ರಾಷ್ಟ್ರ ರಕ್ಷೆಯ ರಕ್ಷಾಬಂಧನ ಉತ್ಸವ

ನಮ್ಮ ಮತ್ತು ಸಮಾಜದ ನಡುವೆ ಸಂಬಂಧ ಬಲಗೊಳಿಸುವ ಕೊಂಡಿ ರಕ್ಷಾಬಂಧನ ಉತ್ಸವ ಎಂದು ವಿವೇಕಾನಂದ ವಿದ್ಯಾಸಂಸ್ಥೆಗಳು ವಿವೇಕನಗರ, ತೆಂಕಿಲದಲ್ಲಿ ನಡೆದ ರಕ್ಷಾಬಂಧನ ಉತ್ಸವದಲ್ಲಿ ‘ಸಂಸ್ಕೃತ ಭಾರತೀಯ’ ಸಂಚಾಲಕರಾದ ಶ್ರೀ ಆದರ್ಶ ಗೋಖಲೆ ನುಡಿದರು. ಅವರು ಮಾತನಾಡುತ್ತ ಮರ ಹಾಗೂ ಗೋವು ಪರರಿಗೋಸ್ಕರ ಜೀವಿಸುತ್ತದೆ. ಆದರೆ ನಾವು ಸಮಾಜಕ್ಕೆ ಏನು ಕೊಟ್ಟಿದ್ದೇವೆ ಎಂಬುದನ್ನು ಯೋಚಿಸಬೇಕು ಎಂದರು. ರಕ್ಷಾಬಂಧನಕ್ಕೆ ತನ್ನದೇ ಇತಿಹಾಸ ಇದೆ. ಗುರು ಭಗವಧ್ವಜ ದೇಶದ ಮೌಲ್ಯಗಳ ಪ್ರತೀಕ. ರಕ್ಷೆ ನಮಗೆ ವೈಯಕ್ತಿಕ ಜೀವನದ ಜತೆಗೆ ಸಾಮಾಜಿಕ ಜವಾಬ್ದಾರಿಯನ್ನು ನೆನಪಿಸುತ್ತದೆ ಎಂದರು.

20140809_114415000

20140809_113449

20140809_104931
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಿವೇಕಾನಂದ ಕನ್ನಡ ಮತ್ತು ಆಂಗ್ಲ ಮಾಧ್ಯಮ ಸಂಸ್ಥೆಗಳ ಶಾಲಾ ಆಡಳಿತ ಮಂಡಳಿಯ ಅಧ್ಯಕ್ಷರಾದ ಡಾ| ಕೆ.ಎಂ. ಕೃಷ್ಣ ಭಟ್ ವಹಿಸಿಕೊಂಡಿದ್ದರು. ಚಂದ್ರಶೇಖರ್ ನಾಯ್ಕ ಸ್ವಾಗತಿಸಿದರು. ವಿದ್ಯಾರ್ಥಿಗಳು ಪಂಚಾಂಗ, ಸಮೂಹಗೀತೆ, ಸುಭಾಷಿತಗಳನ್ನಾಡಿದರು.ಶ್ರೀಮತಿ ಪೂರ್ಣಿಮಾ ಮಾತಜಿಯವರು ರಕ್ಷಾಸಂದೇಶವನ್ನು ವಾಚಿಸಿದರು. ಶ್ರೀ ಅಜಿತ್ ಕಾರ್ಯಕ್ರಮ ನಿರ್ವಹಿಸಿದರು. ಶ್ರೀಮತಿ ಮೋಹಿನಿ ಧನ್ಯವಾದ ಸಮರ್ಪಿಸಿದರು. ಸಂಘದ ಪ್ರಾರ್ಥನೆಯೊಂದಿಗೆ ಕಾರ್ಯಕ್ರಮ ಮುಕ್ತಾಯಗೊಂಡಿತು.

Highslide for Wordpress Plugin