ಸಾಮೂಹಿಕ ಹುಟ್ಟುಹಬ್ಬ ಆಚರಣೆ

ಸಾಮೂಹಿಕ ಹುಟ್ಟುಹಬ್ಬದಂತಹ ಆಚರಣೆಗಳು ಭಾರತದ ಸಂಸ್ಕೃತಿ ಹಾಗೂ ಏಕತೆಯನ್ನು ಪ್ರತಿಬಿಂಬಿಸುತ್ತದೆ ಎಂದು ಖ್ಯಾತ ಸಾಹಿತಿ, ನಿವೃತ್ತ ಅಧ್ಯಾಪಕರಾದ ವಿದ್ವಾನ್ ಮಧುರಕಾನನ ಗೋಪಾಲಕೃಷ್ಣ ಭಟ್ ಅವರು ಹೇಳಿದರು. ಅವರು ವಿವೇಕಾನಂದ ಕನ್ನಡ ಮಾಧ್ಯಮ ಶಾಲೆಯಲ್ಲಿ ದಿನಾಂಕ 26-07-2014 ರಂದು ನಡೆದ ಸಾಮೂಹಿಕ ಹುಟ್ಟುಹಬ್ಬಕ್ಕೆ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದರು.

20140726_111030

20140726_110347

ಕಾರ್ಯಕ್ರಮದಲ್ಲಿ ಶಾಲಾ ಆಡಳಿತ ಮಂಡಳಿಯ ಸದಸ್ಯರಾದ ಶ್ರೀಯುತ ಶ್ಯಾಮ್ ಪ್ರಸಾದ್ ಶಾಸ್ತ್ರಿ, ರಕ್ಷಕ-ಶಿಕ್ಷಕ ಸಂಘದ ಅಧ್ಯಕ್ಷರಾದ ಶ್ರೀ ವಸಂತ ಸುವರ್ಣ, ಹಿರಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷರಾದ ಶ್ರೀ ಅನೀಶ್ ಬಡೆಕ್ಕಿಲ, ಶಾಲಾ ಹಿರಿಯ ಶಿಕ್ಷಕಿ ಲೀಲಾವತಿ ಮಾತಾಜಿಯವರು ಉಪಸ್ಥಿತರಿದ್ದರು.ಹುಟ್ಟುಹಬ್ಬ ಆಚರಿಸಿಕೊಂಡ ಮಕ್ಕಳಿಗೆ ಮಾತಾಜಿಯವರು ಆರಾತಿ ಬೆಳಗಿ ತಿಲಕಧಾರಣೆ ಮಾಡಿದರು. ಕಾರ್ಯಕ್ರಮವನ್ನು ಶ್ರೀಮತಿ ರೇವತಿ ಮಾತಾಜಿ ಸ್ವಾಗತಿಸಿ, ಶಿಕ್ಷಕ ಹರಿಪ್ರಸಾದ್ ನಿರ್ವಹಿಸಿದರು.

Highslide for Wordpress Plugin