ದೇಶ ರಕ್ಷಣೆಗೆ ಸೈನಿಕರ ಅವಶ್ಯಕತೆಯಿದ್ದು ಹೆಚ್ಚು ಹೆಚ್ಚು ಯುವಜನರು ಸೇನೆಗೆ ಸೇರಬೇಕು. ಸೇವಾ ನಿವೃತ್ತಿಯ ನಂತರವೂ ಉತ್ತಮ ಸೌಲಭ್ಯಗಳೂ, ಉದ್ಯೋಗವೂ ಸಿಗುವುದು ಎಂಬುದಾಗಿ ಮಾಜಿ ಸೈನಿಕರೂ ಪ್ರಸ್ತುತ ಪುತ್ತೂರಿನ ಕಾರ್ಪೋರೇಶನ್ ಬ್ಯಾಂಕಿನ ಅಸಿಸ್ಟೆಂಟ್ ಮ್ಯಾನೇಜರ್ ಆಗಿದ್ದು ಮಾಜಿ ಸೈನಿಕರ ಸಂಘದ ಅಧ್ಯಕ್ಷರಾಗಿರುವ ಕೆ.ಎಸ್.ದಯಾನಂದರವರು ಹೇಳಿದರು. ಇವರು ತೆಂಕಿಲದ ವಿವೇಕಾನಂದ ವಿದ್ಯಾಸಂಸ್ಥೆಯಲ್ಲಿ ನಡೆದ ಗಣರಾಜ್ಯೋತ್ಸವ ಆಚರಣೆಯ ಸಂದರ್ಭದಲ್ಲಿ ಧ್ವಜಾರೋಹಣ ಗೈದು ಈ ಮೇಲಿನ ಮಾತುಗಳನ್ನಾಡಿದರು.ಮುಖ್ಯ ಅತಿಥಿಗಳಾಗಿ ಆಗಮಿಸಿದ ವಿವೇಕಾನಂದ ಕಾನೂನು ಮಹಾವಿದ್ಯಾಲಯದ ಪ್ರಾಂಶುಪಾಲರಾದ ಶ್ರೀಮತಿ ಡಿ.ಜ್ಯೋತ್ಸ್ನಾರವರು ಭಾರತದ ಸಂವಿಧಾನವು ನಮಗೆ ನೀಡಿರುವ ಹಕ್ಕು, ಭಾವ್ಯತೆಗಳನ್ನು ಚೆನ್ನಾಗಿ ಅರಿತು ಸದುಪಯೋಗ ಪಡಿಸಿಕೊಂಡು ಸತ್ಪ್ರಜೆಗಳಾಗುವಂತೆ ಕರೆ ನೀಡಿದರು. ಶ್ರೀಮತಿ ರೇವತಿ ಮಾತಾಜಿಯವರು ಸ್ವಾಗತಿಸಿದರು, ಮುಖ್ಯಗುರುಗಳಾದ ಶ್ರೀ ಸತೀಶ್ ರೈಯವರು ವಂದನಾರ್ಪಣೆಗೈದರು. ಶಾಲಾ ವಿದ್ಯಾರ್ಥಿ ನಾಯಕ ಉತ್ತಮ್ ಕಾರ್ಯಕ್ರಮ ನಿರೂಪಿಸಿದರು.