ದಕ್ಷಿಣ ಭಾರತ ಮಟ್ಟದ ಖೋಖೋ ಪಂದ್ಯದಲ್ಲಿ ವಿವೇಕಾನಂದ ಕನ್ನಡ ಮಾಧ್ಯಮ ಶಾಲಾ ತಂಡ ಪ್ರಥಮ

ವಿದ್ಯಾಭಾರತಿ ಭಾರತೀಯ ಶಿಕ್ಷಣ ಸಂಸ್ಥಾನ ನವದೆಹಲಿ ಆಶ್ರಯದಲ್ಲಿ ಹೈದರಾಬಾದ್‌ನಲ್ಲಿ ನಡೆದ ದಕ್ಷಿಣ ಭಾರತ ಮಟ್ಟದ ಕ್ರೀಡಾಕೂಟ ’ಖೇಲ್‌ಕೂಟ್- 2015-16’ ರಲ್ಲಿ ಪ್ರೌಢಶಾಲಾ ವಿಭಾಗದ ಬಾಲಕಿಯರ ಖೋಖೋ ಪಂದ್ಯದಲ್ಲಿಇಲ್ಲಿನ ವಿವೇಕಾನಂದ ಕನ್ನಡ ಮಾಧ್ಯಮ ಶಾಲೆಯ ತಂಡ ಪ್ರಥಮ ಸ್ಥಾನ ಪಡೆದುಕೊಂಡು ರಾಷ್ಟ್ರಮಟ್ಟಕ್ಕೆ ಆಯ್ಕೆಯಾಗಿದೆ.

ಖೋಖೋ ತಂಡದಲ್ಲಿ ಸುಶ್ಮಿತಾ, ರಮ್ಯಶ್ರೀ, ರಕ್ಷಿತಾ, ಶ್ರಾವ್ಯ, ಪೂಜಾಶ್ರೀ, ಧನ್ಯಶ್ರೀ, ಗುಣಶ್ರೀ, ದೀಪಶ್ರೀ, ಅನುಶ್ರೀ, ಪ್ರತಿಮಾ ಪಾಲ್ಗೊಂಡಿದ್ದರು. ರಾಷ್ಟ್ರಮಟ್ಟದ ಖೋಖೋ ಪಂದ್ಯಾಟವು ಉತ್ತರ ಪ್ರದೇಶದಲ್ಲಿ ಸೆ. 28 ರಿಂದ 30 ರ ತನಕ ನಡೆಯಲಿದೆ.

20150920_161240

Highslide for Wordpress Plugin