್ಯ ಭಟ್ ರವರು ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿದರು.ಈ ಸಂದರ್ಭದಲ್ಲಿ ವಿವೇಕಾನಂದ ಕನ್ನಡ ಮತ್ತು ಆಂಗ್ಲ ಮಾಧ್ಯಮದ ಸಂಚಾಲಕರಾದ ಶ್ರೀ ರವೀಂದ್ರ.ಪಿ ರವರು ಉಪಸ್ಥಿತರಿದ್ದರು.              

ಶೈಕ್ಷಣಿಕ ವ್ಯವಸ್ಥೆಯಲ್ಲಿ ಮಾತೃಭಾಷೆಯ ಬೋಧನೆ - ಮಾಹಿತಿ ಕಾರ್ಯಾಗಾರ

ಶೈಕ್ಷಣಿಕ ವ್ಯವಸ್ಥೆಯಲ್ಲಿ ಮಾತೃಭಾಷೆಯ ಬೋಧನೆ – ಮಾಹಿತಿ ಕಾರ್ಯಾಗಾರ

Monday, June 4th, 2012

ವಿವೇಕಾನಂದ ಕನ್ನಡ ಮಾಧ್ಯಮ ಶಾಲೆ, ತೆಂಕಿಲದಲ್ಲಿ ದಿನಾಂಕ ೦೨/೦೬/೨೦೧೨ ರಂದು ಶಿಕ್ಷಕರಿಗಾಗಿ ‘ಶೈಕ್ಷಣಿಕ ವ್ಯವಸ್ಥೆಯಲ್ಲಿ ಮಾತೃಭಾಷೆಯ ಬೋಧನೆ  ಮತ್ತು  ಕಲಿಕೆಯನ್ನು ಪರಿಣಾಮಕಾರಿಯಾಗಿ ಬೋಧನೆಯವ ಬಗ್ಗೆ ಶ್ರೀ ಕಜಂಪಾಡಿ ಸುಬ್ರಹ್ಮಣ್ಯ ಭಟ್ ರವರು ಶಿಕ್ಷಕರೊಂದಿಗೆ ಸಂವಾದ ನಡೆಸಿದರು.ಈ ಸಂದರ್ಭದಲ್ಲಿ ವಿವೇಕಾನಂದ ಶಿಶುಮಂದಿರದ ಸಂಚಾಲಕರಾದ ಶ್ರೀ ಶ್ಯಾಮ್ ಪ್ರಸಾದ್ ಶಾಸ್ತ್ರಿ ರವರು ಉಪಸ್ಥಿತರಿದ್ದರು.

ಮಾಹಿತಿ ಕಾರ್ಯಗಾರ

ಮಾಹಿತಿ ಕಾರ್ಯಗಾರ

Saturday, June 2nd, 2012

ವಿವೇಕಾನಂದ ಕನ್ನಡ ಮಾಧ್ಯಮ ಶಾಲೆಯಲ್ಲಿ  ದಿನಾಂಕ 01/05/2012 ರಂದು ಅನುದಾನ ರಹಿತ ಪ್ರಾಥಮಿಕ ಮತ್ತು ಪ್ರೌಢಶಾಲಾ ಮುಖ್ಯಶಿಕ್ಷಕರಿಗೆ ಸಾರ್ವಜನಿಕ ಶಿಕ್ಷಣಾ ಇಲಾಖೆಯ ವತಿಯಿಂದ ಕ್ಷೇತ್ರ ಶಿಕ್ಷಣಾಧಿಕಾರಿಯ ಸಮಕ್ಷಮದಲ್ಲಿ 2011-12ನೇ ಸಾಲಿನ ಶೈಕ್ಷಣಿಕ ಕಡ್ಡಾಯ ಶಿಕ್ಷಣದ ಬಗ್ಗೆ ಮಾಹಿತಿ ಸಭೆ ನಡೆಯಿತು.

ಕಂಪ್ಯೂಟರ್ ಕಾರ್ಯಾಗಾರ ತರಗತಿ ಆರಂಭ

ಕಂಪ್ಯೂಟರ್ ಕಾರ್ಯಾಗಾರ ತರಗತಿ ಆರಂಭ

Tuesday, May 22nd, 2012

ವಿವೇಕಾನಂದ ಕನ್ನಡ ಮಾಧ್ಯಮ ಶಾಲೆಯಲ್ಲಿ ಶಿಕ್ಷಕರಿಗಾಗಿ ಶೈಕ್ಷಣಿಕ ಕಂಪ್ಯೂಟರ್ ಕಾರ್ಯಾಗಾರ ತರಗತಿಗಳು ದಿನಾಂಕ ೧೫.೦೫.೨೦೧೨ ರಿಂದ ಆರಂಭಗೊಂಡಿದೆ.

ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ಶೇಕಡಾ 96% ಫಲಿತಾಂಶ

ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ಶೇಕಡಾ 96% ಫಲಿತಾಂಶ

Tuesday, May 22nd, 2012

ವಿವೇಕಾನಂದ ಕನ್ನಡ ಮಾಧ್ಯಮ ಶಾಲೆ, ತೆಂಕಿಲ ಪುತ್ತೂರು 2011-12ನೇ ಸಾಲಿನ ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ನಮ್ಮ ಶಾಲೆಯಲ್ಲಿ ಪರೀಕ್ಷೆಗೆ ಹಾಜರಾದ 50ವಿದ್ಯಾರ್ಥಿಗಳಲ್ಲಿ 48 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದು  ಶೇಕಡಾ 96% ಫಲಿತಾಂಶ ಬಂದಿರುತ್ತದೆ. ಇದರಲ್ಲಿ 11 ವಿದ್ಯಾರ್ಥಿಗಳು ವಿಶಿಷ್ಟ ಶ್ರೇಣಿ,  23 ವಿದ್ಯಾರ್ಥಿಗಳು ಪ್ರಥಮ ಶ್ರೇಣಿ ಮತ್ತು  08   ವಿದ್ಯಾರ್ಥಿಗಳು ದ್ವಿತೀಯ ಶ್ರೇಣಿಯಲ್ಲಿ, ಮತ್ತು 05 ವಿದ್ಯಾರ್ಥಿಗಳು ತೃತೀಯ ಶ್ರೇಣಿಯಲ್ಲಿ ಉತ್ತೀರ್ಣರಾಗಿರುತ್ತಾರೆ.     ಅಮೃತ.ಪಿ – 595 ಅಂಕಗಳೊಂದಿಗೆ ಶಾಲೆಗೆ ಪ್ರಥಮ ಸ್ಥಾನಿಯಾಗಿದ್ದಾಳೆ. ಮಾನಸ – 572 ಅಂಕಗಳೊಂದಿಗೆ ಶಾಲೆಗೆ ದ್ವಿತೀಯ […]

Highslide for Wordpress Plugin