ವಿವೇಕಾನಂದ ಕನ್ನಡ ಮಾಧ್ಯಮ ಮತ್ತು ಆಂಗ್ಲ ಮಾಧ್ಯಮ ಶಾಲೆಯ ಸಭಾಂಗಣದಲ್ಲಿ ರಕ್ಷಾಬಂಧನ ಕಾರ್ಯಕ್ರಮ ಆಚರಿಸಲಾಯಿತು. ಗಜಾನನ ಪೈ ಬೌದ್ಧಿಕ ಮಂಗಳೂರು ವಿಭಾಗ ಇವರು ರಕ್ಷಾಬಂಧನದ ಬೌದ್ಧಿಕ್ ನೀಡಿದರು.

ಭಾರತದಲ್ಲಿ 7-8 ಶತಮಾನಗಳ ಕಾಲ ವಿದೇಶಿಯರು ಆಕ್ರಮಣ ಮಾಡಿ ಆಳ್ವಿಕೆ ನಡೆಸಿ ಆಸ್ತಿಪಾಸ್ತಿ ದೋಚಿದರು. ಗುಡಿಗೋಪುರ ಹಾಳು ಮಾಡಿ ಸ್ತ್ರೀಯರನ್ನು ಅವಮಾನಿಸಿ ನಮ್ಮ ಸಂಸ್ಕೃತಿಯನ್ನು ಧ್ವಂಸಗೊಳಿಸಿದರು. ಇದರಿಂದ ನಮ್ಮ ಸ್ತ್ರೀಯರಿಗೆ, ಅಕ್ಕ–ತಂಗಿಯರಿಗೆ ಪ್ರಾಣಮಾನದ ರಕ್ಷಣೆಗೆ ರಕ್ಷಾಬಂಧನ ಎಂಬ ಹಬ್ಬವನ್ನು ಆಚರಿಸಲು ಪ್ರಾರಂಭಿಸಲಾಯಿತೆಂದು ಹೇಳಿದರು.
ವೇದಿಕೆಯಲ್ಲಿ ಶಾಲಾಮುಖ್ಯೋಪಾಧ್ಯಾಯರಾದ ಸತೀಶ್ ಕುಮಾರ್ ಉಪಸ್ಥಿತರಿದ್ದರು. ಮತ್ತು ವಿದ್ಯಾರ್ಥಿಗಳು- ಶಿಕ್ಷಕ- ಶಿಕ್ಷಕಿಯರು ರಾಖಿಯನ್ನು ಕಟ್ಟಿ ಸಿಹಿ ಹಂಚಲಾಯಿತು. ಎರಡೂ ವಿದ್ಯಾಸಂಸ್ಥೆಯ ವಿದ್ಯಾರ್ಥಿಗಳು, ಶಿಕ್ಷಕರು ಉಪಸ್ಥಿತರಿದ್ದರು.