ವಿದ್ಯಾಭಾರತಿ ಕರ್ನಾಟಕ ಇದರ ವತಿಯಿಂದ ಹಾಸನದ ಮಂಗಳೂರು ಪಬ್ಲಿಕ್ ಸ್ಕೂಲ್ ಇಲ್ಲಿ ನಡೆದ ರಾಜ್ಯಮಟ್ಟದ ಕಬಡ್ಡಿ ಪಂದ್ಯಾಟದಲ್ಲಿ ಶಾಲೆಯ ಬಾಲಕಿಯರ ತಂಡ ಪ್ರಥಮ ಸ್ಥಾನ ಪಡೆದು ರಾಷ್ಟ್ರಮಟ್ಟಕ್ಕೆ ಆಯ್ಕೆಯಾಗಿದೆ.
ತಂಡದಲ್ಲಿದ್ದ ಕ್ರೀಡಾಪಟುಗಳು ದೀಕ್ಷಿತಾ (ದೇವಪ್ಪ ಗೌಡ ಮತ್ತು ಹೇಮಾವತಿ ದಂಪತಿಗಳ ಪುತ್ರಿ), ಬಿಂದುಶ್ರೀ (ಜನಾರ್ಧನ ಮತ್ತು ಶಶಿಕಲಾ ದಂಪತಿಗಳ ಪುತ್ರಿ), ನಿಖಿತಾ (ಸುಂದರ ಮತ್ತು ಗೀತಾ ದಂಪತಿಗಳ ಪುತ್ರಿ), ವಿನ್ಯಾ ರೈ (ಕೃಷ್ಣಪ್ರಸಾದ್ ರೈ ಮತ್ತು ರಾಜೀವಿ ರೈ ದಂಪತಿಗಳ ಪುತ್ರಿ), ಸುಶಾ ಎಂ ( ಕೃಷ್ಣಪ್ಪ ಎಂ ಮತ್ತು ಗೀತಾ ದಂಪತಿಗಳ ಪುತ್ರಿ), ಶಿವರಂಜಿನಿ(ಚಂದ್ರೇ ಗೌಡ ಮತ್ತು ಯಶೋಧ ದಂಪತಿಗಳ ಪುತ್ರಿ), ಯಲ್ಲವ್ವ (ಹನುಮಂತ ಮತ್ತು ಲಕ್ಷ್ಮೀ ದಂಪತಿಗಳ ಪುತ್ರಿ), ಲೋಚನಾ (ಸುಂದರ ಗೌಡ ಮತ್ತು ಉಷಾ ದಂಪತಿಗಳ ಪುತ್ರಿ), ಅಂಕಿತಾ( ರೇಗಪ್ಪಗೌಡ ಮತ್ತು ರೇಶ್ಮಾ ದಂಪತಿಗಳ ಪುತ್ರಿ), ಅರ್ಚನಾ (ಲಿಂಗಪ್ಪ ಮತ್ತು ಕುಸುಮಾವತಿ ದಂಪತಿಗಳ ಪುತ್ರಿ), ತನುಜಾ (ಅಪ್ಪಸಾಬಾ ಮತ್ತು ಗೌರಮ್ಮ ದಂಪತಿಗಳ ಪುತ್ರಿ) ಗೋದಾವರಿ ( ಸುನೀಲ್ ಮತ್ತು ಚಂದ್ರಿಮಾ ದಂಪತಿಗಳ ಪುತ್ರಿ ), ಮತ್ತು ಬಾಲಕರ ವಿಭಾಗದಲ್ಲಿ ನಮ್ಮ ಶಾಲೆಯ ಪುನೀತ್ ಮತ್ತು ಹಬೀಬ್ ರಾಷ್ಟ್ರಮಟ್ಟದ ಕ್ರೀಡಾಕೂಟಕ್ಕೆ ಆಯ್ಕೆಯಾಗಿರುತ್ತಾರೆ. ಇವರಿಗೆ ಶಾಲಾ ದೈಹಿಕ ಶಿಕ್ಷಕರಾದ ದಾಮೋದರ್, ಹರಿಣಾಕ್ಷಿ ಮತ್ತು ತರಬೇತುದಾರರಾದ ಮನೋಹರ್ ತರಬೇತಿ ನೀಡಿರುತ್ತಾರೆ.