ವಿವೇಕಾನಂದ ವಿದ್ಯಾಸಂಸ್ಥೆಗಳಲ್ಲಿ ತೆಂಕಿಲದಲ್ಲಿ 69 ನೇ ಸ್ವಾತಂತ್ರೋತ್ಸವದ ಆಚರಣೆ

ಭಾರತೀಯ ಸೇನೆಯಲ್ಲಿ ದುಡಿಯುವುದು ಸಂತೋಷವನ್ನು ಕೊಡುವುದು, ಜೊತೆಗೆ ದೇಶಸೇವೆ ಮಾಡಿದ ಕೃತಾರ್ಥ ಭಾವನೆಯು ಉಂಟಾಗುತ್ತದೆ. ಭಾರತೀಯ ಸೇನೆಯ ಬಗ್ಗೆ ಎಲ್ಲರು ಅಂತೂ ದೇಶ ಸೇವೆಗೆ ಎಲ್ಲರೂ ಧುಮುಕಬೇಕೆಂದು ಭಾರತೀಯ ಸೇನೆಯ ನಿವೃತ್ತ ಲೆಪ್ಟಿನೆಂಟ್ ಕರ್ನಲ್ ಎಸ್.ಡಿ. ರಾಮಕಾಂತನ್ ಕರೆಕೊಟ್ಟರು. ಇವರು ತೆಂಕಿಲ ವಿವೇಕಾನಂದ ವಿದ್ಯಾಸಂಸ್ಥೆಗಳಲ್ಲಿ ವಿವೇಕಾನಂದ ಆಂಗ್ಲ ಮಾಧ್ಯಮ, ಕನ್ನಡಮಾಧ್ಯಮ, ಬಿ.ಎಡ್ ಮತ್ತು ಡಿ.ಎಡ್ ಶಾಲಾ- ಕಾಲೇಜುಗಳ ಜಂಟಿ ಸ್ವಾತಂತ್ರೋತ್ಸವದ ಧ್ವಜಾರೋಹಣ ಗೈದು ಮಾತನಾಡುತ್ತಿದ್ದರು.

20150815_093920

IMG-20150815-WA0026

20150815_093318

DSCF4505

20150815_103514

20150815_103852

20150815_105350

20150815_113132

ರವೀಂದ್ರ. ಪಿ ಸಂಚಾಲಕರು ವಿವೇಕಾನಂದ ಆಂಗ್ಲ ಮತ್ತು ಕನ್ನಡ ಮಾಧ್ಯಮ, ಪ್ರಾಸ್ತಾವಿಕಮಾತನಾಡಿದರು. ಸಮಾರಂಭದಲ್ಲಿ ಡಾ| ಕೆ.ಎಮ್. ಕೃಷ್ಣ ಭಟ್ ಅಧ್ಯಕ್ಷರು ವಿವೇಕಾನಂದ ಆಂಗ್ಲಮಾಧ್ಯಮ, ಮತ್ತು ಕನ್ನಡ ಮಾಧ್ಯಮ ಶಾಲೆ, ಶೋಭಾ ಕೊಳತ್ತಾಯ ಸದಸ್ಯರು ವಿವೇಕಾನಂದ ಆಂಗ್ಲಮಾಧ್ಯಮ, ಕನ್ನಡ ಮಾಧ್ಯಮ ಶಾಲೆ. ಡಾ| ದಿನೇಶ್ ಚಂದ್ರ ಪ್ರಾಂಶುಪಾಲರು ವಿವೇಕಾನಂದಬಿ.ಎಡ್ ಕಾಲೇಜು, ಅನುರಾಧ ಪ್ರಾಂಶುಪಾಲರು ವಿವೇಕಾನಂದ ಡಿ.ಎಡ್ ಕಾಲೇಜು, ಅಚ್ಯುತನಾಯಕ್, ಖಜಾಂಜಿ, ವಿವೇಕಾನಂದ ಆಂಗ್ಲ ಮಾಧ್ಯಮ ಮತ್ತು ಕನ್ನಡ ಮಾಧ್ಯಮ ಶಾಲೆ, ರವಿಮುಂಗ್ಲಿಮನೆ ಅಧ್ಯಕ್ಷರು, ರಕ್ಷಕ-ಶಿಕ್ಷಕ ಸಂಘ, ವಿವೇಕಾನಂದ ಆಂಗ್ಲ ಶಾಲೆ, ವಸಂತಸುವರ್ಣ ಅಧ್ಯಕ್ಷರು, ರಕ್ಷಕ-ಶಿಕ್ಷಕ ಸಂಘ, ವಿವೇಕಾನಂದ ಕನ್ನಡ ಮಾಧ್ಯಮ ಶಾಲೆ, ಸತೀಶ್ಕುಮಾರ್ ರೈ ಮುಖ್ಯೋಪಾಧ್ಯಾಯರು ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆ, ನಳಿನಿಮುಖ್ಯೋಪಾಧ್ಯಾಯಿನಿ, ವಿವೇಕಾನಂದ ಕನ್ನಡ ಮಾಧ್ಯಮ ಶಾಲೆ ಉಪಸ್ಥಿತರಿದ್ದರು. ವತ್ಸಲಾರಾಜ್ಞಿ ಸ್ವಾಗತಿಸಿ, ಶೋಭಿತಾ ಸತೀಶ್ ವಂದಿಸಿ, ಪ್ರಸನ್ನ ಕುಮಾರಿ ಕಾರ್ಯಕ್ರಮ ನಿರೂಪಿಸಿದರು.

ಧ್ವಜರೋಹಣ ಕಾರ್ಯಕ್ರಮದ ಬಳಿಕ ಕನ್ನಡ ಮಾಧ್ಯಮದ ವಿದ್ಯಾರ್ಥಿಗಳಿಗೆ ಶಾಲಾ ಸಭಾಂಗಣದಲ್ಲಿ ಸ್ವಾತಂತ್ರೋತ್ಸವದ ಸಂದರ್ಭದಲ್ಲಿ ಏರ್ಪಡಿಸಿದ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಬಹುಮಾನವನ್ನು ವಿತರಿಸಲಾಯಿತು. ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಶಾಲಾ ಆಡಳಿತ ಮಂಡಳಿಯ ಸದಸ್ಯರಾದ ಶ್ರೀಮತಿ ಶೋಭ ಕೊಳತ್ತಾಯ ಉಪಸ್ಥಿತರಿದ್ದು ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಿ ಶುಭ ಹಾರೈಸಿದರು.

Highslide for Wordpress Plugin