ವಿವೇಕಾನಂದ ಆಂಗ್ಲ ಮಾಧ್ಯಮ ಮತ್ತು ಕನ್ನಡ ಮಾಧ್ಯಮ ಶಾಲೆಯಲ್ಲಿ ವಾರ್ಷಿಕ ಕ್ರೀಡಾಕೂಟ

ವಿವೇಕಾನಂದ ಆಂಗ್ಲ ಮಾಧ್ಯಮ ಮತ್ತು ಕನ್ನಡ ಮಾಧ್ಯಮ ಶಾಲೆ, ತೆಂಕಿಲ, ಪುತ್ತೂರು ಇದರ2013-14ನೇ ಸಾಲಿನ ವಾರ್ಷಿಕ ಕ್ರೀಡಾಕೂಟ 02.12.2013 ರಂದು ಶಾಲಾ ಕ್ರೀಡಾಂಗಣದಲ್ಲಿ ನಡೆಯಿತು.

DSC_0100

ಶ್ರೀ ಪ್ರವೀಣ್‌ಚಂದ್ರ ಆಳ್ವ, ಖ್ಯಾತ ಕಬಡ್ಡಿ ಆಟಗಾರ, ಕಾರ್ಯಕ್ರಮ ಉದ್ಘಾಟಿಸಿ ಮಾತನಾಡುತ್ತಾ ಕ್ರೀಡೆ ಜೀವನದಲ್ಲಿ ಶಿಸ್ತು ಮತ್ತು ಮಾನಸಿಕ ಒತ್ತಡಗಳನ್ನು ದೂರಮಾಡುತ್ತದೆ ಎಂದು ಹೇಳಿದರು. ಕ್ರೀಡಾ ಸ್ಪೂರ್ತಿಯನ್ನು ಬೆಳೆಸಿಕೊಂಡು ಸಮಾಜದಲ್ಲಿ ಶ್ರೇಷ್ಠ ಕ್ರೀಡಾಳುಗಳ ಸಾಲಿಗೆ ಸೇರುವುದರ ಜೊತೆಗೆ ದೈಹಿಕ ಕ್ಷಮತೆಯನ್ನು ಸಾಧಿಸಬಹುದು ಎಂದರು. ಶ್ರೀ ಸುಂದರ ಗೌಡ ದೈಹಿಕ ಶಿಕ್ಷಣ ಪರಿವೀಕ್ಷಣಾಧಿಕಾರಿಗಳು, ಪುತ್ತೂರು ಧ್ವಜಾರೋಹಣ ನೆರವೇರಿಸಿ ಸಂದರ್ಭೋಚಿತವಾಗಿ ಮಾತನಾಡಿದರು.

DSC_0121

ವೇದಿಕೆಯಲ್ಲಿ ಡಾ| ಕೆ.ಎಂ. ಕೃಷ್ಣ ಭಟ್, ಅಧ್ಯಕ್ಷರು ವಿವೇಕಾನಂದ ವಿದ್ಯಾಸಂಸ್ಥೆಗಳು, ತೆಂಕಿಲ ಪುತ್ತೂರು, ಶ್ರೀ ಶಂಕರ್ ಭಟ್ ಕೆ, ಸಿವಿಲ್ ಇಂಜಿನಿಯರ್, ಪಡೀಲ್, ಪುತ್ತೂರು ಮುಖ್ಯ ಅತಿಥಿಯಾಗಿ ಉಪಸ್ಥಿತರಿದ್ದರು.

ವಿವೇಕಾನಂದ ಕನ್ನಡ ಮಾಧ್ಯಮದ ಮುಖ್ಯಗುರುಗಳಾದ ಶ್ರೀಮತಿ ಆಶಾ ಬೆಳ್ಳಾರೆಯವರು ಸ್ವಾಗತಿಸಿ, ವಿವೇಕಾನಂದ ಆಂಗ್ಲ ಮಾಧ್ಯಮದ ಮುಖ್ಯಗುರುಗಳಾದ ಶ್ರೀ ಸತೀಶ್ ಕುಮಾರ್ ರೈ ಮೊದಲ್ಕಾಡಿ ವಂದಿಸಿದರು.

DSC_0026

DSC_0015

DSC_0074

Highslide for Wordpress Plugin