ವಿವೇಕಾನಂದ ಕನ್ನಡ ಮಾಧ್ಯಮ ಶಾಲೆ ತೆಂಕಿಲ ಇಲ್ಲಿ ದಿನಾಂಕ 12-06-2014 ರಂದು 2014-15 ನೇ ಪ್ರಸಕ್ತ ಶೈಕ್ಷಣಿಕ ಸಾಲಿನ ಶಾಲಾ ಚುನಾವಣೆಯಲ್ಲಿ ಮತದಾನದ ಪೂರ್ಣ ಅರಿವು ಮೂಡಿಸುವ ದೃಷ್ಟಿಯಲ್ಲಿ ಪ್ರಸ್ತುತ ಮತ ಚಲಾವಣೆಯ ರೀತಿಯನ್ನೇ ಅನುಸರಿಸಲಾಗಿತ್ತು. ವರ್ಷದ ಪ್ರೌಢಶಾಲಾ ವಿದ್ಯಾರ್ಥಿ ನಾಯಕನಾಗಿ ಅಣ್ಣಪ್ಪ – 10 ನೇ ತರಗತಿ, ಉಪನಾಯಕನಾಗಿ ರಂಜಿತ್.ಪಿ.ವಿ.- 10 ನೇ ತರಗತಿ ಆಯ್ಕೆಯಾದರು. ಪ್ರಾಥಮಿಕ ಶಾಲಾ ವಿದ್ಯಾರ್ಥಿನಾಯಕನಾಗಿ ಶ್ರೇಯಸ್ ಕೆ. ಮತ್ತು ಉಪನಾಯಕಿಯಾಗಿ ಕು. ಅಮಿತಾ ಎಸ್.ಎನ್. ಆಯ್ಕೆಯಾದರು. ಅನಂತರ ಮಂತ್ರಿಮಂಡಲದ ಪ್ರತಿಜ್ಞಾ ಸ್ವೀಕಾರ ನಡೆಯಿತು. ಶಿಕ್ಷಕ ಶ್ರೀ ವಿಶ್ವನಾಥ ಮೂಡೂರು ಮತ್ತು ಶ್ರೀ ಹರಿಪ್ರಸಾದವರು ಸಹಕರಿಸಿದರು. ಎಲ್ಲಾ ಶಿಕ್ಷಕರು ಚುನಾವಣಾ ಕರ್ತವ್ಯವನ್ನು ನಿರ್ವಹಿಸಿದರು.
