ಜಿಲ್ಲಾಮಟ್ಟದ ಕಬಡ್ಡಿ – ಶಾಲಾ ವಿದ್ಯಾರ್ಥಿಗಳು ವಿಭಾಗ ಮಟ್ಟಕ್ಕೆ ಆಯ್ಕೆ

 

ಜಿಲ್ಲಾಡಳಿತ ಮತ್ತು ಜಿಲ್ಲಾ ಪಂಚಾಯತ್ ದಕ್ಷಿಣ ಕನ್ನಡ ಉಪನಿರ್ದೇಶಕರ ಕಛೇರಿ, ಸುಳ್ಯ, ಪಿ.ಎಂ ಶ್ರೀ ಸ.ಮಾ.ಹಿ.ಪ್ರಾ ಶಾಲೆ ಗುತ್ತಿಗಾರು, ಸ.ಪ.ಪೂ ಕಾಲೇಜು ಗುತ್ತಿಗಾರು (ಪ್ರೌಢಶಾಲಾ ವಿಭಾಗ) ಈ ಸಂಸ್ಥೆಗಳ ಸಂಯುಕ್ತ ಆಶ್ರಯದಲ್ಲಿ ನಡೆದ ಪ್ರೌಢಶಾಲಾ ಬಾಲಕರ ಜಿಲ್ಲಾಮಟ್ಟದ ಕಬಡ್ಡಿ ಪಂದ್ಯಾಟದಲ್ಲಿ ಶಾಲಾ ಪ್ರೌಢಶಾಲಾ ಬಾಲಕರ ತಂಡ ಪ್ರಥಮ ಸ್ಥಾನ ಗಳಿಸಿ ಮೈಸೂರು ವಿಭಾಗ ಮಟ್ಟಕ್ಕೆ ಆಯ್ಕೆಯಾಗಿದೆ. ತಂಡದಲ್ಲಿ ಭಾಗವಹಿಸಿದ ಕ್ರೀಡಾಪಟುಗಳು
ಪುನೀತ್ (ಶ್ರೀಧರ ಮತ್ತು ನಳಿನಿ ದಂಪತಿಗಳ ಪುತ್ರ), ಧನ್ವಿತ್ (ನೀಲಪ್ಪ ಗೌಡ ಮತ್ತು ಶಶಿಕಲಾ ದಂಪತಿಗಳ ಪುತ್ರ), ಜಿ ಶೇಖರ (ಗದ್ದೆ ಫಕೀರಪ್ಪ ಮತ್ತು ಹಂಪಮ್ಮ ದಂಪತಿಗಳ ಪುತ್ರ), ನರಸಪ್ಪ ತಳವಾರ್ (ಅಪ್ಪಸಾಬ ತಳವಾರ್ ಮತ್ತು ಗೌರವ್ವ ತಳವಾರ್), ಚೈತನ್ ನಲವಾಡೆ(ಗೋರಕ್ ನಲವಾಡೆ ಮತ್ತು ಲಲಿತ ನಲವಾಡೆ ದಂಪತಿಗಳ ಪುತ್ರ), ಪ್ರೀತಮ್ ಮಳಿ (ಶಿವಪ್ಪ ಮಳಿ ಮತ್ತು ಕಲಾವತಿ ಮಳಿ ದಂಪತಿಗಳ ಪುತ್ರ), ಅಬೀಬ್ ವುಲ್ಲಾ (ಕಲೀಮ್ ವುಲ್ಲಾ ಮತ್ತು ಫರ್ಜಾನ ದಂಪತಿಗಳ ಪುತ್ರ), ಪವನ್ ಕುಮಾರ್ ಬಿ (ಶೇಖರ ನಾಯ್ಕ ಮತ್ತು ಎಂ ಲಲಿತಾ ದಂಪತಿಗಳ ಪುತ್ರ), ಕಾರ್ತಿಕ್ (ಈಶ್ವರ ಮತ್ತು ಚಂದ್ರವತಿ ದಂಪತಿಗಳ ಪುತ್ರ), ನಮೀಶ್ ನಾಯ್ಕ ಜಿ.ಎಸ್ (ಗಿರಿಯಪ್ಪ ನಾಯ್ಕ ಮತ್ತು ಸವಿತಾ ಕೆ ದಂಪತಿಗಳ ಪುತ್ರ), ವಲ್ಲೀಶ್ (ಮಹಾದೇವಪ್ಪ ಮತ್ತು ಜಯ ದಂಪತಿಗಳ ಪುತ್ರ), ನಿಧೀಶ್ ಶೆಟ್ಟಿ (ದಿನೇಶ್ ಶೆಟ್ಟಿ ಮತ್ತು ಆಶಾಲತಾ ಡಿ ಶೆಟ್ಟಿ ದಂಪತಿಗಳ ಪುತ್ರ) ಎಂದು ಮುಖ್ಯಗುರುಗಳು ಪ್ರಕಟನೆಯಲ್ಲಿ ತಿಳಿಸಿರುತ್ತಾರೆ.

Highslide for Wordpress Plugin