ಚೆನ್ನೈನ ಎಸ್.ವಿ.ವಿ.ವಿ. ಕಾಲೇಜಿನಲ್ಲಿ ವಿದ್ಯಾಭಾರತಿ ಅಖಿಲ ಭಾರತೀಯ ಶಿಕ್ಷಾ ಸಂಸ್ಥಾನಮ್ ಅವರು ನಡೆಸಿದ ದಕ್ಷಿಣ ಕ್ಷೇತ್ರಿಯ ಮಟ್ಟದ ಚೆಸ್ ಸ್ಪರ್ಧೆಯಲ್ಲಿ ವಿವೇಕಾನಂದ ಕನ್ನಡ ಮಾಧ್ಯಮ ಶಾಲೆಯ 8 ನೇ ತರಗತಿ ವಿದ್ಯಾರ್ಥಿ ಸಾತ್ವಿಕ್ ಶರ್ಮ ಬಾಲವರ್ಗದ ಬಾಲಕರ ವಿಭಾಗದಲ್ಲಿ ದ್ವಿತೀಯ ಸ್ಥಾನ ಪಡೆದಿರುತ್ತಾರೆ. ಇವರು ಜೀನಿಯಸ್ ಚೆಸ್ ಸ್ಕೂಲ್ನ ವಿದ್ಯಾರ್ಥಿ. ಶ್ರೀ ರಾಜೇಶ್ ಶರ್ಮ ಮತ್ತು ಸೀಮಾ ದಂಪತಿ ಪುತ್ರ.