
ಚರಣ್ ಬಿ. ಎಲ್

ಕು. ಅನುಷಾ ಕೆ
ಅನಿಬೆಸೆಂಟ್ ಪಾರ್ಕ್ ದೊಡ್ಡ ಬಳ್ಳಾಪುರದಲ್ಲಿ ನಡೆದ 2012 –13 ಸ್ಕೌಟ್ಸ್ ವಿಭಾಗದ ರಾಷ್ಟ್ರಪತಿ ಪುರಸ್ಕಾರ ಪರೀಕ್ಷೆಯಲ್ಲಿ ವಿವೇಕಾನಂದ ಕನ್ನಡ ಮಾಧ್ಯಮಶಾಲೆಯ ವಿದ್ಯಾರ್ಥಿಯಾದ ಚರಣ್ ಬಿ. ಎಲ್ ತೇರ್ಗಡೆ ಹೊಂದಿ ರಾಷ್ಟ್ರಪತಿ ಪುರಸ್ಕಾರಕ್ಕೆ ಆಯ್ಕೆಯಾಗಿರುತ್ತಾನೆ. ಈತ ಸವಣೂರು ಶ್ರೀ ಲಿಂಗಪ್ಪ ಗೌಡ ಮತ್ತು ಶ್ರೀಮತಿ ಬಿ.ಎಲ್ ಕಸ್ತೂರಿ ದಂಪತಿಯ ಪುತ್ರ. ಪ್ರಸ್ತುತ ಈತ ವಿವೇಕಾನಂದ ಪದವಿ ಪೂರ್ವ ಕಾಲೇಜಿನ ಪ್ರಥಮ ಪಿ.ಯು.ಸಿ ವಿದ್ಯಾರ್ಥಿ.
ಗೈಡ್ಸ್ ವಿಭಾಗದಲ್ಲಿ ಕು. ಅನುಷಾ ಕೆ ರಾಷ್ಟ್ರಪತಿ ಪುರಸ್ಕಾರಕ್ಕೆ ಆಯ್ಕೆಯಾಗಿರುತ್ತಾಳೆ. ಈಕೆ ಶ್ರೀ ಆನಂದ ಶರ್ಮ ಮತ್ತು ಶ್ರೀಮತಿ ಅರ್ಚನಾ ದಂಪತಿಯ ಪುತ್ರಿ. ಈಕೆ ಪ್ರಸ್ತುತ ಬೆಟ್ಟಂಪಾಡಿ ಸರಕಾರಿ ಪದವಿ ಪೂರ್ವ ಕಾಲೇಜಿನ ಪ್ರಥಮ ಪಿ.ಯು.ಸಿ ವಿದ್ಯಾರ್ಥಿನಿ.