ವಿವೇಕಾನಂದ ಕನ್ನಡ ಮಾಧ್ಯಮ ಶಾಲೆ ಹಾಗೂ ಸ್ಕೂಲ್ ಆಫ್ ಸೋಶಿಯಲ್ ವರ್ಕ್, ರೋಶನಿ ನಿಲಯ, ಮಂಗಳೂರು ಇದರ ಸಹಪ್ರಾಯೋಜಕತ್ವದಲ್ಲಿ ‘ಅಪರಾಧ ಶಾಸ್ತ್ರ ಮತ್ತು ನ್ಯಾಯ ವಿಜ್ಞಾನ ಶಾಸ್ತ್ರ’ ವಿಭಾಗದಿಂದ ಪ್ರಾತ್ಯಕ್ಷಿಕೆ ಹಾಗೂ ಪ್ರದರ್ಶನವು ದಿನಾಂಕ 11-03-2014 ರಂದು ವಿವೇಕಾನಂದ ಕನ್ನಡ ಮಾಧ್ಯಮ ಶಾಲಾ ಸಭಾಂಗಣದಲ್ಲಿ ಜರುಗಿತು.

ಶಾಲಾ ಅಧ್ಯಕ್ಷರಾದ ಡಾ|ಕೆ.ಎಂ ಕೃಷ್ಣ ಭಟ್ ಕೊಂಕೋಡಿ ಕಾರ್ಯಕ್ರಮವನ್ನು ಉದ್ಫಾಟಿಸಿ ಶುಭ ಹಾರೈಸಿದರು.
ಮುಖ್ಯ ಅತಿಥಿಗಳಾದ ಪುತ್ತೂರಿನ ಖ್ಯಾತ ವಕೀಲರಾದ ಶ್ರೀ ಕೆ.ಆರ್ ಆಚಾರ್ಯ ಇವರು ‘ವಿದ್ಯಾರ್ಥಿಗಳಿಗೆ ಪ್ರಾತ್ಯಕ್ಷಿಕೆಯ ಮಹತ್ವ ಮತ್ತು ಅಪರಾಧ ನಡೆದಾಗ ಸಾಕ್ಷ್ಯಾಧಾರ ನಾಶವಾಗದಂತೆ ಜಾಗರೂಕರಾಗುವ ಬಗ್ಗೆ ತಿಳಿಸಿದರು.
ವೇದಿಕೆಯಲ್ಲಿ ಶಾಲಾ ಸಂಚಾಲಕರಾದ ಶ್ರೀ ರವೀಂದ್ರ.ಪಿ, ಮುಖ್ಯಗುರುಗಳಾದ ಶ್ರೀಮತಿ ಆಶಾ ಬೆಳ್ಳಾರೆ, ರೋಶನಿ ನಿಲಯದ ಉಪನ್ಯಾಸಕರಾದ ಶ್ರೀ ಜಯೀಶ್ ಮತ್ತು ಸಾರಿಕ್ ಅಂಕಿತಾ ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಶಾಲಾ ಆಡಳಿತ ಮಂಡಳಿಯ ಸದಸ್ಯರು, ಸ್ಥಳೀಯ ವಿವಿಧ ಶಾಲೆಗಳಿಂದ ಆಗಮಿಸಿದ ಶಿಕ್ಷಕರು ಮತ್ತು ವಿದ್ಯಾರ್ಥಿಗಳು ಭಾಗವಹಿಸಿದ್ದರು. ಸಭಾಕಾರ್ಯಕ್ರಮದ ಬಳಿಕ ರೋಶನಿ ನಿಲಯದ ಸ್ನಾತಕೋತ್ತರ ವಿದ್ಯಾರ್ಥಿಗಳು ಪ್ರಾತ್ಯಕ್ಷಿಕೆಯನ್ನಿತ್ತರು.
ಶಿಕ್ಷಕಿಯರಾದ ಶ್ರೀಮತಿ ಸ್ವಾತಿಯವರು ಅತಿಥಿಗಳನ್ನು ಸ್ವಾಗತಿಸಿದರು ಕಾರ್ಯಕ್ರಮವನ್ನು ಶ್ರೀಮತಿ ರೇಶ್ಮಾ ನಿರೂಪಿಸಿದರು.