ರಥಸಪ್ತಮಿ ಆಚರಣೆ

ಪ್ರತಿ ವರ್ಷ ಹೊಸತನವನ್ನು ಪಡೆಯುವ ಸೂರ್ಯನನ್ನು ನೋಡಿ ನಾವು ಬದುಕಲ್ಲಿ ಹೊಸತನವನ್ನು ಪಡೆಯಬೇಕು.
                                                                                                                                             –   ಅಶ್ವಿನಿ ಕೃಷ್ಣ ಮುಳಿಯ.

ಶಾಲೆಯಲ್ಲಿ ರಥಸಪ್ತಮಿಯ ಆಚರಣೆಗೆ ಅಭ್ಯಾಗತರಾಗಿ ಆಗಮಿಸಿದ ಅಶ್ವಿನಿ ಕೃಷ್ಣ ಮುಳಿಯ ಇವರು ” ಪ್ರತಿ ವರ್ಷ ರಥ ಬದಲಿಸಿ ತನ್ನ ಕಾರ್ಯವನ್ನು ಚುರುಕುಗೊಳಿಸುವ ಸೂರ್ಯ ತನ್ನ ಮೂಲಕ ಭುವಿಯ ನಿವಾಸಿಗಳಿಗೆ ಚೈತನ್ಯ ನೀಡುತ್ತಾನೆ. ಈ ಹಿನ್ನೆಲೆಯಲ್ಲಿ ಆತನನ್ನು ಗೌರವಿಸುವ ಸಲುವಾಗಿ ಮೇಘಮಾಸ ,ಶುಕ್ಲ ಪಕ್ಷ ,ಸಪ್ತಮಿತಿಯಾದ ಇಂದು ರಥಸಪ್ತಮಿ ಆಚರಿಸಲಾಗುತ್ತದೆ. ಸೂರ್ಯ ಆರೋಗ್ಯದಾಯಿ. ವೈಜ್ಞಾನಿಕವಾಗಿ ಇದು ಸತ್ಯ. ಈತನ ಕಿರಣಗಳಲ್ಲಿ ವಿಟಮಿನ್ ” ಡಿ ” ಹೇರಳವಾಗಿದೆ ಹಾಗೂ ನಾವು ಆಹಾರ ,ರೋಗ ನಿವಾರಣೆ ,ಮಾನಸಿಕ, ದೈಹಿಕ ಸಾಮರ್ಥ್ಯ ವೃದ್ಧಿಗಾಗಿ ಸೂರ್ಯ ನಮಸ್ಕಾರ ಮಾಡುತ್ತೇವೆ. ಎಂದರು.

                                                                                                                 

ದೀಪ ಪ್ರಜ್ವಲನೆಯೊಂದಿಗೆ ಆರಂಭವಾದ ಸಭಾ ಕಾರ್ಯಕ್ರಮದಲ್ಲಿ ಶಾಲಾ ಅಧ್ಯಕ್ಷರಾದ ರಮೇಶ್ಚಂದ್ರ ಕಾವು, ಪ್ರೌಢ ವಿಭಾಗದ ಮುಖ್ಯ ಗುರುಗಳಾದ ಆಶಾ ಬೆಳ್ಳಾರೆ ಹಾಗೂ ಪ್ರಾಥಮಿಕ ವಿಭಾಗದ ಮುಖ್ಯ ಗುರುಗಳಾದ ನಳಿನಿ ವಾಗ್ಲೆ, ಶಿಕ್ಷಕ – ಸಹ ಶಿಕ್ಷಕ ವೃಂದ ಮತ್ತು ವಿದ್ಯಾರ್ಥಿ ವೃಂದದವರು ಉಪಸ್ಥಿತರಿದ್ದರು.
ಸರಸ್ವತಿ ವಂದನೆಯೊಂದಿಗೆ ಆರಂಭವಾದ ಸಭಾ ಕಾರ್ಯಕ್ರಮವು ಸಾಮೂಹಿಕ ಸೂರ್ಯ ನಮಸ್ಕಾರ ಹಾಗೂ ಶಾಂತಿಮಂತ್ರದೊಂದಿಗೆ ಸಂಪನ್ನಗೊಂಡಿತು. ಶಾಲಾ ಸಹ ಶಿಕ್ಷಕಿ ಶ್ರೀಲತಾ ಕಾರ್ಯಕ್ರಮ ನಿರೂಪಿಸಿದರು.

Highslide for Wordpress Plugin