ಪರಿಸರ ದಿನಾಚರಣಾ ಕಾರ್ಯಕ್ರಮಗಳು

ವಿದ್ಯಾರ್ಥಿ ದಿಶೆಯಿಂದಲೇ ಪರಿಸರ ಸಂರಕ್ಷಣೆಗೆ ನಿರಂತರ ಕೆಲಸವಾಗಬೇಕು.- ಶ್ರೀ ಲೋಕೇಶ್ ಎಸ್.ಆರ್
                                                                                                      ಕ್ಷೇತ್ರ ಶಿಕ್ಷಣಾಧಿಕಾರಿಗಳು, ಪುತ್ತೂರು

ವಿಜಯ ಕರ್ನಾಟಕ ಮತ್ತು ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಪ್ರಸ್ತುತ ಪಡಿಸುವ ವಿಶ್ವ ಪರಿಸರದ ದಿನಾಚರಣೆಯ ಅಂಗವಾಗಿ ವಿವೇಕಾನಂದ ಕನ್ನಡ ಶಾಲೆಯಲ್ಲಿ ‘ಚಿತ್ರಕಲಾ ಸ್ಪರ್ಧೆ’ ಆಯೋಜನೆಗೊಂಡಿತು. ಕಾರ್ಯಕ್ರಮದ ಉದ್ಫಾಟನೆ ನೆರವೇರಿಸಿದ ತಾಲೂಕು ಕ್ಷೇತ್ರ ಶಿಕ್ಷಣಾಧಿಕಾರಿಗಳು ‘ ಮನೆಗೊಂದು ಮರ ಊರಿಗೊಂದು ವನ’ ಪರಿಕಲ್ಪನೆಯ ಭಾರತೀಯ ಜೀವನ ಪದ್ಧತಿಗೆ ನಾವಿಂದು ಮರಳಬೇಕಾದ ಅಗತ್ಯತೆಯನ್ನು ತಿಳಿಸಿದರು. ಅಭ್ಯಾಗತರಾಗಿ ವಲಯ ಅರಣ್ಯಾಧಿಕಾರಿಗಳಾದ ಶ್ರೀ ಕಿರಣ್ ಬಿ.ಎಂ ಅವರು ‘ಗಿಡ ನೆಡುವ ಆಚರಣೆಗೆ ಇಂದಿನ ಸೀಮಿತವಾಗದೆ, ಅದನ್ನು ಬೆಳೆಸಿ ಮುಂದಿನ ಪೀಳಿಗೆಗೆ ದಾಟಿಸುವ ಮಹತ್ತರ ಜವಾಬ್ದಾರಿಯ ಬಗ್ಗೆ ತಿಳಿಸಿದರು’.

     

ಅನಂತರ ಶಾಲಾ ಮಕ್ಕಳು ತಮ್ಮ ಮನೆಗಳಲ್ಲಿ ನೆಟ್ಟು ತಂದಿದ್ದ ಔಷಧೀಯ ಸಸಿಗಳನ್ನು ಸ್ವೀಕರಿಸಿ ಮಕ್ಕಳ ಆಸಕ್ತಿಗೆ ಮೆಚ್ಚುಗೆ ವ್ಯಕ್ತಪಡಿಸಿದರು. ಶಾಲಾ ಮುಖ್ಯಗುರುಗಳಾದ ಶ್ರೀಮತಿ ಆಶಾಬೆಳ್ಳಾರೆ ಸಭಾಧ್ಯಕ್ಷತೆ ವಹಿಸಿ ವಿಭಿನ್ನ ಕ್ಷೇತ್ರಗಳೊಂದಿಗಿನ ಸಹಸಂಬಂಧ ಮಕ್ಕಳ ವೈವಿಧ್ಯಮಯ ಕಲಿಕೆಗೆ ಸಹಕಾರಿಯಾಗುತ್ತಿದೆ ಎಂದರು. ವಿಜಯ ಕರ್ನಾಟಕದ ಜಿಲ್ಲಾ ವರದಿಗಾರರಾಗಿರುವ ಶ್ರೀ ಸುಧಾಕರ ಸುವರ್ಣ ಇವರು ಪ್ರಾಸ್ತಾವಿಕ ಮಾತುಗಳೊಂದಿಗೆ ಉಪಸ್ಥಿತರನ್ನು ಸ್ವಾಗತಿಸಿದರು.

    

ವಿಜಯ ಕರ್ನಾಟಕದ ವರದಿಗಾರರಾದ ಶ್ರೀ ರವೀಂದ್ರ ದೇರ್ಲ, ಶ್ರೀ ಧನುಷ್ ಕಲ್ಲಡ್ಕ, ಶ್ರೀ ಕುಮಾರ್ ಕಲ್ಲಾರೆ ಉಪಸ್ಥಿತರಿದ್ದು ಕಾರ್ಯಕ್ರಮ ಆಯೋಜನೆಯಲ್ಲಿ ಸಹಕರಿಸಿದರು. ಶಾಲಾ ಆಯ್ದ ವಿದ್ಯಾರ್ಥಿಗಳಿಗೆ ಚಿತ್ರಕಲಾ ಸ್ಪರ್ಧೆ ಏರ್ಪಡಿಸಲಾಯಿತು.

Highslide for Wordpress Plugin