ಗ್ರಾಮೀಣ ಪ್ರದೇಶದಲ್ಲಿ ಮಕ್ಕಳಿಗೆ ಉತ್ತಮ ರೀತಿಯಲ್ಲಿ ಸಂಸ್ಕಾರಯುತ ಶಿಕ್ಷಣ ನೀಡುತ್ತಿರುವುದು ಪುತ್ತೂರಿಗೆ ಹೆಮ್ಮೆಯ ವಿಚಾರ. ತಂತ್ರಜ್ಞಾನ ಯುಗದಲ್ಲಿ ನಮ್ಮ ಸಂಸ್ಕೃತಿಯನ್ನು ಉಳಿಸಿ ಬೆಳೆಸಲು ಇಂತಹ ಶಾಲೆಗಳಿಂದ ಸಾಧ್ಯ ಎಂದು ಬೆಂಗಳೂರಿನ ಸೌಂದರ್ಯ ಎಜುಕೇಶನ್ ಟ್ರಸ್ಟ್‌ನ ಕಾರ್ಯದರ್ಶಿ ಸೌಂದರ್ಯ ಮಂಜಪ್ಪ ಪಿ ಹೇಳಿದರು. ಅವರು ಡಿ. 13 ರಂದು ತೆಂಕಿಲ ವಿವೇಕನಗರದಲ್ಲಿ ವಿವೇಕಾನಂದ ಕನ್ನಡ ಮಾಧ್ಯಮ ಶಾಲಾ ವಿದ್ಯಾರ್ಥಿಗಳಿಂದ ಹೊನಲು ಬೆಳಕಿನ ವಿವೇಕೋತ್ಸವ ಕಾರ್ಯಕ್ರಮ ನಡೆದ ಬಳಿಕ ಸಭಾ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿ ನೆಲೆಯಲ್ಲಿ ಮಾತನಾಡಿದರು. ಅವರು ಧ್ವಜಾರೋಹಣ ನೆರವೇರಿಸಿ, ಭಾರತ ಮಾತೆಯ ಭಾವಚಿತ್ರದೆದುರು ದೀಪ ಬೆಳಗಿಸಿ ಪುಷ್ಪಾರ್ಚನೆಗೈದರು.


ಕ್ಷೇತ್ರ ಶಿಕ್ಷಣಾಧಿಕಾರಿ ಜಿ.ಎಸ್.ಶಶಿಧರ್‌ರವರು ಮಾತನಾಡಿ ವಿವೇಕಾನಂದರು ಹೇಳಿದ ಕೆಲಸ ಇಂತಹ ಶಾಲೆಗಳು ಅನುಸರಿಸುತ್ತಿರುವುದು ಶ್ಲಾಘನೀಯವಾಗಿದೆ ಎಂದರು. ಶ್ರೀಮತಿ ಸಿರಿ ಎಲ್.ಎನ್.ಕೂಡೂರು ಮತ್ತು ಮಂಗಳೂರಿನ ಪಿಕ್ಸ್ ಗ್ರಾಮರ್ ಪ್ರಿಮೀಡಿಯಾದ ಹರೀಶ್ ಪೂಂಜಾ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು. ವೇದಿಕೆಯಲ್ಲಿ ವಿವೇಕಾನಂದ ವಿದ್ಯಾಸಂಸ್ಥೆ ತೆಂಕಿಲ ಇದರ ಆಡಳಿತ ಮಂಡಳಿ ಅಧ್ಯಕ್ಷ ಡಾ|ಕೃಷ್ಣ ಭಟ್, ನಿರ್ದೇಶಕರಾದ ಸಂತೋಷ್ ಕುಮಾರ್, ವಿವೇಕಾನಂದ ವಿದ್ಯಾವರ್ಧಕ ಸಂಘದ ಕಾರ್ಯದರ್ಶಿ ಶಿವಪ್ರಸಾದ್, ವಿವೇಕಾನಂದ ಕಾಲೇಜು ಆಡಳಿತ ಮಂಡಳಿಯ ಅಧ್ಯಕ್ಷ ಪ್ರೊ.ಎ.ವಿ. ನಾರಾಯಣ್, ಶ್ಯಾಮಶಾಸ್ತ್ರೀ, ಶೋಭಾ ಕೊಳತ್ತಾಯ, ಡಾ.ಸುಲೇಖ ವರದರಾಜ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.






ವಿದ್ಯಾರ್ಥಿಗಳಿಂದ ಪ್ರಾರ್ಥನೆ ನಡೆಯಿತು. ಶಾಲೆಯ ಆಡಳಿತ ಮಂಡಳಿಯ ಸಂಚಾಲಕರಾದ ರವೀಂದ್ರ.ಪಿ ಪ್ರಾಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿದರು. ಮುಖ್ಯೋಪಾಧ್ಯಾಯಿನಿ ಆಶಾ ಬೆಳ್ಳಾರೆ ವಂದಿಸಿದರು. ಉಮಾ ಮೋಹನ್, ಚಂದ್ರಶೇಖರ್, ರಾಜೇಶ್ ಕಾರ್ಯಕ್ರಮ ನಿರೂಪಿಸಿದರು. ಅಚ್ಚುತ ನಾಯಕ್ ಮಾರ್ಗದರ್ಶನ ನೀಡಿದರು.
ಸಾಹಿತ್ಯ ಮಿತ್ರ ಬಿಡುಗಡೆ:- ವಿವೇಕಾನಂದ ಶಾಲೆಯ 2012-13 ನೇ ಸಾಲಿನ ವಿದ್ಯಾರ್ಥಿ, ಶಿಕ್ಷಕರ, ಶಾಲೆಯ ಸಂಪೂರ್ಣ ಚಟುವಟಿಕೆಗಳನ್ನೊಳಗೊಂಡ ‘ಸಾಹಿತ್ಯ ಮಿತ್ರ’ ಪುಸ್ತಕವನ್ನು ಕಾರ್ಯಕ್ರಮದ ನಡುವೆ ಬಿಡುಗಡೆಗೊಳಿಸಲಾಯಿತು.
ಪ್ರತಿಭಾ ಪುರಸ್ಕಾರ:- ಶಿಕ್ಷಣ ಕ್ಷೇತ್ರದಲ್ಲಿ ಪ್ರಥಮ ಸ್ಥಾನಗಳಿಸಿದ ಮತ್ತು ಸಾಹಿತ್ಯ, ವಿವಿಧ ಸ್ಪರ್ಧಾತ್ಮಕ ಕ್ಷೇತ್ರಗಳಲ್ಲಿ ಗುರುತಿಸಿಕೊಂಡ ಶಾಲೆಯ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಲಾಯಿತು.