ಪ್ರತಿಭಾ ಪುರಸ್ಕಾರ

ವಿವೇಕಾನಂದ ಕನ್ನಡ ಶಾಲೆಯ ಪ್ರಸಕ್ತ ಶೈಕ್ಷಣಿಕ ವರ್ಷದ ‘ಪ್ರತಿಭಾ ಪುರಸ್ಕಾರ’ ಕಾರ್ಯಕ್ರಮವು ಮೂರು ವಿಭಾಗದಲ್ಲಿ ನಡೆಯಿತು. ಪ್ರೌಢವಿಭಾಗದಲ್ಲಿ ನಡೆದ ಕಾರ್ಯಕ್ರಮದಲ್ಲಿ ಸಭಾಧ್ಯಕ್ಷತೆ ವಹಿಸಿದ್ದ ಶಾಲಾ ರಕ್ಷಕ-ಶಿಕ್ಷಕ ಸಂಘದ ಅಧ್ಯಕ್ಷರಾದ ವಸಂತ ಸುವರ್ಣರವರು ವಿಜೇತ ಮಕ್ಕಳಿಗೆ ಶುಭಹಾರೈಸುತ್ತ ಮಕ್ಕಳ ಕಾರ್ಯಕ್ರಮದಲ್ಲಿ ಮಕ್ಕಳ ಪೋಷಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕು ಎಂದರು.

IMG_4576

20141204_100027

IMG_4583

20141204_095442

ಈ ಸಂದರ್ಭದಲ್ಲಿ 10 ನೇ ತರಗತಿಯ ಫಲಿತಾಂಶವನ್ನು ಉತ್ತಮ ಪಡಿಸುವ ನಿಟ್ಟಿನಲ್ಲಿ 95+ ನ ‘ದಾರಿ ದೀಪ’ ಕೈಪಿಡಿಯನ್ನು ಬಿಡುಗಡೆಗೊಳಿಸಲಾಯಿತು. ಕಾರ್ಯಕ್ರಮದಲ್ಲಿ ಶಾಲಾ ಸದಸ್ಯರಾದ ರವಿನಾರಾಯಣ ಎಮ್ ಉಪಸ್ಥಿತರಿದ್ದರು. ಹಿರಿಯ ವಿದ್ಯಾರ್ಥಿ ತಿರುಮಲ ಭಟ್ ಮಾತನಾಡಿ ಹಿಂದಿನ ಮತ್ತು ಈಗಿನ ಶಿಕ್ಷಣದ ವ್ಯವಸ್ಥೆಗಳ ಬಗ್ಗೆ ಹಾಗೂ ಶಾಲಾ ಅಭಿವೃದ್ಧಿಯನ್ನು ನೆನಪಿಸಿಕೊಂಡರು. ಹಿರಿಯ ಶಿಕ್ಷಕಿ ರೇವತಿ ಉಪಸ್ಥಿತರಿದ್ದರು.

Highslide for Wordpress Plugin