‘ಸ್ವಾಸ್ಥ್ಯ’ – ಶಾಲಾ ಯೋಗ ಚಟುವಟಿಕಾ ಸಂಘ
‘ಯೋಗವು ಕೇವಲ ಆಸನಗಳಿಗೆ ಸೀಮಿತವಾಗದೆ ಮನಸ್ಸಿನ ಸುಸ್ಥಿತಿಗೆ ಸಹಾಯಕ’- ವಸಂತ ಸುವರ್ಣ
ವಿಶ್ವಯೋಗ ದಿನಾಚರಣೆಯ ಪ್ರಯುಕ್ತ ವಿವೇಕಾನಂದ ಕನ್ನಡ ಮಾಧ್ಯಮ ಶಾಲೆಯಲ್ಲಿ ‘ಸ್ವಾಸ್ಥ್ಯ’ ಶಾಲಾ ಯೋಗ ಚಟುವಟಿಕಾ ಸಂಘ ಇದರ ವತಿಯಿಂದ ನಡೆದ ಕಾರ್ಯಕ್ರಮದಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದ ಶಾಲಾ ಆಡಳಿತ ಮಂಡಳಿ ಸಂಚಾಲPರಾದ ಶ್ರೀ ವಸಂತ ಸುವರ್ಣ ಅವರು ‘ಮನಸ್ಸು, ಬುದ್ಧಿ ಮತ್ತು ಶರೀರದ ನಡುವೆ ಐಕ್ಯತೆ ಸಾಧಿಸುವ ಯೋಗ ವಿಜ್ಞಾನವು ನಾವು ನಮ್ಮೊಳಗೆ ಮತ್ತು ಪ್ರಕೃತಿಯೊಡನೆ ಒಂದಾಗಿ ಕಾಣುವುದಕ್ಕೆ ಸಹಕಾರಿಯಾಗಿದೆ. ಆ ಮೂಲಕ ಯೋಗವು ಕೇವಲ ಆಸನಗಳಿಗೆ ಸೀಮಿತವಾಗದೆ ಮನಸ್ಸಿನ ಸುಸ್ಥಿತಿಗೆ ಸಹಾಯಕ’ ಎಂದರು.
ನಂತರ ಪೂರ್ವಪ್ರಾಥಮಿಕದಿಂದ 10ನೇ ತರಗತಿವರೆಗಿನ ಮಕ್ಕಳು ಪ್ರಾಣಾಯಾಮ, ಸರಳ ವ್ಯಾಯಾಮ, ಆಸನಗಳ ಅಭ್ಯಾಸ ಮಾಡಿದರು. ಶಾಲಾ ಶಿಕ್ಷಕರಾದ ರಂಗಪ್ಪ ಶ್ರೀಮಾನ್ ಇವರು ಧನ್ಯವಾದ ಸಮರ್ಪಣೆ ಮಾಡಿ, ಚಂದ್ರಶೇಖರ್ ಶ್ರೀಮಾನ್ ಕಾರ್ಯಕ್ರಮ ನಿರೂಪಿಸಿದರು.