ಅತ್ಯುತ್ಕ್ರಷ್ಟತೆಯನ್ನು ಸಾಧಿಸಿ – ಸುಲೇಖಾ ವರದರಾಜ್

ಮನಸ್ಸಿದ್ದಲ್ಲಿ ಮಾರ್ಗವಿದೆ ಎಂಬ ಮಾತಿನಂತೆ ಸಾಧಿಸುವ ಛಲವಿದ್ದರೆ ಯಾವುದೇ ಅಡೆತಡೆಗಳೂ ಗುರಿ ಸಾಧನೆಗೆ ಅಡ್ಡಿಯಾಗಲಾರವು ಎಂಬುದನ್ನು ನೈಜ ದೃಷ್ಟಾಂತಗಳ ಮೂಲಕ ವಿದ್ಯಾರ್ಥಿಗಳ ಮನಮುಟ್ಟುವ ಮಾತುಗಳನ್ನಾಡುತ್ತಾ ಸುಲೇಖಾ ವರದರಾಜ್ ರವರು ಕ್ರೀಡೆ, ಕಲೆ, ಕೃಷಿ, ರಾಜಕೀಯ ಇತ್ಯಾದಿ ಯಾವುದೇ ಕ್ಷೇತ್ರವಿರಲಿ ಅವಿರತ ಪರಿಶ್ರಮದ ಮೂಲಕ ಅತ್ಯುತ್ಕ್ರಷ್ಟತೆಯನ್ನು ಸಾಧಿಸಲು ಕರೆ ನೀಡಿದರು. ಅವರು ವಿವೇಕಾನಂದ ಕನ್ನಡ ಮಾಧ್ಯಮ ಶಾಲಾ ಎಸ್.ಎಸ್.ಎಲ್.ಸಿ ವಿದ್ಯಾರ್ಥಿಗಳಿಗೆ ಪರೀಕ್ಷಾ ಪೂರ್ವ ತಯಾರಿಯ ಬಗ್ಗೆ ನಡೆದ ಸಂವಾದ ಸಂದರ್ಭದಲ್ಲಿ ಈ ಮೇಲಿನ ಮಾತನ್ನಾಡುತ್ತಾ ದೂರದರ್ಶನ, ಮೊಬೈಲ್ ಇತ್ಯಾದಿ ವಿದ್ಯುನ್ಮಾನ ಮಾಧ್ಯಮಗಳಿಂದ ವಿದ್ಯಾರ್ಥಿಗಳ ಅಧ್ಯಯನಕ್ಕೆ ತೊಡಕಾಗದಂತೆ ಹೆತ್ತವರು ಅವರೊಂದಿಗಿದು ಸಹಕರಿಸುವಂತೆ ಕಿವಿಮಾತು ಹೇಳಿದರು.

Highslide for Wordpress Plugin