ವಿದ್ಯಾಭಾರತಿ ಅಖಿಲ ಭಾರತೀಯ ಸಂಸ್ಕೃತಿ ಮಹೋತ್ಸವ ಇದರ ವತಿಯಿಂದ ಸರಸ್ವತಿ ವಿದ್ಯಾ ಮಂದಿರ, ಸಂಸ್ಕೃತಿ ಭವನ, ಋಷಿ ನಗರ, ಉಜ್ಜೈನಿ (ಮಧ್ಯಪ್ರದೇಶ) ಇಲ್ಲಿ ನಡೆದ ರಾಷ್ಟ್ರಮಟ್ಟದ ಗಣಿತ-ವಿಜ್ಞಾನ ಮೇಳ ಮತ್ತು ಸಂಸ್ಕೃತಿ ಮಹೋತ್ಸವ ಸ್ಪರ್ಧೆಯ ಕ್ಲೇ ಮಾಡೆಲಿಂಗ್ ನಲ್ಲಿ ವಿವೇಕಾನಂದ ಕನ್ನಡ ಮಾಧ್ಯಮ ಶಾಲೆಯ ನಿಖಿಲ್ (ಕೋಡಿಂಬಾಡಿ ನಿವಾಸಿ ಕೃಷ್ಣಪ್ಪ ಮತ್ತು ಧನವತಿ ದಂಪತಿಗಳ ಪುತ್ರ) ದ್ವಿತೀಯ ಸ್ಥಾನ ಪಡೆದಿದ್ದಾನೆ. ಇವನಿಗೆ ಶಾಲಾ ಚಿತ್ರಕಲಾ ಶಿಕ್ಷಕರಾದ ರುಕ್ಮಯ ಇವರು ತರಬೇತಿ ಮಾರ್ಗದರ್ಶನ ನೀಡಿದ್ದರು