ಶಿಕ್ಷಣದ ಗುಣಾತ್ಮಕತೆಯಲ್ಲಿ ತೆಂಕಿಲ ವಿವೇಕಾನಂದ ಕನ್ನಡ ಮಾಧ್ಯಮ ಶಲೆಯು ದಿ. ಡಾ| ನಿಟ್ಟೆ ಶಂಕರ ಅಡ್ಯಂತಾಯ ಸ್ಮಾರಕ ಶ್ರೇಷ್ಠ ಶಾಲೆ ಪ್ರಶಸ್ತಿಗೆ ಆಯ್ಕೆಯಾಗಿದೆ. ಮಾ. 3 ರಂದು ದೇರಳಕಟ್ಟೆಯ ನಿಟ್ಟೆ ವಿದ್ಯಾಸಂಸ್ಥೆಯ ಆವರಣದಲ್ಲಿ ನಡೆಯುವ ಸಮಾರಂಭದಲ್ಲಿ ಪ್ರಶಸ್ತಿ ಪ್ರಧಾನ ಕಾರ್ಯಕ್ರಮ ನಡೆದು ಪ್ರಶಸ್ತಿಯೊಂದಿಗೆ ರೂ 10 ಲಕ್ಷ ನಗದು ಪುರಸ್ಕಾರವೂ ದೊರೆತಿದೆ.ನಿಟ್ಟೆ ಮೌಲ್ಯಮಾಪಕರ ತಂಡವು ಶಾಲೆಗೆ ಆಗಮಿಸಿ ಗುಣಾತ್ಮಕತೆಯ ಪರಿಶೀಲನೆ ನಡೆಸಿದ್ದಾರೆ. ಶಾಲಾ ಶೈಕ್ಷಣಿಕ, ಕ್ರೀಡೆ, ಸಾಂಸ್ಕೃತಿಕ ಹಾಗೂ ಸಾಹಿತ್ಯ ಮೊದಲಾದವುಗಳನ್ನು ಪರಿಶೀಲನೆ ನಡೆಸಿದ್ದಾರೆ. ಮಕ್ಕಳನ್ನು ಪರೀಕ್ಷೆ ನಡೆಸಿ ಶಿಕ್ಷಣದ ಗುಣಮಟ್ಟವನ್ನು ಪರಿಶೀಲಿಸಿದ ತಂಡದವದರು ಅತೀ ಕಡಿಮೆ ಶುಲ್ಕದೊಂದಿಗೆ ಸಮಾಜದ ಶಿಕ್ಷಣದ ಸ್ವರೂಪವನ್ನು ರೂಢಿಸಿಕೊಂಡಿರುವ ಕುರಿತು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. 1993-94 ರಲ್ಲಿ 7 ವಿದ್ಯಾರ್ಥಿಗಳೊಂದಿಗೆ ಪ್ರಾರಂಭಗೊಂಡಿರುವ ವಿವೇಕಾನಂದ ಕನ್ನಡ ಮಾಧ್ಯಮ ಶಾಲೆಯಲ್ಲಿ ಪ್ರಸ್ತುತ 950 ಕ್ಕೂ ಅಧಿಕ ಮಕ್ಕಳು ವಿದ್ಯಾಭ್ಯಾಸ ಪಡೆಯುತ್ತಿದ್ದಾರೆ. ಆಡಳಿತ ಮಂಡಳಿ ಅಧ್ಯಕ್ಷರಾಗಿ ರಮೇಶ್ಚಂದ್ರ, ಸಂಚಾಲಕರಾಗಿ ರವಿನಾರಾಯಣ ಹಾಗೂ ಆಶಾ ಬೆಳ್ಳಾರೆ ಮುಖ್ಯಗುರುಗಳಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಮಕ್ಕಳಿಗೆ ಕಲಿಕೆಯಲ್ಲಿ ಬುದ್ಧಿ, ಭಾವ, ಉದ್ದೀಪನ ಪೂರಕಾವದ ಪರಿಸರ ಒದಗಿಸುತ್ತಿದೆ. ವಿದ್ಯಾರ್ಥಿಗಳ ಸ್ವಂತ ಜೀವನಾನುಭವವನ್ನು ಪಠ್ಯಾನುಭವದೊಂದಿಗೆ ಬೆಸೆದು ನಮ್ಮ ನಾಡಿನ ಮನದ ಭಾಷೆ ಕನ್ನಡ ಮಾಧ್ಯಮದಲ್ಲೇ ಶಿಕ್ಷಣ ನೀಡುವ ಪ್ರಯತ್ನ ನಡೆಯುತ್ತಿದೆ. ಶಿಕ್ಷಣದ ಜೊತೆಗೆ, ಪಠ್ಯೇತರ ಚಟುವಟಿಕೆಗಳಲ್ಲೂ ಶಾಲೆಯ ಸಾಧನೆ ಗಮನಾರ್ಹವಾಗಿದೆ. ಶೈಕ್ಷಣಿಕತೆಯ ಜೊತೆಗೆ ಕ್ರೀಡೆ, ಸಾಹಿತ್ಯ ಹಾಗೂ ಸಾಂಸ್ಕೃತಿಕ ಕ್ಷೇತ್ರಗಳಲ್ಲಿ ಹಲವು ಪ್ರಶಸ್ತಿಗಳನ್ನು ಪಡೆದುಕೊಂಡಿರುತ್ತದೆ.




ಶಾಲೆಯಲ್ಲಿ 1000 ವಿದ್ಯಾರ್ಥಿಗಳಿಗೆ ಕುಳಿತು ಓದಬಹುದಾದ ’ವಾಗ್ದೇವಿ ಗ್ರಂಥಾಲಯ’ ಮತ್ತು ಮಕ್ಕಳ ಮನೋಸ್ಥೆರ್ಯವನ್ನು ಹೆಚ್ಚಿಸಲು ಪ್ರತಿ ತರಗತಿಯಲ್ಲೂ ಗ್ರಂಥಾಲಯ, 3ನೇ ತರಗತಿಯಿಂದ 10ನೇ ತರಗತಿಯ ಮಕ್ಕಳಿಗಾಗಿ ಸುಸಜ್ಜಿತವಾದ ’ಮೇಧಾ ಕಂಪ್ಯೂಟರ್’ ಪ್ರಯೋಗಾಲಯ, ಪೂರ್ವಪ್ರಾಥಮಿಕ ಮತ್ತು ಪ್ರಾಥಮಿಕ ಶಾಲಾ ವಿದ್ಯಾರ್ಥಿಗಳಿಗಾಗಿ ’ಚಿಣ್ಣರ ಚಿಲಿಪಿಲಿ’ ಬಾಲ ಉದ್ಯಾನವನ ಕೇಂದ್ರ ಸರಕಾರದ ನೀತಿ ಆಯೋಗದಡಿ ಮಂಜೂರಾದ ಅಟಲ್ ಟಿಂಕರಿಂಗ್ ಪ್ರಯೋಗಾಲಯ, ಬೆಳ್ಳಾರೆ, ಪೆರ್ನಾಜೆ, ಕಾವು, ಪಾಣಾಜೆ, ಮಾಣಿ, ವಿಟ್ಲ, ಉಪ್ಪಿನಂಗಡಿ, ಸವಣೂರು, ಪುತ್ತೂರು ನಗರದಲ್ಲಿ ಶಾಲಾ ಮಕ್ಕಳಿಗೆ ಬಸ್ ಸೌಲಭ್ಯವನ್ನು ಒದಗಿಸುತ್ತಿದೆ.
ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ಸತತ ಶೇ. 97 ಕ್ಕಿಂತ ಹೆಚ್ಚು ಫಲಿತಾಂಶ, ರಾಮಾಯಣ, ಮಹಾಭಾರತ ಡ್ರಾಯಿಂಗ್ ಗ್ರೇಡ್ ಪರೀಕ್ಷೆಯಲ್ಲಿ ಶೇ. 100 ಫಲಿತಾಂಶ, , ಶಾಂತಿವನ ಟ್ರಸ್ಟ್, ಸಂಸ್ಕೃತಿ ಜ್ಞಾನ ಪರೀಕ್ಷೆ, ವಿಜ್ಞಾನ ಮಾದರಿ ಮತ್ತು ವಿದ್ಯಾಭಾರತಿ ವಿಜ್ಞಾನ ಮೇಳದಲ್ಲಿ ರಾಜ್ಯ, ರಾಷ್ಟ್ರಮಟ್ಟದ ಸಾಧನೆ, ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್‌ನಲ್ಲಿ ರಾಷ್ಟ್ರಪತಿ ಪುರಸ್ಕಾರ, ಪ್ರತಿಭಾಕಾರಂಜಿಯಲ್ಲಿ ಜಿಲ್ಲೆ, ರಾಜ್ಯಮಟ್ಟದ ಪ್ರಶಸ್ತಿ, ಸಾಂಸ್ಕೃತಿಕ ಹಾಗೂ ಯಕ್ಷಗಾನ ತಂಡಗಳಿಂದ ಹಲವು ಕಡೆಗಳಲ್ಲಿ ಕಾರ್ಯಕ್ರಮ, ಎಸ್.ಜಿ.ಎಫ್.ಐ. ರಾಷ್ಟ್ರೀಯ ಕ್ರೀಡಾಕೂಟದ ಅಥ್ಲೆಟಿಕ್ಸ್ ನಲ್ಲಿ ಮತ್ತು ಗುಂಪಾಟಗಳಲ್ಲಿ ಶಾಲೆಯಿಂದ 25 ಕ್ಕಿಂತ ಅಧಿಕ ವಿದ್ಯಾರ್ಥಿಗಳು ಪ್ರತಿವರ್ಷ ಭಾಗವಹಿಸುತ್ತಿದ್ದಾರೆ.
ವಿದ್ಯಾರ್ಥಿಗಳ ಅಭಿರುಚಿಗೆ ತಕ್ಕಂತೆ ಯಕ್ಷಗಾನ, ತಾಳಮದ್ದಳೆ, ಸಂಗೀತ, ಭರತನಾಟ್ಯ, ಕರಾಟೆ, ಯೋಗ, ಚಿತ್ರಕಲೆ, ಕ್ರಾಫ್ಟ್ ತರಗತಿಗಳು. 3-10 ತರಗತಿ ವಿದ್ಯಾರ್ಥಿಗಳಿಗೆ ಕಂಪ್ಯೂಟರ್ ಮತ್ತು ಅಂತರ್ಜಾಲದ ಮೂಲಕ ಶಿಕ್ಷಣ, ಸಾಂಸ್ಕೃತಿಕ ವಿಭಾಗದಲ್ಲಿರುವ ವಿದ್ಯಾರ್ಥಿಗಳಿಗೆ ವಿವಿಧ ಕಡೆಗಳಲ್ಲಿ ಕಾರ್ಯಕ್ರಮ ಅವಕಾಶ. 7-10 ತರಗತಿ ತನಕ ಪ್ರತಿ ಶನಿವಾರ ಇಂಗ್ಲಿಷ್ ಸಂವಹನ ತರಗತಿಗಳು, ಬಾಲ್ಯದಲ್ಲೇ ಆಡಳಿತಾತ್ಮಕ ಪರೀಕ್ಷೆಗಳ ಪರಿಜ್ಞಾನ ಮತ್ತು ಪ್ರಾಥಮಿಕ ತರಬೇತಿ, ಭಾರತೀಯ ಸಂಸ್ಕೃತಿ ಹಾಗೂ ಪರಂಪರೆಯ ಅರಿವು ಮೂಡಿಸಲು ರಾಷ್ಟ್ರೀಯ ಹಬ್ಬಗಳು, ಧಾರ್ಮಿಕ ಆಚರಣೆಗಳು, ಸಾಹಿತ್ಯ ಕಲಾ ಚಟುವಟಿಕೆಗಳಿಗೆ ಸಾಹಿತ್ಯ ಮಿತ್ರ ಸಂಚಿಕೆಯ ವೇದಿಕೆ ಗ್ರಾಮ ಸಮೀಕ್ಷೆ, ಕೃಷಿ ಚಟುವಟಿಕೆಗಳಲ್ಲಿ ಪಾಲ್ಗೊಳ್ಳುವಿಕೆಗೆ ಅವಕಾಶಗಳನ್ನು ಸಂಸ್ಥೆ ನೀಡುತ್ತಿದೆ.