ರಾಷ್ಡ್ರೀಯ ಕ್ರೀಡಾಕೂಟಕ್ಕೆ ವಿವೇಕಾನಂದ ಕನ್ನಡ ಮಾಧ್ಯಮ ಶಾಲೆಯ 15 ಕ್ರೀಡಾಪಟುಗಳು ಆಯ್ಕೆ

ವಿದ್ಯಾಭಾರತಿ ದಕ್ಷಿಣ ಕ್ಷೇತ್ರೀಯ ಮಟ್ಟದ ಕ್ರೀಡಾಕೂಟವು ದಿನಾಂಕ 10-10-2014 ರಿಂದ 12-10-2014 ರ ವರೆಗೆ ತಮಿಳುನಾಡಿನ ತಿರುನಲ್‌ವೆಲಿ ನಡೆದ ಅತ್ಲೆಟಿಕ್ ವಿಭಾಗದಲ್ಲಿ ವಿವೇಕಾನಂದ ಕನ್ನಡ ಮಾಧ್ಯಮ ಶಾಲೆಯ ಪ್ರೌಢ ಶಾಲಾ ಬಾಲಕರ ಮತ್ತು ಬಾಲಕಿಯರ ವಿಭಾಗದಲ್ಲಿ ಸಮಗ್ರ ತಂಡ ಪ್ರಸಸ್ತಿಯೊಂದಿಗೆ ದಿನಾಂಕ 16-11-2014 ರಿಂದ 18-11-2014 ರ ವರೆಗೆ ಮಂಗಳೂರಿನ ಶಾರದಾ ವಿದ್ಯಾಲಯದಲ್ಲಿ ನಡೆಯುವ ಅಖಿಲಾ ಭಾರತೀಯ ರಾಷ್ಟ್ರೀಯ ಕ್ರೀಡಾಕೂಟಕ್ಕೆ 15 ಕ್ರೀಡಾಪಟುಗಳು ಆಯ್ಕೆಯಾಗಿದ್ದಾರೆ. ಇವರಿಗೆ ಶ್ರೀ ದಾಮೋದರ, ಬೆಟ್ಟಂಪಾಡಿ, ಶ್ರೀಮತಿ ಹರೀಣಾಕ್ಷಿ, ಬಲ್ನಾಡು ಮತ್ತು ಶ್ರೀ ಕೃಷ್ಣಪ್ರಸಾದ್ ಬೆಟ್ಟಂಪಾಡಿ, ತರಬೇತಿ ನೀಡಿರುತ್ತಾರೆ ಎಂದು ಶಾಲಾ ಮುಖ್ಯೋಪಾಧ್ಯಾಯಿನಿ ಶ್ರೀಮತಿ ಆಶಾ ಬೆಳ್ಳಾರೆ ತಿಳಿಸಿದ್ದಾರೆ.

VKVlist

Highslide for Wordpress Plugin