ಪ್ರಸಕ್ತ ಶೈಕ್ಷಣಿಕ ವರ್ಷದ 5, 6, 7 ನೇ ತರಗತಿ ವಿದ್ಯಾರ್ಥಿಗಳ ಪ್ರಥಮ ಪೋಷಕರ ಸಭೆ ನಡೆಯಿತು. ಶಾಲಾ ಸಂಚಾಲಕರಾದ ಶ್ರೀ ರವಿನಾರಾಯಣ ಮಾತನಾಡಿ ಪೋಷಕರು ಮಕ್ಕಳಲ್ಲಿ ಪ್ರಸ್ತುತ ಸಮಾಜದಲ್ಲಿ ನಡೆಯುವ ಧನಾತ್ಮಕ ವಿಚಾರಗಳನ್ನು ಹೆಚ್ಚಾಗಿ ತುಂಬಬೇಕೆಂಬ ಕಿವಿಮಾತನ್ನು ಹೇಳಿದರು. ಶಾಲಾ ಮುಖ್ಯಗುರುಗಳಾದ ಆಶಾ ಬೆಳ್ಳಾರೆ ಮಾತನಾಡಿ ಮಕ್ಕಳ ಮನೋಸ್ಥೆರ್ಯ ಹೆಚ್ಚಾಗಬೇಕಾದರೆ ಪಾಲಕರು ಮತ್ತು ಮಕ್ಕಳ ಮಧ್ಯೆ ಮುಕ್ತ ಮಾತುಕತೆ ಇರಬೇಕೆಂದರು. ಪೋಷಕರಿಂದ ಆಫ್ ಲೈನ್ ತರಗತಿಗಳ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಲಾಯಿತಾದರೂ ದೈನಂದಿನ ತರಗತಿ ಕೊಠಡಿಗಳಲ್ಲಿ ನಡೆಯುವ ಪಠ್ಯ- ಪಠ್ಯೇತರ ಚಟುವಟಿಕೆಗಳು ಮಗುವಿನ ಸರ್ವತೋಮುಖ ಬೆಳವಣಿಗೆಗೆ ಅತ್ಯಂತ ಪೂರಕವಾಗಿರುತ್ತದೆ ಎಂಬ ಒಮ್ಮತದ ಅಭಿಪ್ರಾಯ ಸಭೆಯಲ್ಲಿ ಮೂಡಿಬಂದಿತು. ಶ್ರೀಮತಿ ಶ್ವೇತಾ ಮಾತಾಜಿ ಯ ಪ್ರಾರ್ಥನೆಯೊಂದಿಗೆ ಪ್ರಾರಂಭವಾದ ಕಾರ್ಯಕ್ರಮದಲ್ಲಿ ರಾಜೇಶ್ ಶ್ರೀಮಾನ್ ಸ್ವಾಗತಿಸಿ, ಶ್ರೀಮತಿ ಉಮಾ ಮೋಹನ್ ನಿರೂಪಿಸಿದರು.




