ಸುಖ ಜೀವನ, ಹಣಕ್ಕಿಂತ ದೇಶ ದೊಡ್ಡದು – ಲೆ. ಕ. ಅಶೋಕ್ ಕಿಣಿ
ಜನ್ಮ ನೀಡಿದ ಭೂಮಿಯನ್ನು ಸ್ವರ್ಗಕ್ಕಿಂತ ಮೇಲು ಎಂದು ಭಾವಿಸುವ ನಾವು ಸುಖದ ಜೀವನ, ಸಂಪತ್ತುಗಳಿಸುವುದಕ್ಕಿAತ ದೇಶ ದೊಡ್ಡದು ಎಂಬುದನ್ನು ಅರ್ಥ ಮಾಡಿಕೊಳ್ಳಬೇಕು. ಅಂತಹ ದೇಶವನ್ನು ಕಾಪಾಡಿಕೊಳ್ಳುವ ಜವಾಬ್ದಾರಿ ಕೇವಲ ಸೈನಿಕರಲ್ಲದೇ ನಮ್ಮೆಲ್ಲರಲಿದೆ ಎಂದು ಮಾಜಿ ರಾಷ್ಟçಪತಿ ಎಪಿಜೆ ಅಬ್ದುಲ್ ಕಲಾಂರವರ ರಕ್ಷಣಾಪಡೆಯಲ್ಲಿ ಅಧಿಕಾರಿಯಾಗಿದ್ದ ಕೇಂದ್ರದ ರಕ್ಷಣಾ ರಾಜ್ಯ ಸಚಿವರ ಮಾಜಿ ಭದ್ರತಾ ಸಲಹೆಗಾರ ಲೆ.ಕ ಅಶೋಕ್ ಕಿಣಿ ಎಚ್ ಹೇಳಿದರು.
ಕಾರ್ಗಿಲ್ ಕದನದ ವೇಳೆ ತಮ್ಮೆಲ್ಲಾ ಪ್ರಾಪಂಚಿಕ ಜೀವನವನ್ನು ಮರೆತು ನಮ್ಮ ಸೈನಿಕರು ಬಲಿದಾನವಾಗಿದ್ದಾರೆ. ಇಂದು ವಿವೇಕಾನಂದ ವಿದ್ಯಾಸಂಸ್ಥೆಗಳಿAದ ನಡೆದಿರುವ ಈ ಕಾರ್ಯಕ್ರಮದಿಂದ ಅವರ ಆತ್ಮಕ್ಕೆ ಶಾಶ್ವತ ಶಾಂತಿ ಸಿಗಬಹುದೆಂಬ ನಂಬಿಕೆ ನನ್ನಲ್ಲಿದೆ ಎಂದ ಅವರು ದಕ್ಷಿಣ ಭಾರತದಲ್ಲಿ ಗಡಿಪ್ರದೇಶಗಳು ಇಲ್ಲದಿರುವುದರಿಂದ ನಮಗೆ ಗಡಿಭಾಗದ ಯೋಧರ ಮಹತ್ವ ತಿಳಿದಿಲ್ಲ. ಆದರೆ ಅವರನ್ನು ಸ್ಮರಿಸಿ ಗೌರವಿಸುವ ಕಾರ್ಯ ವಿವೇಕಾನಂದ ವಿದ್ಯಾಸಂಸ್ಥೆಯ ವತಿಯಿಂದ ಆಗಿರುವುದು ಹೆಮ್ಮೆ ಎನಿಸಿವೆ. ದೆಹಲಿಯಲ್ಲಿ ಕಾರ್ಗಿಲ್ ವಿಜಯೋತ್ಸವ ಆಚರಣೆ ಇದ್ದರೂ ಮಕ್ಕಳೊಡನೆ ಸಂವಾದ ನಡೆಸುವ ಅವಕಾಶ ದೊರೆತಿರುವುದರಿಂದ ಇಲ್ಲಿಗೆ ಬಂದಿದ್ದೇನೆ ಎಂದರು.
ಸಭಾಧ್ಯಕ್ಷತೆಯನ್ನು ಶ್ರೀದೇವಿ ವಿದ್ಯಾಕೇಂದ್ರ ಪುಣಚ ಇದರ ಅಧ್ಯಕ್ಷ ಜಯಶ್ಯಾಮ ನೀರ್ಕಜೆ ವಹಿಸಿದ್ದರು. ವೇದಿಕೆಯಲ್ಲಿ ನಾಲ್ಕು ವಿದ್ಯಾಸಂಸ್ಥೆಗಳ ಆಡಳಿತ ಮಂಡಳಿ ಅಧ್ಯಕ್ಷರುಗಳು ಉಪಸ್ಥಿತರಿದ್ದರು. ವಿವೇಕಾನಂದ ಆಂಗ್ಲಮಾಧ್ಯಮ ಶಾಲಾ ಅಧ್ಯಕ್ಷ ಡಾ. ಶಿವಪ್ರಕಾಶ್ ಸ್ವಾಗತಿಸಿ, ವಿವೇಕಾನಂದ ಕನ್ನಡ ಮಾಧ್ಯಮ ಮುಖ್ಯ ಗುರು ಆಶಾಬೆಳ್ಳಾರೆ ವಂದಿಸಿದರು. ಸಭಾಕಾರ್ಯಕ್ರಮದ ಬಳಿಕ ಪುತ್ತೂರು ಜಗದೀಶ್ ಆಚಾರ್ಯ ಮತ್ತು ಬಳಗದವರಿಂದ ‘ದೇಶ ಭಕ್ತಿ ಗೀತೆ’ ಗಾಯನ ಸ್ಪರ್ಧೆ ನಡೆಯಿತು.