ಶಾರದ ವಿದ್ಯಾನಿಕೇತನ ಪಬ್ಲಿಕ್ ಸ್ಕೂಲ್ ತಲಪ್ಪಾಡಿ ಇದರ ವತಿಯಿಂದ ನಡೆದ ಜಿಲ್ಲಾಮಟ್ಟದ 2019-20 ನೇ ಸಾಲಿನ ಅಟಲ್ ಟಿಂಕರಿಂಗ್ ಫೆಸ್ಟ್ನಲ್ಲಿ ವಿವೇಕಾನಂದ ಕನ್ನಡ ಮಾಧ್ಯಮ ಶಾಲೆಯ ವಿದ್ಯಾರ್ಥಿಗಳಾದ ಚಿನ್ಮಯ ಮಜಿ ’ಅಗ್ರಿಕಲ್ಚರ್ ಟೆಕ್ನೋಲಜಿ’ ವಿಷಯದಲ್ಲಿ ಪ್ರಥಮ ಸ್ಥಾನವನ್ನು ಹಾಗೂ ಪ್ರಣವ ಎಂ ಭಟ್ ಮತ್ತು ಪ್ರತೀಕ್ ಇವರ ತಂಡ ’ಸೃಜನಾತ್ಮಕ’ ವಿಷಯದಲ್ಲಿ ಪ್ರಥಮ ಸ್ಥಾನವನ್ನು ಗಳಿಸಿರುತ್ತಾರೆ. ಹಾಗೆಯೇ ಶಿಶಿರ್ ಮತ್ತು ಆದರ್ಶ್ ಇವರ ತಂಡ ’ಸಂಪನ್ಮೂಲ ನಿರ್ವಹಣೆ’ ವಿಷಯದಲ್ಲಿ ದ್ವಿತೀಯ ಸ್ಥಾನವನ್ನು ಗಳಿಸಿರುತ್ತಾರೆ.
