ಶಾಲಾ ಪ್ರವೇಶೋತ್ಸವ ಕಾರ್ಯಕ್ರಮ

ವಿವೇಕಾನಂದ ಕನ್ನಡ ಮಾಧ್ಯಮ ಶಾಲೆ ತೆಂಕಿಲ, ಪುತ್ತೂರು ಇಲ್ಲಿ ದಿನಾಂಕ 06.06.2013 ರಂದು ಶಾಲೆಗೆ ಹೊಸದಾಗಿ ಸೇರ್ಪಡೆಗೊಂಡ ವಿದ್ಯಾರ್ಥಿಗಳಿಗೆ ಪ್ರವೇಶೋತ್ಸವ ಕಾರ್ಯಕ್ರಮ ನಡೆಯಿತು. ಈ ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದ ಸರಕಾರಿ ಪದವಿ ಕಾಲೇಜು ಬಂಟ್ವಾಳ ಇಲ್ಲಿನ ಉಪನ್ಯಾಸಕರಾದ ಡಾ.ಅಜಕ್ಕಳ ಗಿರೀಶ್ ಭಟ್ ರವರು ದೀಪ ಪ್ರಜ್ವಲಿಸಿ ಘೃತಾಹುತಿ ಮಾಡಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ, ಪೋಷಕರೊಂದಿಗೆ ‘ಪರಿಣಾಮಕಾರಿ ಪೋಷಕತ್ವ’ದ ಬಗ್ಗೆ ಸಂವಾದ ನಡೆಸಿದರು. ಬಳಿಕ ನಡೆದ ಸಭಾ ಕಾರ್ಯಕ್ರಮದಲ್ಲಿ ಶಾಲೆ ಮತ್ತು ನಮ್ಮ ಭಾರತೀಯ ಸಂಸ್ಕೃತಿಯ ಬಗ್ಗೆ ಹಾಗೂ ವಿವೇಕಾನಂದ ಕನ್ನಡ ಮಾಧ್ಯಮ ಶಾಲೆಗೆ ಸೇರಿಸಿದ ಎಲ್ಲ ಪೋಷಕ ಬಂಧುಗಳಿಗೂ ತಮ್ಮ ಆಯ್ಕೆ ಸಂದರ್ಭೋಚಿತವಾದುದು ಎಂಬುದಾಗಿ ತಿಳಿಸಿದರು.

bharatha mathege namana

ಅಧ್ಯಕ್ಷ ಸ್ಥಾನ ವಹಿಸಿ ಮಾತನಾಡಿದ ಶಾಲಾ ಸಂಚಾಲಕರಾದ ಶ್ರೀ ರವೀಂದ್ರ.ಪಿ ರವರು, ಕನ್ನಡ ಮಾಧ್ಯಮ ಶಾಲೆಗೆ ತಮ್ಮ ಮಕ್ಕಳನ್ನು ಸೇರಿಸಿದ ಸಂದರ್ಭೋಚಿತ ಆಯ್ಕೆಯ ಬಗ್ಗೆ ಪೋಷಕರಿಗೆ ಅಭಿನಂದಿಸಿದರು. ಭಾಷೆಯನ್ನು ಉಳಿಸಿ ಬೆಳೆಸಿ ತನ್ಮೂಲಕ ದೇಶ ರಕ್ಷಣೆಯ ಪ್ರಸ್ತುತತೆಯನ್ನು ಹೇಳಿದರು. ಈ ಸಂದರ್ಭದಲ್ಲಿ ಶಾಲಾ ಆಡಳಿತ ಮಂಡಳಿಯ ಅಧ್ಯಕ್ಷರಾದ ಡಾ|ಕೃಷ್ಣ ಭಟ್ ಕೊಂಕೋಡಿ, ಕೋಶಾಧಿಕಾರಿಯಾದ ಶ್ರೀ ಅಚ್ಯುತ ನಾಯಕ್ ಹಾಗೂ ಶಾಲಾ ಮುಖ್ಯಗುರುಗಳಾದ ಶ್ರೀಮತಿ ಆಶಾಬೆಳ್ಳಾರೆ ಉಪಸ್ಥಿತರಿದ್ದರು. ಶ್ರೀಮತಿ ಪ್ರಸನ್ನ ಧನ್ಯವಾದ ನೀಡಿ ಶ್ರೀಮತಿ ಉಮಾ ಮೋಹನ್ ನಿರೂಪಿಸಿದರು.

Highslide for Wordpress Plugin