ವಿದ್ಯಾಭಾರತಿ ಭಾರತೀಯ ಶಿಕ್ಷಣ ಸಂಸ್ಥಾನ ನವದೆಹಲಿ ಆಶ್ರಯದಲ್ಲಿ ಹೈದರಾಬಾದ್ನಲ್ಲಿ ನಡೆದ ದಕ್ಷಿಣ ಭಾರತ ಮಟ್ಟದ ಕ್ರೀಡಾಕೂಟ ‘ಖೇಲ್ ಕೂಟ್? 2015-16’ ರಲ್ಲಿ ಪ್ರೌಢಶಾಲಾ ವಿಭಾಗದ ಬಾಲಕಿಯರ ಕಬಡ್ಡಿ ಮತ್ತು ಖೋಖೋ ಪಂದ್ಯದಲ್ಲಿ ಇಲ್ಲಿನ ವಿವೇಕಾನಂದ ಕನ್ನಡ ಮಾಧ್ಯಮ ಶಾಲೆಯ ತಂಡ ಪ್ರಥಮ ಸ್ಥಾನ ಪಡೆದುಕೊಂಡು ರಾಷ್ಟ್ರಮಟ್ಟಕ್ಕೆ ಆಯ್ಕೆಯಾಗಿದೆ.


ಕಬಡ್ಡಿ ತಂಡದಲ್ಲಿ ಸುಶ್ಮಿತಾ, ರಕ್ಷಾ, ಶ್ರೀಲಕ್ಷ್ಮೀ, ಲಿಖಿತ, ಕಾವ್ಯ, ಗಾಯತ್ರಿ, ಲೋಲಾಕ್ಷಿ, ಮೋಕ್ಷಿತಾ, ಪ್ರತಿಕ್ಷಾ, ರಕ್ಷಿತಾ ರೈ, ವಿನುಶ್ರೀ ಪಾಲ್ಗೊಂಡಿದ್ದರು. ಖೋಖೋ ತಂಡದಲ್ಲಿ ಸುಶ್ಮಿತಾ, ರಮ್ಯಶ್ರೀ, ರಕ್ಷಿತಾ, ಶ್ರಾವ್ಯ, ಪೂಜಾಶ್ರೀ, ಧನ್ಯಶ್ರೀ, ಗುಣಶ್ರೀ, ದೀಪಶ್ರೀ, ಅನುಶ್ರೀ, ಪ್ರತಿಮಾ ಪಾಲ್ಗೊಂಡಿದ್ದರು. ರಾಷ್ಟ್ರಮಟ್ಟದ ಕಬಡ್ಡಿ ಪಂದ್ಯಾಟವು ಅ. 10 ರಿಂದ 12 ರ ತನಕ ನೆಹರೂನಗರ ವಿವೇಕಾನಂದ ಕಾಲೇಜು ಕ್ರೀಡಾಂಗಣದಲ್ಲಿ ನಡೆಯಲಿದೆ. ರಾಷ್ಟ್ರಮಟ್ಟದ ಖೋಖೋ ಪಂದ್ಯಾಟವು ಉತ್ತರ ಪ್ರದೇಶದಲ್ಲಿ ಸೆ. 28 ರಿಂದ 30 ರ ತನಕ ನಡೆಯಲಿದೆ.