ಸಾರ್ವಜನಿಕ ಶಿಕ್ಷಣ ಇಲಾಖೆ ವತಿಯಿಂದ ಮಂಡ್ಯಜಿಲ್ಲೆಯ ನಾಗಮಂಡಲ ತಾಲೂಕಿನ ಆದಿಚುಂಚನಗಿರಿ ಕ್ರೀಡಾಂಗಣದಲ್ಲಿ ನವೆಂಬರ್ 11 ರಿಂದ 14 ರ ತನಕ ನಡೆದ ರಾಜ್ಯಮಟ್ಟದ ಪ್ರಾಥಮಿಕ ಮತ್ತು ಪ್ರೌಢಶಾಲಾ ವಿದ್ಯಾರ್ಥಿಗಳ ಕ್ರೀಡಾಕೂಟದಲ್ಲಿ 14 ರ ವಯೋಮಾನದ ಬಾಲಕಿಯರ ವಿಭಾಗದ 4×100 ಮೀ ರಿಲೇ ನಲ್ಲಿ ವಿವೇಕಾನಂದ ಕನ್ನಡ ಮಾಧ್ಯಮ ಶಾಲೆಯ 8ನೇ ತರಗತಿ ವಿದ್ಯಾರ್ಥಿನಿಯರಾದ ಪೂರ್ಣಲಕ್ಷ್ಮೀ (ಸಂಪ್ಯ ಬೈಲಾಡಿ ನಿವಾಸಿ ರವಿ ಮತ್ತು ಶೀಲಾವತಿ ದಂಪತಿಗಳ ಪುತ್ರಿ), ನಿಶಾ ಬಿ.ಎಮ್ (ಸಂಪ್ಯ ಬೈಲಾಡಿ ನಿವಾಸಿ ಮಂಜಪ್ಪ ಗೌಡ ಮತ್ತು ರೂಪ ದಂಪತಿಗಳ ಪುತ್ರಿ), ಯಶಸ್ವಿನಿ (ಸಂಪ್ಯ ಬೈಲಾಡಿ ನಿವಾಸಿ ಶೀನಪ್ಪ ಗೌಡ ಮತ್ತು ಪುಷ್ಪಾವತಿ ದಂಪತಿಗಳ ಪುತ್ರಿ), ಮನ್ವಿತಾ (ಇಡ್ಕಿದು ನಿವಾಸಿ ದೇವಪ್ಪಗೌಡ ಮತ್ತು ಹೇಮಾವತಿ ದಂಪತಿಗಳ ಪುತ್ರಿ) ಇವರ ತಂಡ ಪ್ರಥಮ ಸ್ಥಾನದೊಂದಿಗೆ ಚಿನ್ನದ ಪದಕ ಪಡೆದು ರಾಷ್ಟ್ರಮಟ್ಟಕ್ಕೆ ಆಯ್ಕೆಯಾಗಿದೆ. ಹಾಗೂ ವಿದ್ಯಾಭಾರತಿ ಕರ್ನಾಟಕ ವತಿಯಿಂದ ನಡೆದ ಅಖಿಲಾ ಭಾರತೀಯ ಮಟ್ಟದ ಕ್ರೀಡಾಕೂಟದಲ್ಲಿ ಮಹಮ್ಮದ್ ಆದಿಲ್ (ಕಬಕ ನಿವಾಸಿ ಮಹಮ್ಮದ್ ಆರೀಫ್ ಮತ್ತು ಖುಶಾನ್ವಿ ದಂಪತಿಗಳ ಪುತ್ರ) ಹರ್ಡಲ್ಸ್, ಉದ್ದ ಜಿಗಿತದಲ್ಲಿ ಪ್ರಥಮ ಸ್ಥಾನ ಪಡೆದು ರಾಷ್ಟ್ರಮಟ್ಟಕ್ಕೆ ಆಯ್ಕೆಯಾಗಿದ್ದಾನೆ. ಇವರು ಡಿಸೆಂಬರ್ 4 ರಿಂದ 8 ರ ವರೆಗೆ ಪಂಜಾಬ್ನ ಸಂಗರೂರಿನಲ್ಲಿ ನಡೆಯುವ ರಾಷ್ಟ್ರಮಟ್ಟದ ಕ್ರೀಡಾಕೂಟದಲ್ಲಿ ಭಾಗವಹಿಸಲಿದ್ದಾರೆ. ಇವರಿಗೆ ಅಥ್ಲೆಟಿಕ್ ತರಬೇತುದಾರರಾದ ಶ್ರೀ ಪ್ರೇಮನಾಥ್ ಶೆಟ್ಟಿ ಎಡಪದವು, ಕಾವು ಇವರ ಮಾರ್ಗದರ್ಶನದಲ್ಲಿ ಶಾಲೆಯ ದೈಹಿಕ ಶಿಕ್ಷಣ ಶಿಕ್ಷಕರಾದ ಶ್ರೀ ದಾಮೋದರ ಮತ್ತು ಶ್ರೀಮತಿ ಹರಿಣಾಕ್ಷಿ ಬಲ್ನಾಡು ತರಬೇತಿ ನೀಡುತ್ತಿದ್ದಾರೆ.
