ತ್ಯಾಗರಾಜ ಸ್ಪೋರ್ಟ್ ಸಂಕೀರ್ಣ, ನವದೆಹಲಿ ಇಲ್ಲಿ ನಡೆದರಾಷ್ಟ್ರೀಯ ಮಟ್ಟದ ’ಆವಿಷ್ಕಾರ ಮೇಕಥಾನ್’ ವಿಜ್ಞಾನ ಮತ್ತು ತಂತ್ರಜ್ಞಾನದ ಆಚರಣೆಯ ಅಂಗವಾಗಿ, ವಿಶೇಷವಾಗಿ ಅಟಲ್ ಟಿಂಕರಿಂಗ್ ಲ್ಯಾಬ್ ಹೊಂದಿರುವ ಶಾಲೆಗಳಿಗೆ ನಡೆದ ಸೃಜನಾತ್ಮಕ ಮಾದರಿ ತಯಾರಿಕೆಯ ಸ್ಪರ್ಧೆಯಲ್ಲಿ ವಿವೇಕಾನಂದ ಕನ್ನಡ ಮಾಧ್ಯಮ ಶಾಲೆಯ ಪ್ರಣವ ಎಮ್. ಭಟ್ ಮತ್ತು ಪ್ರಮಥ ಎಮ್. ಭಟ್ ದ್ವಿತೀಯ ಸ್ಥಾನ ಗಳಿಸಿರುತ್ತಾರೆ. ಇವರು ಶಾಲಾ ಸಂಚಾಲಕರೂ, ಮೈತ್ರಿ ಇಲೆಕ್ಟ್ರಿಕಲ್ಸ್‌ನ ಮಾಲಕರೂ ಆದ ಶ್ರೀ ರವಿನಾರಾಯಣ ಮತ್ತು ಶ್ರೀಮತಿ ಶರಾವತಿ ರವಿನಾರಾಯಣ ದಂಪತಿಗಳ ಪುತ್ರರಾಗಿರುತ್ತಾರೆ.
