ವಿವೇಕಾನಂದ ಕನ್ನಡ ಮಾಧ್ಯಮ ಶಾಲೆ ತೆಂಕಿಲ ಇಲ್ಲಿ ದಿನಾಂಕ 06.07.2013 ರಂದು ‘ಹಿಂದೂ ಸಾಮ್ರಾಜೋತ್ಸವ’ದ ಆಚರಣೆ ಜರುಗಿತು. ಈ ಕಾರ್ಯಕ್ರಮದಲ್ಲಿ ಶಿವಾಜಿಯ ಬಾಲ್ಯ, ದೇಶಭಕ್ತಿ ಎಂಬ ವಿಷಯದಡಿ ವಿವೇಕಾನಂದ ಡಿ.ಇಡಿ ಕಾಲೇಜಿನ ಉಪನ್ಯಾಸಕರಾದ ಶ್ರೀ ರಘುರಾಜ ಯು.ವಿ ರವರು ಮಕ್ಕಳಿಗೆ ಮನದಟ್ಟಾಗುವಂತೆ ಕಥೆ ಹೇಳಿದರು. ಕಾರ್ಯಕ್ರಮದ ನಿರೂಪಣೆ, ಸ್ವಾಗತವನ್ನು ಶಿಕ್ಷಕರಾದ ಶ್ರೀ ಚಂದ್ರಶೇಖರ.ಬಿ ರವರು ನೆರವೇರಿಸಿದರು.
