ಆಕಾಂಕ್ಷ ಚಾರಿಟೇಬಲ್ ಟ್ರಸ್ಟ್ ವತಿಯಿಂದ ಆಯೋಜಿಸಲಾದ ‘ಪರಿಣಾಮಕಾರಿ ಪೋಷಕತ್ವ’ ಕಾರ್ಯಗಾರದಲ್ಲಿ ಟ್ರಸ್ಟಿನ ವ್ಯವಸ್ಥಾಪಕರಾದ ಡಾ. ಶ್ರೀಶ ಭಟ್ ಇವರು ವೃತ್ತಿ ಆಯ್ಕೆಯ ಮನೋಭೂಮಿಕೆ ವಿಷಯದ ಬಗ್ಗೆ ಹಾಗೂ ಮಂಗಳೂರಿನ ಯೆನಪೋಯ ಸ್ಪೆಷಾಲಿಟಿ ಆಸ್ಪತ್ರೆಯ ಸೈಕಿಯಾಟ್ರಿಸ್ಟ್ ಆದಂತಹ ಡಾ. ರವಿಚಂದ್ರ ಇವರು ಮಕ್ಕಳ ಮಾನಸಿಕ ಆರೋಗ್ಯದ ಬಗ್ಗೆ ತಿಳಿಸುತ್ತಾ ಪೋಷಕರೊಂದಿಗೆ ಸಂವಾದ ನಡೆಸಿದರು. ಶಾಲಾ ಆಡಳಿತ ಮಂಡಳಿ ಅಧ್ಯಕ್ಷರಾದ ಶ್ರೀ ರಮೇಶ್ಚಂದ್ರ ಇವರು ದೀಪ ಬೆಳಗಿಸಿ ಕಾರ್ಯಾಗಾರದ ಪೂರ್ಣ ಪ್ರಯೋಜನ ಪಡೆದುಕೊಳ್ಳುವಂತೆ ತಿಳಿಸಿದರು.