ಕರಾಟೆ – ರಾಷ್ಟ್ರಮಟ್ಟದಲ್ಲಿ ಚಿನ್ನ
ಆಂಧ್ರಪ್ರದೇಶದ ವಿಶಾಖಪಟ್ಟಣದಲ್ಲಿ ವಿಶಾಖ ಬುಡೋಕಾನ್ ಕರಾಟೆ ಫೆಡರೇಶನ್ ವತಿಯಿಂದ ಫೆ.7 ರಿಂದ 9 ರ ತನಕ ನಡೆದ 11ನೇ ರಾಷ್ಟ್ರಮಟ್ಟದ ಮುಕ್ತ ಚಾಂಪಿಯನ್‌ಶಿಪ್‌ನಲ್ಲಿ 35-40 ಕೆ.ಜಿ ವಿಭಾಗದ ಕರಾಟೆ ಸ್ಪರ್ಧೆಯಲ್ಲಿ ವಿವೇಕಾನಂದ ಕನ್ನಡ ಮಾಧ್ಯಮ ಶಾಲಾ 8ನೇ ತರಗತಿ ವಿದ್ಯಾರ್ಥಿ ಶ್ರಮಿತ್ ಕೆ. ಚಿನ್ನದ ಪದಕ ಪಡೆದುಕೊಂಡಿದ್ದಾರೆ.