ಸಾಹಿತಿ ಅಮೃತಸೋಮೇಶ್ವರರ ಮಾಹಿತಿ ಸಂಗ್ರಹ

ಧ್ವನಿ ಶೈಕ್ಷಣಿಕ ಸಂಪನ್ಮೂಲ ಕೇಂದ್ರ ಧಾರವಾಡ ಸಂಸ್ಥೆಯು ನಮ್ಮ ವಿವೇಕಾನಂದ ಕನ್ನಡ ಮಾಧ್ಯಮ ಶಾಲೆ ತೆಂಕಿಲ ಇದೂ ಸೇರಿದಂತೆ ರಾಜ್ಯದ ಹಲವಾರು ಶಾಲೆಗಳಿಗೆ ಪಠ್ಯಪೂರಕ ಚಟುವಟಿಕೆಯ ಮಾಹಿತಿ ಪುಸ್ತಕ, ಕೈಪಿಡಿ ಮತ್ತು ಚಾರ್ಟು ಇತ್ಯಾದಿಗಳನ್ನು ಕಳೆದ ನಾಲ್ಕು ವರ್ಷಗಳಿಂದ ನೀಡುತ್ತಾ ಬಂದಿದೆ. ಪಾಠದಲ್ಲಿ ಬರುವ ಕವಿ- ಲೇಖಕರ ಬಗ್ಗೆ ಆಳವಾದ ಸ್ಥೂಲವಾದ ಸಮಗ್ರ ಮಾಹಿತಿಯನ್ನು ಪರಿಚಯ ಮಾಡಿಕೊಡುವುದು ಧ್ವನಿ ಸಂಸ್ಥೆಯ ಉದ್ದೇಶ.

ಆ ಪ್ರಯುಕ್ತ ಆರನೇ ತರಗತಿಯ ಪಠ್ಯ ಪುಸ್ತಕದಲ್ಲಿರುವ ಹೃದಯ ವಚನಗಳು ಪದ್ಯದ ಕವಿ ಶ್ರೀ ಅಮೃತ ಸೋಮೇಶ್ವರರ ಸಂಪೂರ್ಣ ಮಾಹಿತಿಯನ್ನು ಕಲೆ ಹಾಕುವ ಉದ್ದೇಶದಿಂದ ಮತ್ತು ಧ್ವನಿ ಸಂಸ್ಥೆಯ ಮೂಲಕ ರಾಜ್ಯದಾದ್ಯಂತ ಬೇರೆ ಬೇರೆ ಶಾಲೆಗಳಿಗೆ ಮಾಹಿತಿ ಪುಸ್ತಕಗಳನ್ನು ಕಳುಹಿಸುವ ಸಲುವಾಗಿ ನಮ್ಮ ಶಾಲೆಯ ಶಿಕ್ಷಕಿಯರಾದ ಶ್ರೀಮತಿ ದಾಕ್ಷಾಯಿಣಿ ಮತ್ತು ಶ್ರೀಮತಿ ವೀಣಾಸರಸ್ವತಿ ಮಾತಾಜಿಯವರು ಕ್ರಿಯಾ ಚಟುವಟಿಕೆಯನ್ನು ಕೈಗೊಂಡರು.

ಅಮೃತ ಸೋಮೇಶ್ವರರು ಉಪನ್ಯಾಸಕರಾಗಿ ಸೇವೆ ಸಲ್ಲಿಸಿ ನಿವೃತ್ತರಾದಂತಹ ವಿವೇಕಾನಂದ ಪದವಿ ಕಾಲೇಜಿಗೆ ಭೇಟಿ ನೀಡಲಾಯಿತು. ಉಪನ್ಯಾಸಕರಾದ ಕನ್ನಡ ವಿಭಾಗದ ಮುಖ್ಯಸ್ಥರಾದ ಶ್ರೀ ಹೆಚ್.ಜಿ ಶ್ರೀಧರ್ ರವರಲ್ಲಿಯೂ ಕನ್ನಡ ಪರ ಹೋರಾಟಗಾರರಾದ ಶ್ರೀ ಪುರಂದರ ಭಟ್ ಅವರಲ್ಲಿಯೂ ಮಾಹಿತಿ ಪಡೆಯಲಾಯಿತು.

ಅಮೃತ ಸೋಮೇಶ್ವರರು ಬರೆದ ಸುಮಾರು ಹತ್ತು ಪುಸ್ತಕಗಳನ್ನು ವಿವೇಕಾನಂದ ಕಾಲೇಜಿನ ಗ್ರಂಥಾಲಯದಿಂದ ಪಡೆದು ಮಾಹಿತಿಯನ್ನು ಪಡೆಯಲಾಯಿತು.

Highslide for Wordpress Plugin