ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೇವೆಗಳು, ಸರಕಾರು ಸಾರ್ವಜನಿಕ ಆಸ್ಪತ್ರೆ ಪುತ್ತೂರು ದ.ಕ ಇವರ ಆಶ್ರಯದಲ್ಲಿ ನಮ್ಮ ಶಾಲೆಯಲ್ಲಿ ನಡೆದ ಹದಿಹರೆಯ ಮಾಹಿತಿ ಕಾರ್ಯಾಗಾರದಲ್ಲಿ ಸರಕಾರಿ ಆಸ್ಪತ್ರೆ ಪುತ್ತೂರು ಇಲ್ಲಿನ ಆಪ್ತಸಮಾಲೋಚಕರಾದ ಡಾ. ಸುಶ್ಮಿತಾ ಇವರು ಹದಿಹರೆಯಕ್ಕೆ ಕಾಲಿಡುತ್ತಿರುವ ಕಿಶೋರಿಯರು ತಮ್ಮಲ್ಲಾಗುತ್ತಿರುವ ದೈಹಿಕ ಮತ್ತು ಮಾನಸಿಕ ಬದಲಾವಣೆಗಳನ್ನು ತಿಳಿದುಕೊಂಡಿರಬೇಕು. ಜೊತೆಯಲ್ಲಿ ತಮ್ಮ ಮನೆ, ಸುತ್ತಲ ಪರಿಸರದಲ್ಲಿ ಕೆಲವೊಮ್ಮೆ ಎದುರಾಗಬಲ್ಲ ಸಮಸ್ಯೆಗಳ ಬಗ್ಗೆ ಅರಿವನ್ನು ಹೊಂದಿರಬೇಕು ಎಂದರು.
ಸಾರ್ವಜನಿಕ ಆರೋಗ್ಯ ಇಲಾಖಾ ವತಿಯಿಂದ ಹೆಣ್ಣು ಮಕ್ಕಳಿಗೆ ದೊರೆಯುತ್ತಿರುವ ಸೌಲಭ್ಯಗಳು ಹಾಗೂ ಹೆಣ್ಣು ಮಕ್ಕಳಿಗೆ ಆಗುವಂತ ದೈಹಿಕ, ಮಾನಸಿಕ ಬದಲಾವಣೆಗಳು ಅಂತೆಯೇ ಸುತ್ತಲ ಪರಿಸರದಲ್ಲಿ ಬಂದೊದಗುವ ಸಮಸ್ಯೆಗಳು ಇವುಗಳಿಂದ ತಮ್ಮನ್ನು ತಾವು ರಕ್ಷಿಸಿಕೊಳ್ಳುವ ವಿಧಾನ, ಆರೋಗ್ಯಯುತ ಜೀವನ ನಡೆಸುವ ಕುರಿತು ಸವಿವರವಾಗಿ ಹೇಳಿದರು. ಕಾರ್ಯಕ್ರಮದಲ್ಲಿ ಆಶಾಕಾರ್ಯಕರ್ತೆ ಶ್ರೀಮತಿ ಸುನಂದಾ ಮತ್ತು ಶ್ರೀಮತಿ ವೀಣಾ ಇವರು ವೈಯಕ್ತಿಕ ಶುಚಿತ್ವ ಮತ್ತು ಹದಿಹರೆಯದ ಬಗ್ಗೆ ಮಾಹಿತಿ ನೀಡಿದರು.