2024-25ನೇ ಶೈಕ್ಷಣಿಕ ಸಾಲಿನಲ್ಲಿ ಶಾಲೆಗೆ ಹೊಸ ಸೇರ್ಪಡೆಗೊಂಡಿರುವ ಹಾಗೂ ಮರು ಸೇರ್ಪಡೆಗೊಂಡಿರುವ ಮಕ್ಕಳ ಹಾಗೂ ಅವರ ಪೋಷಕರಿಗೆ ಶಾಲಾ ಪುನರಾರಂಭದಂದು ಗಣಹೋಮ ನಡೆಸಿ ಸ್ವಾಗತಿಸಲಾಯಿತು. ಶಾಲಾ ಮಾತೃಭಾರತಿ ಸಂಘದ ಅಧ್ಯಕ್ಷರಾದ ಶ್ರೀಮತಿ ಮಂಗಳ ಗೌರಿ ಮತ್ತು ವೆಂಕಟೇಶ್ ದಂಪತಿಗಳು ಪ್ರಧಾನರ್ಚಕರ ಸಮ್ಮುಖದಲ್ಲಿ ದೈವೀ ಕಾರ್ಯ ನೆರವೇರಿಸಿದರು. ಬಂದಂತಹ ಮಕ್ಕಳಿಗೆ ತಿಲಕವಿರಿಸಿ ಆರತಿ ಬೆಳಗಿ ಶುಭ ಕೋರಲಾಯಿತು. ಶಾಲಾ ಆಡಳಿತ ಮಂಡಳಿ, ಅಧ್ಯಕ್ಷರು, ಸಂಚಾಲಕರು ಹಾಗೂ ಸದಸ್ಯರು ಉಪಸ್ಥಿತರಿದ್ದರು.