ಮೌಲ್ಯಗಳನ್ನು ತುಂಬುವ ಸಾಮರ್ಥ್ಯ ಶಿಕ್ಷಕನಿಗೆ ಅಗತ್ಯ – ಶ್ರೀ ನಾರಾಯಣ ಭಟ್ ಟಿ.

ದಿನಾಂಕ 18-07-2015 ರಂದು ವಿವೇಕಾನಂದ ಕನ್ನಡ ಮಾಧ್ಯಮ ಶಾಲೆಯಲ್ಲಿ ಶ್ರೀರಾಮ ಕ್ಲಸ್ಟರ್ ಮತ್ತು ವಿವೇಕಾನಂದ ಕ್ಲಸ್ಟರ್‌ನ ಶಿಕ್ಷಕರಿಗಾಗಿ ನಡೆದ, ಶೈಕ್ಷಣಿಕ ಸಂಪನ್ಮೂಲ ಕಾರ್ಯಾಗಾರವನ್ನು ಉದ್ಘಾಟಿಸಿದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ, ರಾಮಕುಂಜದ ಮುಖ್ಯೋಪಾಧ್ಯಾಯರಾದ ಶ್ರೀ ನಾರಾಯಣ ಭಟ್ ಟಿ. ಇವರು ‘ಮಕ್ಕಳಲ್ಲಿ ಮೌಲ್ಯಗಳನ್ನು ತುಂಬುವ ಸಾಮರ್ಥ್ಯ ಶಿಕ್ಷಕನಿಗೆ ಅಗತ್ಯ ಮತ್ತು ಅದು ಶಿಕ್ಷಕರಿಗೆ ಮಾತ್ರ ಇರುವುದು ಎಂದು ನುಡಿದರು. ಅವರು ವಿವೇಕಾನಂದ ಶಿಕ್ಷಣ ಸಂಸ್ಥೆಗಳು ಇಂತಹ ಕಾರ್ಯಾಗಾರಗಳನ್ನು ಸಂಘಟಿಸಿ ಶಿಕ್ಷಕರಲ್ಲಿನ ಮೌಲ್ಯಗಳನ್ನು ಉದ್ಧೀಪನಗೊಳಿಸುವ ಕಾರ್ಯ ನಡೆಸುತ್ತಿರುವುದು ಶ್ಲಾಘನೀಯ’ ಎಂದು ಹೇಳಿದರು.

20150718_095447

20150718_101237

20150718_104035

20150718_095726

ಕಾರ್ಯಕ್ರಮದಲ್ಲಿ ಶಾಲಾ ಸಂಚಾಲಕರಾದ ರವೀಂದ್ರ.ಪಿ, ಆಡಳಿ ಮಂಡಳಿಯ ಸದಸ್ಯರಾದ ಡಾ.ಸುಲೇಖ ವರದರಾಜ್, ಸಂಪನ್ಮೂಲ ವ್ಯಕ್ತಿಗಳಾದ ಡಾ.ಪುಷ್ಪರಾಜ್ ಮತ್ತು ಶ್ರೀಮತಿ ಕೃಷ್ಣವೇಣಿ ಹಾಗೂ ಪ್ರಾಥಮಿಕ ಶಾಲಾ ಮುಖ್ಯಗುರುಗಳಾದ ಶ್ರೀಮತಿ ನಳಿನ ವಾಗ್ಲೆ, ಆಂಗ್ಲ ಮಾಧ್ಯಮ ಶಾಲೆಯ ಹಿರಿಯ ಶಿಕ್ಷಕಿ ಶ್ರೀಮತಿ ಮೋಹಿನಿ ಉಪಸ್ಥಿತರಿದ್ದರು. ಕಾರ್ಯಕ್ರಮವನ್ನು ಕು.ಅನೂಷಾ ಸ್ವಾಗತಿಸಿ, ಕು.ನಿಶ್ಚಿತಾ ಮಂದಿಸಿದರು. ಶ್ರೀ ರಾಜೇಶ್ ನಿರೂಪಿಸಿದರು.

Highslide for Wordpress Plugin