ವಿಕಸಿತ ಸಂಭ್ರಮ -ವಾರ್ಷಿಕ ಕ್ರೀಡಾಕೂಟ

 

ವಿವೇಕಾನಂದ ಕನ್ನಡ ಮಾಧ್ಯಮ ಶಾಲೆಯಲ್ಲಿ 2024-25ನೇ ಸಾಲಿನ ವಾರ್ಷಿಕ ಕ್ರೀಡಾಕೂಟ ವಿಕಸಿತ ಸಂಭ್ರಮ ನಡೆಯಿತು. ಸ.ಹಿ.ಪ್ರಾ ಉನ್ನತೀಕರಿಸಿದ ಶಾಲೆ, ಅನಂತಾಡಿ ಇಲ್ಲಿನ ದೈಹಿಕ ಶಿಕ್ಷಣ ಶಿಕ್ಷಕಿಯಾದ ಶ್ರೀಮತಿ ಸುನೀತಾ ರೈ ಧ್ಜಜಾರೋಹಣಗೈದು ಕ್ರೀಡಾಕೂಟಕ್ಕೆ ಚಾಲನೆ ನೀಡಿದರು.


ಮಾನ್ಯ ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಶ್ರೀ ಲೋಕೇಶ್ ಎಸ್ ಆರ್ ಉದ್ಘಾಟಿಸಿ ಉತ್ತಮ ಆಹಾರಾಭ್ಯಾಸ, ಕ್ರೀಡಾ ತರಬೇತಿ ಮತ್ತು ಪ್ರೇರಣೆಯಿಂದಾಗಿ ರಾಜ್ಯ, ರಾಷ್ಟ್ರಮಟ್ಟದಲ್ಲಿ ತಮ್ಮ ಸಂಸ್ಥೆ ಗುರುತಿಸುವಂತಾಗಿದೆ ಅದೇ ರೀತಿ ಶೈಕ್ಷಣಿಕವಾಗಿಯೂ ಉತ್ತಮ ಫಲಿತಾಂಶ ಬರುವಂತೆ ಪ್ರಯತ್ನಿಸಿ ಎಂದು ತಿಳಿಸಿದರು. ಕ್ರೀಡಾಕೂಟದ ಪಥ ಸಂಚಲನದ ವಂದನಾ ಸ್ವೀಕಾರ ಮಾಡಿದ ಮಹಿಳಾ ಪೋಲೀಸ್ ಠಾಣೆಯ PSI ಆಗಿರುವ ಶ್ರೀಮತಿ ಸವಿತಾರವರು ಮಕ್ಕಳ ಸುರಕ್ಷತೆಯ ಬಗ್ಗೆ ಮಾಹಿತಿ ನೀಡುತ್ತಾ ಮಕ್ಕಳು ತಮ್ಮ ಸುತ್ತಮುತ್ತಲಿನ ಆಗುಹೋಗುಗಗಳ ಬಗ್ಗೆಯೂ ಅರಿವನ್ನು ಬೆಳೆಸಿಕೊಳ್ಳಬೇಕು ಮತ್ತು ಪೆÇೀಲೀಸ್ ಇಲಾಖೆ ಆ ನಿಟ್ಟಿನಲ್ಲಿ ವಿದ್ಯಾರ್ಥಿಗಳ ರಕ್ಷಣೆಯಲ್ಲಿ ಸದಾ ನೆರವನ್ನು ನೀಡಲು ಸಿದ್ಧವಿದೆ ಎಂದು ಹೇಳಿದರು.

ಅಭ್ಯಾಗತರಾಗಿ ಆಗಮಿಸಿದ ಶಾಲಾ ಹಿರಿಯ ವಿದ್ಯಾರ್ಥಿ ಐ.ಟಿ ಇಂಡಸ್ಟ್ರಿ ಬೆಂಗಳೂರಿನಲ್ಲಿ ಸೀನಿಯರ್ ಟೆಕ್ನಿಕಲ್ ರೈಟರ್ ಆಗಿರುವ ಶ್ರೀ ಆಶಿಶ್ ಜೆ.ಜಿ ಮಾತನಾಡಿ ಕಲಿಕೆಯಲ್ಲಿ ಮಾಧ್ಯಮ ಮುಖ್ಯವಲ್ಲ, ಮಕ್ಕಳಲ್ಲಿ ಸಾಧಿಸುವ ಛಲ ನಿರಂತರವಿದ್ದರೆ ಯಶಸ್ಸು ತಾನಾಗಿ ಲಭಿಸುತ್ತದೆ ಎಂದು ವಿದ್ಯಾರ್ಥಿಗಳಿಗೆ ಪ್ರೋತ್ಸಾಹದ ನುಡಿಗಳನ್ನಾಡಿದರು.

