ವಿದ್ಯಾರ್ಥಿಗಳಲ್ಲಿ ಏಕಾಗ್ರತೆ, ಚಿತ್ತಶಾಂತಿ, ದೈಹಿಕ ಹಾಗೂ ಮಾನಸಿಕ ಆರೋಗ್ಯಕ್ಕಾಗಿ ಯೋಗ ಶಿಕ್ಷಣದ ಅವಶ್ಯಕತೆ ವಿದ್ಯಾಸಂಸ್ಥೆಗಳಲ್ಲಿ ಇಂದು ನಡೆಯಬೇಕಾದ ಪ್ರಮುಖ ಪ್ರಕ್ರಿಯೆಯಾಗಿದೆ ಎಂದು ಅಂತರರಾಷ್ಟ್ರೀಯ ಯೋಗ ತರಬೇತುದಾರ, ಯೋಗರತ್ನ ಗೋಪಾಲಕೃಷ್ಣ ದೇಲಂಪಾಡಿಯವರು ತಿಳಿಸಿದರು.

ಇವರು ವಿವೇಕಾನಂದ ಕನ್ನಡ ಮಾಧ್ಯಮ ಪ್ರೌಢಶಾಲೆಯಲ್ಲಿ ವಿಶ್ವಯೋಗ ದಿನದ ಪೂರ್ವಭಾವಿಯಾಗಿ ನಡೆದ ‘ಉತ್ತಮಜೀವನ ಶೈಲಿಗಾಗಿ ಯೋಗ’ ಎಂಬ ಕಾರ್ಯಾಗಾರವನ್ನು ನಡೆಸುತ್ತಾಆಧುನಿಕ ಜೀವನ ಪದ್ಧತಿಯಲ್ಲಿ ಯೋಗ ಶಿಕ್ಷಣವು ಸರಳ ವ್ಯಾಯಾಮ, ಪ್ರಾಣಾಯಾಮ, ಯೋಗಾಸನ, ಮುದ್ರಾವಿಜ್ಞಾನ, ಕಲರ್‌ಥೆರಪಿ (ಬಣ್ಣಚಿಕಿತ್ಸೆ) ಆಹಾರ ಪದ್ದತಿಯ ಬಗ್ಗೆ ಮಾಹಿತಿ ಹಾಗೂ ತರಬೇತಿಯನ್ನು ಗೋಪಾಲಕೃಷ್ಣ ದೇಲಂಪಾಡಿಯವರು ನೀಡಿದರು.
ಸಂಸ್ಥೆಯ ಶಿಕ್ಷಕ ರಕ್ಷಕ ಸಂಘದ ಅಧ್ಯಕ್ಷರಾದ ವಸಂತ ಸುವರ್ಣ ಸ್ವಾಗತಿಸಿ ವಂದಿಸಿದರು. ಉದ್ಯಮಿ ಶ್ಯಾಂ ಪ್ರಸಾದ್ ಮುದ್ರಜೆ ತರಬೇತುದಾರರ ಪರಿಚಯ ಮಾಡಿದರು. ಶಾಲಾ ಮುಖ್ಯ ಗುರುಗಳಾದ ಆಶಾ ಬೆಳ್ಳಾರೆ ಹಾಗೂ ಅಧ್ಯಾಪಕ ವೃಂದದವರು ಉಪಸ್ಥಿತರಿದ್ದರು.