ದಿನಾಂಕ 10-8-2015 ರಂದು ಕೌಕ್ರಾಡಿ ಸಂತ ಜಾರ್ಜ್‌ಆಂಗ್ಲಮಾಧ್ಯಮ ಪ್ರೌಢಶಾಲೆಯಲ್ಲಿ ಸಾರ್ವಜನಿಕ ಶಿಕ್ಷಣ ಇಲಾಖಾ ವತಿಯಿಂದ ನಡೆದ ತಾಲ್ಲೂಕು ಮಟ್ಟದ ಕರಾಟೆ ಸ್ಪರ್ಧೆಯಲ್ಲಿ ವಿವೇಕಾನಂದ ಕನ್ನಡ ಮಾಧ್ಯಮ ಶಾಲೆ, ತೆಂಕಿಲ ಇಲ್ಲಿನ 8 ನೇ ತರಗತಿ ವಿದ್ಯಾರ್ಥಿ ಸಾತ್ವಿಕ್ ಶರ್ಮ ಬಿ.ಎಸ್. 30-35 ಕೆ.ಜಿ ವಿಭಾಗದ ಬಾಲಕರ ಕುಮಿಟೆಯಲ್ಲಿ ಪ್ರಥಮ ಸ್ಥಾನ, 8 ನೇ ತರಗತಿಯ ಲತೇಶ್ ಕೆ.ಎಸ್ 35-40 ಕೆ.ಜಿ ವಿಭಾಗದ ಬಾಲಕರ ಕುಮಿಟೆಯಲ್ಲಿ ಪ್ರಥಮ ಸ್ಥಾನ, 10ನೇ ತರಗತಿಯ ಅಮಿತ್ 30-35 ಕೆ.ಜಿ ಪ್ರೌಢಶಾಲಾ ಬಾಲಕರ ಕುಮಿಟೆಯಲ್ಲಿ ದ್ವಿತೀಯ ಸ್ಥಾನ ಪಡೆದಿರುತ್ತಾರೆ.