 

ಕ್ರೀಡಾಕೂಟದ ಅಧ್ಯಕ್ಷತೆಯನ್ನು ವಹಿಸಿದ್ದ ವಿವೇಕಾನಂದ ವಿದ್ಯಾವರ್ಧಕ ಸಂಘದ ಕೋಶಾಧಿಕಾರಿಗಳಾದ ಶ್ರೀ ಅಚ್ಯುತ ನಾಯಕ್‍ರವರು ಮಾತನಾಡಿ ಇತ್ತೀಚಿನ ದಿನಗಳಲ್ಲಿ ಕೇಂದ್ರ ಸರಕಾರವು ಕ್ರೀಡೆಗೆ ನೀಡುತ್ತಿರುವ ಪ್ರೋತ್ಸಾಹ ಅಂತಾರಾಷ್ಟ್ರೀಯ ಮಟ್ಟದ ಕ್ರೀಡಾಕೂಟದಲ್ಲಿ ನಮ್ಮ ಕ್ರೀಡಾಳುಗಳು ಹೆಚ್ಚಿನ ಪದಕ ಪಡೆಯಲು ಸಾಧ್ಯವಾಗುತ್ತಿದೆ ಮತ್ತು ಶಾಲೆಯಲ್ಲಿ ಸಿಗುತ್ತಿರುವ ಕ್ರೀಡಾ ಪ್ರೋತ್ಸಾಹವನ್ನು ಸದುಪಯೋಗ ಪಡಿಸಿಕೊಂಡು ಉತ್ತಮ ಸಾಧನೆ ಮಾಡಿ ದೇಶದ ಕೀರ್ತಿಯನ್ನು ಇನ್ನಷ್ಟು ಎತ್ತರಕ್ಕೆ ಏರಿಸುವಂತಾಗಲಿ ಎಂದು ಶುಭ ಹಾರೈಸಿದರು. ಶಾಲಾ ಕ್ರೀಡಾಮಂತ್ರಿ ಪವನ್ ಪ್ರತಿಜ್ಞಾವಿಧಿ ಬೋಧಿಸಿದರು.

 

                                                                                               
ವೇದಿಕೆಯಲ್ಲಿ ಶಾಲಾ ಆಡಳಿತ ಮಂಡಳಿಯ ಅಧ್ಯಕ್ಷರಾದ ಶ್ರೀ ರಮೇಶ್ಚಂದ್ರ, ಸಂಚಾಲಕರಾದ ಶ್ರೀ ವಸಂತ ಸುವರ್ಣ, ವಿವೇಕಾನಂದ ವಿದ್ಯಾವರ್ಧಕ ಸಂಘದ ಶೈಕ್ಷಣಿಕ ಪರಿವೀಕ್ಷಕರಾದ ಶ್ರೀ ರಘುರಾಜ್ ಉಬರಡ್ಕ, ಶಾಲಾ ಪ್ರಾಥಮಿಕ ವಿಭಾಗದ ಮುಖ್ಯಗುರು ಶ್ರೀಮತಿ ನಳಿನಿ ವಾಗ್ಲೆ ಉಪಸ್ಥಿತರಿದ್ದರು. ವಿದ್ಯಾರ್ಥಿನಿ ಕು. ಪ್ರಜ್ಞಾ ನಿಡ್ವಣ್ಣಾಯ ಪ್ರಾರ್ಥಿಸಿ, ಶಾಲಾ ದೈಹಿಕ ಶಿಕ್ಷಣ ಶಿಕ್ಷಕಿ ಶ್ರೀಮತಿ ನಮಿತಾ ಕೆ.ಕೆ ಸ್ವಾಗತಿಸಿ, ಸಹಶಿಕ್ಷಕಿ ಶ್ರೀಮತಿ ಸುಶ್ಮಿತಾ ಧನ್ಯವಾದ ಸಮರ್ಪಿಸಿದ ಕಾರ್ಯಕ್ರಮವನ್ನು ಶಿಕ್ಷಕಿಯರಾದ ಶ್ರೀಮತಿ ಗೀತಾ ಮತ್ತು ಕು. ಪ್ರತೀಕ್ಷಾ ನಿರೂಪಿಸಿದರು.

Highslide for Wordpress Plugin