ಕನಕದಾಸರ ಕಾವ್ಯ ಪರಂಪರೆಯಲ್ಲಿ ಜನಜೀವನದ ಭಾಷೆಯನ್ನು ಕಾಣಬೇಕು- ವೀಣಾಸರಸ್ವತಿ
ವಿವೇಕಾನಂದ ಕನ್ನಡ ಶಾಲೆಯಲ್ಲಿ ’ಮಹತಿ’ ಕನ್ನಡ ಸಂಘದ ವತಿಯಿಂದ ಕನಕದಾಸರ ಜಯಂತಿ ಆಚರಿಸಲಾಯಿತು. ಪ್ರಾಥಮಿಕ ಶಾಲಾ ಶಿಕ್ಷಕರ ಉಪಸ್ಥಿತಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಶ್ರೀಮತಿ ವೀಣಾಸರಸ್ವತಿ ಇವರು ಕನಕದಾಸರ ಹಾಡುಗಳನ್ನು ಮಕ್ಕಳಿಂದ ಹಾಡಿಸುತ್ತಾ ಅರ್ಥ ವ್ಯಾಖ್ಯಾನದೊಂದಿಗೆ ಕಥೆ ಹೇಳುತ್ತಾ ಅವರ ಕರ್ಮ ಮಾರ್ಗ, ಭಕ್ತಿ ಮಾರ್ಗ ಹಾಗೂ ಜ್ಞಾನಮಾರ್ಗವು ನಮಗೆಲ್ಲಾ ಸ್ಪೂರ್ತಿಯಾಗಿದೆ ಎಂದರು.
