‘ಮಕ್ಕಳ ಕಲಿಕಾ ಪ್ರಕ್ರಿಯೆಯಲ್ಲಿ ಪೋಷಕರೂ ಮಕ್ಕಳಾಗಬೇಕು’- ಜಯಪ್ರಕಾಶ್-ವಕೀಲರು
ಶಾಲೆಯ ಪ್ರಸಕ್ತ ಶೈಕ್ಷಣಿಕ ವರ್ಷ ೧೦ನೇ ತರಗತಿಯ ಪೋಷಕರ ಸಭೆಗೆ ದೀಪಬೆಳಗಿಸಿ ಶಾಲಾ ಪೋಷಕರಾದ ಜಯಪ್ರಕಾಶ್ ಚಾಲನೆ ನೀಡಿದರು. ೨೦೨೪-೨೫ರ ಶೈಕ್ಷಣಿಕ ವರ್ಷದ ಪಠ್ಯ-ಪಠ್ಯಪೂರಕ ಚಟುವಟಿಕೆಗಳ ಕಾರ್ಯಯೋಜನೆಗಳನ್ನು ಸಭೆಗೆ ತಿಳಿಸಿದ ಸಹಶಿಕ್ಷಕರಾದ ರಾಮ್ ನಾಯ್ಕ್ ಇವರು ಶಾಲಾ ಯೋಜನೆಗಳ ಪರಿಣಾಮಕಾರಿ ಅನುಷ್ಠಾನಕ್ಕೆ ಪೋಷಕರು – ಶಿಕ್ಷಕರು ಹಾಗೂ ಮಕ್ಕಳ ಸಹಭಾಗಿತ್ವ ಮಹತ್ವದ್ದಾಗಿದೆ ಎಂದು ತಿಳಿಸಿದರು.
ಪೋಷಕರೊಂದಿಗೆ ನಡೆದ ಸಂವಾದದಲ್ಲಿ ಆಂಗ್ಲಭಾಷಾ ಸಂವಹನ, ಆಂತರಿಕ ಅಂಕಗಳ ನೀಡುವಿಕೆ, ಪೋಷಕರಿಗಾಗಿ ಆಪ್ತ ಸಲಹೆ, ಕ್ರೀಡಾ ತರಬೇತಿ ಇತ್ಯಾದಿ ವಿಷಯಗಳ ಬಗ್ಗೆ ಚರ್ಚೆ ನಡೆಯಿತು. ತರಗತಿಯ ಆಯ್ದ ಮಕ್ಕಳಿಂದ ಕಲಿಕಾ ತಯಾರಿಯ ಅನುಭವ ಹಂಚಿಕೆಯಾಯಿತು. ಅನಂತರ ಪ್ರಸಕ್ತ ವರ್ಷ೧೦ನೇ ತರಗತಿಗೆ ಪಾಠ ಬೋಧಿಸುವ ಶಿಕ್ಷಕರ ಪರಿಚಯವಾಯಿತು. ಮಕ್ಕಳ ಕಲಿಕಾ ಪ್ರಕ್ರಿಯೆ ಹಾಗೂ ಪೋಷಕ- ಶಿಕ್ಷಕರ ಸಹಭಾಗಿತ್ವಕ್ಕೆ ಸಂಬAಧಿಸಿದ ಪ್ರಶ್ನಾ ಪತ್ರಕ ಪರಿಚಯಿಸಿ ಮಾತನಾಡಿದ ಮುಖ್ಯ ಶಿಕ್ಷಕರಾದ ಆಶಾ ಬೆಳ್ಳಾರೆ ಮಕ್ಕಳ ಆಲೋಚನೆ- ಭಾವನೆ ಹಾಗೂ ವರ್ತನಾಂಶಗಳಲ್ಲಿ ಧನಾತ್ಮಕತೆಯನ್ನು ತರುವ ಶಿಕ್ಷಕ- ಪೋಷಕರ ಸಂಬoಧವು ಶಾಲಾ ಶಕ್ತಿಯಾಗಿದೆ ಎಂದು ಹೇಳುತ್ತಾ ಬಂದoತಹ ಎಲ್ಲರಿಗೂ ಧನ್ಯವಾದ ಸಮರ್ಪಿಸಿದರು. ಶಾಂತಿಮoತ್ರದೊAದಿಗೆ ಸಂಪನ್ನವಾದ ಸಭೆಯ ನಿರ್ವಹಣೆ ನಡೆಸಿಕೊಟ್ಟವರು ಸಹಶಿಕ್ಷಕಿ ಶಾಲಿನಿ ಇವರು.