ವಿವೇಕಾನಂದ ಕನ್ನಡ ಮಾಧ್ಯಮ ಶಾಲೆಯ ಮಕ್ಕಳು ರಾಷ್ಟ್ರಮಟ್ಟಕ್ಕೆ

ವಿದ್ಯಾಭಾರತಿ ಅಖಿಲ ಭಾರತ ಶಿಕ್ಷಣ ಸಂಸ್ಥಾನಂ, ನವದೆಹಲಿ ಮತ್ತು ತಪಸ್ವಿ ಜಗಜೀವನ್ ಜಿ ಮಹಾರಾಜ್ ಸರಸ್ವತಿ ವಿದ್ಯಾಮಂದಿರ ಬೊಕಾರೋ ಸ್ಟೀಲ್ ಸಿಟಿ, ಜಾರ್ಖಾಂಡ್ ಇದರ ಆಶ್ರಯದಲ್ಲಿ ನ. 18 ರಿಂದ ನ. 22 ರವರೆಗೆ ನಡೆದ ರಾಷ್ಟ್ರಮಟ್ಟದ ಕ್ರೀಡಾಕೂಟದಲ್ಲಿ ತೆಂಕಿಲ ವಿವೇಕಾನಂದ ಕನ್ನಡ ಮಾಧ್ಯಮ ಶಾಲೆಯ 9 ನೇ ತರಗತಿ ವಿದ್ಯಾರ್ಥಿನಿ ಸೌಮ್ಯಶ್ರೀ.ಎಂ ತ್ರಿವಿಧ ಜಿಗಿತ ಪ್ರಥಮ ಮತ್ತು 100 ಮೀ ಅಡೆತಡೆ ಓಟದಲ್ಲಿ ಪ್ರಥಮ ಸ್ಥಾನ ಪಡೆದು ಜನವರಿ 7 ರಿಂದ 12 ರವರೆಗೆ ಜಾರ್ಖಾಂಡ್‌ನ ರಾಂಚಿಯಲ್ಲಿ ನಡೆಯಲಿರುವ ಎಸ್.ಜಿ.ಎಫ್.ಐ ಪ್ರಾಯೋಜಿತ ರಾಷ್ಟ್ರ ಮಟ್ಟದ ಕ್ರೀಡಾಕೂಟಕ್ಕೆ ಆಯ್ಕೆಯಾಗಿದ್ದಾರೆ. ಇವರು ಕಾವು ಮಣಿಯಡ್ಕ ನಿವಾಸಿ ನಾರಾಯಣ ಬಂಗೇರ ಮತ್ತು ಜಯಂತಿ ದಂಪತಿಯ ಪುತ್ರಿ.

Sports

8 ನೇ ತರಗತಿಯ ಸಂಧ್ಯಾ ಉದ್ದ ಜಿಗಿತ ದ್ವಿತೀಯ ಮತ್ತು 4×100 ಮೀ ರಿಲೇ ಸ್ಪರ್ಧೆಯಲ್ಲಿ ದ್ವಿತೀಯ ಸ್ಥಾನ ಪಡೆದಿದ್ದಾರೆ. ಇವರು ಆರ್ಯಾಪು ಪಂಜಳ ನಿವಾಸಿ ಕರಿಯ ಮತ್ತು ಲಲಿತಾ ದಂಪತಿಯ ಪುತ್ರಿ.
9 ನೇ ತರಗತಿಯ ವಾಣಿ 800ಮೀ, 1500 ಮೀ, 3000 ಮೀ ಓಟದಲ್ಲಿ ತೃತೀಯ ಸ್ಥಾನವನ್ನು ಪಡೆದಿದ್ದಾರೆ. ಇವರು ಕೊಡಿಪ್ಪಾಡಿ ನಿವಾಸಿ ಕೊರಗಪ್ಪ ಮತ್ತು ಸರೋಜ ದಂಪತಿಯ ಪುತ್ರಿ.
8 ನೇ ತರಗತಿಯ ಅನುಷಾ.ಜಿ 4×100 ಮೀ ರಿಲೇಯಲ್ಲಿ ದ್ವಿತೀಯ ಸ್ಥಾನ ಪಡೆದಿರುತ್ತಾರೆ. ಇವರು ಕಬಕ ನಿವಾಸಿ ಗೋಪಾಲ ಸಪಲ್ಯ ಮತ್ತು ನಳಿನಿ ದಂಪತಿಯ ಪುತ್ರಿ.
8 ನೇ ತರಗತಿಯ ಪೂಜಾಶ್ರೀ 4×100 ಮೀ ರಿಲೇಯಲ್ಲಿ ದ್ವಿತೀಯ ಸ್ಥಾನ ಪಡೆದಿರುತ್ತಾರೆ. ಸಂಪ್ಯ ನಿವಾಸಿ ಪೂವಪ್ಪ ಗೌಡ ಮತ್ತು ಪೂರ್ಣಿಮಾ ದಂಪತಿಯ ಪುತ್ರಿ.

Highslide for Wordpress Plugin