ವಿವೇಕಾನಂದ ಕನ್ನಡ ಮಾಧ್ಯಮ ಶಾಲೆಯಲ್ಲಿ ರಥ ಸಪ್ತಮಿಯಂದು ಸಾಮೂಹಿಕ ಸೂರ್ಯ ನಮಸ್ಕಾರ ಕಾರ್ಯಕ್ರಮ ನಡೆಸಿದ ಸಂದರ್ಭದಲ್ಲಿ ವಿದ್ಯಾರ್ಥಿ ಸಮೂಹವನ್ನುದ್ದೇಶಿಸಿ ಶಾಲಾ ಪೋಷಕರೂ, ಯೋಗ ಶಿಕ್ಷಕಿಯು ಆದ ಶ್ರೀಮತಿ ಶರಾವತಿ ರವಿನಾರಾಯಣ ಮಾತನಾಡಿ ’ಜಗತ್ತಿನ ಎಲ್ಲಾ ಜೀವಿರಾಶಿಗೂ ಶಕ್ತಿಯ ಪ್ರಧಾನ ಮೂಲ ಸೂರ್ಯ. ಉತ್ತರಾಯಣದಲ್ಲಿ ಬರುವ ಮಾಘ ಶುದ್ಧ ಸಪ್ತಮಿಯಂದು ಆಚರಿಸುವ ರಥ ಸಪ್ತಮಿ ಹಬ್ಬವು ಅತ್ಯಂತ ಅರ್ಥಪೂರ್ಣವಾಗಿ ಸೂರ್ಯದೇವನಿಗೆ ಸಲ್ಲಿಸುವ ಕೃತಜ್ಞತೆಯಾಗಿದೆ ಎಂದು ತಿಳಿಸಿದರು. ಶಾಲಾ ಆಡಳಿತ ಮಂಡಳಿಯ ಅಧ್ಯಕ್ಷರಾದ ಶ್ರೀಯುತ ರಮೇಶ್ಚಂದ್ರರವರ ಮಾರ್ಗದರ್ಶನದಲ್ಲಿ ಯಶಸ್ವಿಯಾಗಿ ನಡೆಸಲಾದ ಕಾರ್ಯಕ್ರಮದಲ್ಲಿ ಆಡಳಿತ ಮಂಡಳಿ ಸಂಚಾಲಕರಾದ ಶ್ರೀ ರವಿನಾರಾಯಣ, ಮುಖ್ಯಗುರುಗಳು ಉಪಸ್ಥಿತರಿದ್ದರು. ಶಿಕ್ಷಕರಾದ ರಂಗಪ್ಪ ಶ್ರೀಮಾನ್ ಮತ್ತು ಶ್ರೀಮತಿ ವೀಣಾಸರಸ್ವತಿ ವಿದ್ಯಾರ್ಥಿಗಳಿಗೆ ಅಗತ್ಯವಾದ ಸೂಚನೆಯನ್ನಿತ್ತು ಕಾರ್ಯಕ್ರಮ ನಿರೂಪಿಸಿ ವಂದಿಸಿದರು.





