ಸ್ವಗೃಹದಲ್ಲಿ ಗುರುವಂದನಾ ಕಾರ್ಯಕ್ರಮ – ‘ಅಧ್ಯಯನ ಮತ್ತು ಅಧ್ಯಾಪನ ಅಗತ್ಯ : ವೇದವ್ಯಾಸ

ವ್ಯಕ್ತಿಯು ತಾನು ಕಲಿತಿರುವುದನ್ನು ಇನ್ನೊಬ್ಬರಿಗೆ ಹಂಚಿಕೊಳ್ಳುವ ಮತ್ತು ತಾನು ಕಲಿಯುವ ಮೂಲಕ ಜ್ಞಾನವನ್ನು ಬೆಳೆಸಿಕೊಳ್ಳುವ ಕೈಕಂರ್ಯದಲ್ಲಿ ತನ್ನನ್ನು ತೊಡಗಿಸಿಕೊಳ್ಳಬೇಕು. ಪ್ರತಿಯೊಬ್ಬನಲ್ಲೂ ಅಗಾಧವಾದ ಶಕ್ತಿಹುದುಗಿರುತ್ತದೆ. ಆದರೆ ಆತನಿಗೆ ಅದರ ಅರಿವಿರುವುದಿಲ್ಲ ಅದನ್ನು ಗುರುತಿಸಿ ಪ್ರೋತ್ಸಾಹಿಸಿದಾಗ ಆ ಶಕ್ತಿಯು ಸಾಗರೋಲ್ಲಂಘನ ಮಾಡಿದ ಹನುಮಂತನಂತೆ ಹೊರ ಚಿಮ್ಮುತ್ತದೆ. ಎಂದು ಗುರುವಂದನೆಯನ್ನು ಸ್ವೀಕರಿಸಿದ ವಿವೇಕಾನಂದ ಮಹಾವಿದ್ಯಾಲಯದ ನಿವೃತ್ತ ಪ್ರಾಂಶುಪಾಲರಾದ ಶ್ರೀಯುತ ವೇದವ್ಯಾಸರು ಮಕ್ಕಳನ್ನು ಆಶೀರ್ವದಿಸುತ್ತ ಹೇಳಿದರು.

20140711_105457

20140711_105934

20140711_110517

ದಿನಾಂಕ 11-07-2014 ರಂದು ವಿವೇಕಾನಂದ ಕನ್ನಡ ಮಾಧ್ಯಮ ಶಾಲೆಯ 10 ನೇ ತರಗತಿಯ ವಿದ್ಯಾರ್ಥಿಗಳು ಹಾಗೂ ಶಿಕ್ಷಕರು ಶ್ರೀಯುತರ ನಿವಾಸಕ್ಕೆ ತೆರಳಿ ಗುರುಕಾಣಿಕೆಯನ್ನಿತ್ತು ಆಶೀರ್ವಾದ ಪಡೆದರು. ವಿದ್ಯಾರ್ಥಿಗಳಿಗೆ ಉಪಹಾರದೊಂದಿಗೆ ನೆನಪಿನ ಕಾಣಿಕೆಯನ್ನಿತ್ತು ಕುಟುಂಬ ಸಮೇತರಾಗಿ ಮಕ್ಕಳೊಂದಿಗೆ ಮಕ್ಕಳಾಗಿ ಬೆರೆತು ಸಂಭ್ರಮಿಸಿದರು.

Highslide for Wordpress Plugin